Breaking News

ಚಮಕೇರಿ ಹನುಮ ದೇಗುಲದಲ್ಲಿ 3 ಕೆಜಿ ಬೆಳ್ಳಿ ಕಳವು

Spread the love

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಹನುಮ ದೇವಸ್ಥಾನದ ಗರ್ಭ ಗುಡಿ ಬಾಗಿಲು ಕತ್ತರಿಸಿ, ಸುಮಾರು 7 ಲಕ್ಷ ರೂ. ಮೊತ್ತದ 3 ಕೆಜಿ 750 ಗ್ರಾಂ ಬೆಳ್ಳಿ ಮೂರ್ತಿ, ಗದೆ ಹಾಗೂ 5 ಗುಂಜಿ ಬಂಗಾರ ಆಭರಣ ದೋಚಿ ಪರಾರಿಯಾಗಿದ್ದಾರೆ.
1.5 ಕೆಜಿ ತೂಕದ ಬೆಳ್ಳಿ ಮುಖ, 1.25 ಕೆಜಿ ತೂಕದ ಬೆಳ್ಳಿ ಕುದುರೆ ಮುಖ, 1 ಕೆಜಿ ತೂಕದ ಬೆಳ್ಳಿ ಗದೆ ಹಾಗೂ 5 ಗುಂಜಿ ಚಿನ್ನದ ಆಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಅಲ್ಲಿಯೇ ಇದ್ದ ಬಂಗಾರ ವಿಗ್ರಹ, ನಗದು ಹಾಗೂ ಇನ್ನೂ ಕೆಲ ಆಭರಣಗಳು ಸುರಕ್ಷಿತವಾಗಿವೆ.
ಐಗಳಿ ಪಿಎಸ್‌ಐ ಚಂದ್ರಶೇಖರ ಸಾಗನೂರ, ಪ್ರೊಬೇಷನರಿ ಪಿಎಸ್‌ಐ ಆರ್ೀ, ಎಎಸ್‌ಐ ಅರ್ಜುನ ಬಾಡಗಿ, ಸಿಬ್ಬಂದಿ ಧರ್ಮೆಂದ್ರ ಶಾನವಾಡ, ಸಲೀಂ ಶೇಖ್, ಶ್ವಾನದಳ, ಬೆರಳಚ್ಚು ತಂಡ, ಶೋಕೋ ತಂಡದವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಸ್ಥಾನದಲ್ಲಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ, ಅಂಗಡಿ, ಮಳಿಗೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಸೂಚಿಸಿದರು.

Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ