Breaking News

ಬೇರೆ ಯಾವ ತೊಂದರೆಯೂ ಇಲ್ಲ, ಉಸಿರಾಟದ ಸಮಸ್ಯೆ ಬಗೆಹರಿಯಬೇಕು: ಪತ್ನಿ ಬಗ್ಗೆ ಹೆಚ್‌ಡಿಡಿ ಮಾತು

Spread the love

ಬೆಂಗಳೂರು: ಪತ್ನಿ ಚೆನ್ನಮ್ಮ ಅವರಿಗೆ ಬೇರೆ ಯಾವ ತೊಂದರೆಯೂ ಇಲ್ಲ, ಉಸಿರಾಟದ ಸಮಸ್ಯೆ ಇದೆ. ಅದೊಂದು ಬಗೆಹರಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು  ಹೇಳಿದ್ದಾರೆ.

ಪತ್ನಿ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿದರು. ಈ ವೇಳೆ, ಉಸಿರಾಟದ ಸಮಸ್ಯೆ ಇದೆ ಎಂದು ಬುಧವಾರ (ಜು.15) ಆಸ್ಪತ್ರೆಗೆ ದಾಖಲಿಸಿದ್ದೆವು. ಮೊನ್ನೆ‌ ನಿನ್ನೆ ಇವತ್ತು ಅವರನ್ನು ವಿಚಾರಿಸಿದ್ದೇನೆ.

ಅವರ ಹಾರ್ಟ್, ಕಿಡ್ನಿ ಎಲ್ಲಾ ಸರಿಯಾಗಿದೆ. ಲಂಗ್ಸ್ ಸಮಸ್ಯೆ ಇದೆ. ಉಸಿರಟಾದ ಸಮಸ್ಯೆ ಒಂದು ಬಗೆಹರಿಯಬೇಕು. ಬೇರೆ ಯಾವುದೇ ತೊಂದರೆ ಇಲ್ಲ. ತಜ್ಞರು ಚಿಕಿತ್ಸೆ ಕೊಡುತ್ತಿದ್ದಾರೆ. ತಕ್ಷಣ ಉಸಿರಾಟ ಸಮಸ್ಯೆ ಬಗೆ ಹರಿಯಲ್ಲಎಂದು ವೈದ್ಯರು ಹೇಳಿದ್ದಾರೆ.

ನಿಧಾನವಾಗಿ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ವೈದ್ಯರು ಕೈ ಮೀರಿ ಕೆಲಸ ಮಾಡ್ತಿದ್ದಾರೆ. ನಮ್ಮ ಜೊತೆ ಅಭಿಮಾನಿಗಳು, ಕುಟುಂಬದವರು, ವೈದ್ಯರು ಎಲ್ಲರೂ ಇದ್ದಾರೆ. Mostly She may Recover ಎಂದು ಅವರು ಹೇಳಿದ್ದಾರೆ.


Spread the love

About Laxminews 24x7

Check Also

ದ. ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ; ಜು.18 ರಂದು ಶಾಲಾ – ಕಾಲೇಜುಗಳಿಗೆ ರಜೆ

Spread the loveಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ (ಜುಲೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ