“ನಾನು ಮತ್ತು ವಿಜಯ್ ಇಬ್ಬರೂ ಮನಸಾರೆ ಪ್ರೀತಿಸಿದ್ದೇವೆ, ಆದ್ರೆ ಅವರು ಮದುವೆಯಾಗಿ ಮಕ್ಕಳು ಇರೋದ್ರಿಂದ ಅದನ್ನ ತೋರಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ನಮ್ಮಿಬ್ಬರ ಮಧ್ಯೆ ಪ್ರೀತಿಯ ಸಂಬಂಧ ಇದೆ, ನಾವು ಗಂಡ ಹೆಂಡತಿಯಂತೆ ಇದ್ದೇವೆ, ನಮಗೆ ಮಗು ಒಂದಾಗಿಲ್ಲ ಅಷ್ಟೇ” ಅನ್ನೋ ತರಹದ ಶಾಕಿಂಗ್ ಹೇಳಿಕೆಗಳು ಹರಿದಾಡ್ತಿವೆ. ಜನಗಳು ತಪ್ಪಾಗಿ ತಿಳಿದುಕೊಂಡ್ರೆ ಕಷ್ಟ ಅನ್ನೋ ಕಾರಣಕ್ಕೆ ಈ ವಿಷಯವನ್ನ ಧೈರ್ಯವಾಗಿ ಒಪ್ಪಿಕೊಂಡಿದ್ದಾರೆ ಅಂತ ಸುದ್ದಿಯಾಗ್ತಿದೆ. ದಳಪತಿ ವಿಜಯ್ ಈಗಷ್ಟೇ ರಾಜಕೀಯದಲ್ಲಿ 🏛️ ದೊಡ್ಡ …
Read More »Yearly Archives: 2026
ಕು. ನೈರಾ ಕೊಣ್ಣೂರ ಅವರಿಗೆ ಯೋಗ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ
ಶ್ರೀ ವಿವೇಕಾನಂದ ಕೇಂದ್ರದಲ್ಲಿ ಯೋಗಾಭ್ಯಾಸ ಮಾಡುತ್ತಿರುವ 6 ವರ್ಷದ ಬಾಲಕಿ ಕು. ನೈರಾ ಕೊಣ್ಣೂರ ಹಾಗೂ ಕು ಪೂರ್ವಿ ಗುಡಸಿ ಮೂರು ವರ್ಷಗಳಿಂದ ಯೋಗಾಭ್ಯಾಸ ಮಾಡುವುದರ ಜೊತೆಯಲ್ಲಿ ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮತ್ತು ಕಠಿಣ ಆಸನಗಳನ್ನು ಮಾಡುವುದನ್ನು ಗಮನಿಸಿ ಅವರಿಗೆ ಪ್ರತಿಫಲ ಫೌಂಡೇಶನ (ರಿ) ಧಾರವಾಡ ಇವರಿಂದ 09/05/2026 ಶನಿವಾರದಂದು, ಧಾರವಾಡದ ಆಲೂರು ವೆಂಕಟರಾವ ಸಭಾ ಭವನದಲ್ಲಿ ಹಮ್ಮಿಕೊಂಡ ಪ್ರಥಮ ಕನ್ನಡ ಸಾಹಿತ್ಯ …
Read More »ಕಿಂಗ್ ಕೊಹ್ಲಿ ಜೊತೆ ಸಿದ್ದಾಪುರದ ಪ್ರತಿಭೆ ಮಿಂಚಿಂಗ್: ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಮಲೆನಾಡಿನ ನಾಗರಾಜ ಹೆಗಡೆ
ಸಿದ್ದಾಪುರ:ಅಂತರಾಷ್ಟ್ರೀಯ ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಬಹುದೊಡ್ಡ ಕನಸು. ಈ ಮಹಾನ್ ಸಾಧನೆಯನ್ನು ಮಾಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಮಲೆನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ. ಮಕ್ಕಿಗದ್ದೆ ಮೂಲದವರಾದ ನಾಗರಾಜ ಹೆಗಡೆ, ಪ್ರಸ್ತುತ ಸಿದ್ದಾಪುರದ ವಿದ್ಯಾಗಿರಿಯಲ್ಲಿ ವಾಸವಿರುವ ಖ್ಯಾತ ಶಿಕ್ಷಕ ದಂಪತಿಗಳಾದ ಜಿ.ಜಿ. ಹೆಗಡೆ ಮತ್ತು ರೂಪಾ ಹೆಬ್ಬಾರ ಅವರ ಪುತ್ರ. ಬಾಲ್ಯದಿಂದಲೇ ಕ್ರೀಡೆಯಲ್ಲಿ ಅತೀವ ಆಸಕ್ತಿ …
Read More »ಗೋಕಾಕ ನಗರದ ಹೈಸ್ಕೂಲ ರಸ್ತೆಯಲ್ಲಿ (ಕಿಲ್ಲಾ ಹತ್ತಿರ) ನಿರ್ಮಾಣ ಮಾಡಿದ ಹೊಸ ಬ್ರಿಜ್ ಮೇಲೆ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸ್ಥಳಿಯರಿಂದ ಮನವಿ
ಗೋಕಾಕ ನಗರದ ಹೈಸ್ಕೂಲ ರಸ್ತೆಯಲ್ಲಿ (ಕಿಲ್ಲಾ ಹತ್ತಿರ) ನಿರ್ಮಾಣ ಮಾಡಿದ ಹೊಸ ಬ್ರಿಜ್ ಮೇಲೆ ತಿಂಗಳಾಪೂರ ಬೆಣ್ಣೆ, ಬಂಗಲೇ, ಶಿಂಗಳಾಪೂರ ಹಾಗೂ ಲೋಳಸೂರ ಗ್ರಾಮಕ್ಕೆ ನಿತ್ಯ ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಅಲ್ಲದೇ ಗೋಕಾಕ ನಗರದ ಸಾರ್ವಜನಿಕರು ವಾಯುವಿಹಾರಕ್ಕೆ ಅಂತಾ ಮುಂಜಾನೆ ಮತ್ತು ಸಾಯಂಕಾಲ, ರಾತ್ರಿ ಸದರಿ ಬ್ರಿಜ್ ಮೇಲೆ ಹೋಗಿ ಬರುವುದು ಮಾಡುತ್ತಾ ಇರುತ್ತಾರೆ. ಸದರಿ ಬ್ರಿಜ್ ನಮಗೆಲ್ಲ ಅತ್ಯಂತ ಉಪಯೋಗಯುಕ್ತವಾಗಿದ್ದು ಇರುತ್ತದೆ. ವಸ್ತುಸ್ಥಿತಿ ಹೀಗಿರಲಿಕ್ಕಾಗಿ. ಕೆಲವೊಂದು ಕಿಡಿಗೇಡಿಗಳು, ಸದರಿ ಟ್ರಿಜ್ …
Read More »ಲವ್ವರ್‌ಗಾಗಿ ಪತ್ನಿಗೆ ಡಿವೋರ್ಸ್ – ಇತ್ತ ಪತಿ ಬಿಟ್ಟು ಬರಲು ಒಪ್ಪದ ಪ್ರಿಯತಮೆಗೆ ಬೆಂಕಿಯಿಟ್ಟು ಕೊಲೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಾರಿನಲ್ಲೇ ಮಹಿಳೆ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತಿಯನ್ನು ಬಿಟ್ಟು ಬರಲು ಒಪ್ಪದಿದ್ದಕ್ಕೆ ಪ್ರಿಯತಮೆಯನ್ನು ಕಾರಿನಲ್ಲಿ ಕೊಲೆ ಮಾಡಿ ಅದಕ್ಕೆ ಬೆಂಕಿ ಹಚ್ಚಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ. ಪ್ರಿಯಕರ ರಾಮಾಂಜಿನಪ್ಪ ಪ್ರಿಯತಮೆ ಸುಜಾತಳನ್ನು (35) ಕಾರಿನಲ್ಲಿ ಕೊಲೆ ಮಾಡಿ, ನಂತರ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಸುಜಾತಾ ದೇವನಹಳ್ಳಿ ಮೂಲದವರು ಎನ್ನಲಾಗಿದೆ. ಮೃತ ಸುಜಾತಾ …
Read More »ವೃದ್ಧನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಡ್ಯಾನ್ಸ್ – ಪುಡಿ ರೌಡಿಯ ವಿಕೃತಿ ಕ್ಯಾಮೆರಾದಲ್ಲಿ ಸೆರೆ
ಹಾಸನ: ಪುಡಿ ರೌಡಿಯೊಬ್ಬ ಕುಡಿದು ಬಂದು ವೃದ್ಧನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾಸನದ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ತಮ್ಮೇಗೌಡ (68) ಎಂದು ಗುರುತಿಸಲಾಗಿದೆ. ಬೋರೇಗೌಡ ಅಲಿಯಾಸ್ ಲೋಕೇಶ್ (49) ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿದ ಪುಡಿ ರೌಡಿ ಎಂದು ಗೊತ್ತಾಗಿದೆ. ತಮ್ಮೇಗೌಡ ವ್ಯಾಪಾರ ಮಾಡಲು ತಮ್ಮ ತೋಟದಲ್ಲಿ ಎಳನೀರು ಕಡೆವಿಕೊಂಡು ಪತ್ನಿಯೊಂದಿಗೆ ಬರುತ್ತಿದ್ದರು. ಈ ವೇಳೆ ಎದುರಾದ ಬೋರೇಗೌಡ ಏಕಾಏಕಿ ಮಚ್ಚನ್ನು ಉಲ್ಟಾ ಮಾಡಿಕೊಂಡು …
Read More »ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಮಕ್ಕಳಿಂದ ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ!
ಮಡಿಕೇರಿ: ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಆಟೋ ಚಾಲಕನೋರ್ವನ ಮೇಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಪುತ್ರರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ಆಟೋ ಚಾಲಕ, ಝಕರಿ ಎಂಬಾತನ ಸ್ಥಿತಿ ಗಂಭೀರವಾಗಿದೆ. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಎಂಬುವವರ ಪುತ್ರರು ಆಟೋ ಚಾಲಕನನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಚರಂಡಿಯಲ್ಲಿ ಬಿದ್ದಿದ್ದ ಚಾಲಕನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …
Read More »ಹಳೇ ವೈಷಮ್ಯ – ಮೂವರ ಮೇಲೆ ತಲ್ವಾರ್ ದಾಳಿ
ಬೆಳಗಾವಿ: ಇಲ್ಲಿನ ಅಮನ್ ನಗರದಲ್ಲಿ ಮೂವರು ಯುವಕರ ಮೇಲೆ ದುಷ್ಕರ್ಮಿಗಳು ತಲ್ವಾರ್ ದಾಳಿ ನಡೆಸಿದ್ದಾರೆ. ಹಳೇ ವೈಷಮ್ಯ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಗೊಳಗಾದವರನ್ನು ನಗರದ ವಲಿ ಶೇಖ್, ಇಮಾಮ್ ಶೇಖ್ ಮತ್ತು ಮಜೀದ್ ಶೇಖ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ಕುಟುಂಬಸ್ಥರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …
Read More »ತಮಿಳುನಾಡು ಗೆದ್ದ ಟಿವಿಕೆಗೆ ವಿಶ್ ಮಾಡಿದ ಮೋದಿ, ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿದ ವಿಜಯ್
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಟಿವಿಕೆಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಟಿವಿಕೆ ಮುಖ್ಯಸ್ಥ ವಿಜಯ್ ಧನ್ಯವಾದ ಅರ್ಪಿಸಿದ್ದಾರೆ. ದಶಕಗಳಿಂದ ಎಐಎಡಿಎಂಕೆ ಮತ್ತು ಡಿಎಂಕೆ ಆಡಳಿತಕ್ಕೆ ಒಳಪಟ್ಟಿದ್ದ ತಮಿಳುನಾಡು ರಾಜಕೀಯದಲ್ಲಿ ವಿಜಯ್ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಜನಾದೇಶ ನಿನ್ನೆ ಹೊರಬಿದ್ದಿದ್ದು, ಟಿವಿಕೆ ಭರ್ಜರಿ ಗೆಲುವು ದಾಖಲಿಸಿದೆ. ‘ಮಾನ್ಯ ಪ್ರಧಾನಿ ನರೇಂದ್ರ ಮೋದಿ …
Read More »ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ರೆ ವಜಾಗೊಳಿಸಿ: ಹಿಮಂತ ಶರ್ಮಾ ಕಿಡಿ
ದಿಸ್ಪುರ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಅವರನ್ನು ವಜಾಗೊಳಿಸಿ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಂಗಾಳವು ಅವರ ಹಲವು ಲೋಪಗಳ ಹೊರತಾಗಿಯೂ ಅವರನ್ನು ಬಹಳ ಸಮಯದಿಂದ ಸಹಿಸಿಕೊಂಡಿದೆ. ಅವರು ರಾಜೀನಾಮೆ ನೀಡದಿದ್ದರೆ, ವಜಾಗೊಳಿಸಿ. ದೇಶವು ಅವರ ಇಚ್ಛೆಯಂತೆ ನಡೆಯುವುದಿಲ್ಲ. ರಾಜ್ಯಪಾಲರು ಒಂದು ನಿರ್ದಿಷ್ಟ ಅವಧಿಯವರೆಗೆ ಕಾಯುತ್ತಾರೆ. ನಂತರ ಅವರನ್ನು ವಜಾಗೊಳಿಸಲಾಗುತ್ತದೆ. ಅದು ತುಂಬಾ ಸರಳ ಎಂದು ಶರ್ಮಾ ಮಾತನಾಡಿದ್ದಾರೆ. ಚುನಾವಣಾ …
Read More »
Laxmi News 24×7