ಬೆಂಗಳೂರು: ಬರದಿಂದ ಬಳಲುತ್ತಿರುವ ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ಎದುರಾಗಿದೆ. ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ದೆಹಲಿಯಲ್ಲಿಂದು ನಡೆಸಿದ ಸಭೆಯ ಬಳಿಕ, ನಿತ್ಯ 3,000 ಕ್ಯೂಸೆಕ್ನಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ಕಳೆದ ಅಕ್ಟೋಬರ್ 23ರಿಂದ ಕರ್ನಾಟಕವು ಕಾವೇರಿ ನದಿ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ …
Read More »Daily Archives: ನವೆಂಬರ್ 7, 2026
ನೀನು ಗಂಡ್ಸೇ ಅಲ್ಲ ಅಂತಾ ಹೆಂಡ್ತಿ ಬೈತಿದ್ರು – ಡೆಡ್ಲಿ ಮರ್ಡರ್ ಆರೋಪಿಯ ರಹಸ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಬೆಂಗಳೂರು: ಹಂತಕ ಇಂದುಶೇಖರ್ ತನ್ನನ್ನ ಪತ್ರಕರ್ತ ಅಂತಾ ಬಿಂಬಿಸಿಕೊಂಡಿದ್ದ. ಆದ್ರೆ ಮನೆಯಲ್ಲಿ ಗಂಡ – ಹೆಂಡತಿ ನಡುವೆ ಜಗಳ ಆಗುತ್ತಲೇ ಇತ್ತು. ನೀನು ಗಂಡ್ಸೇ ಅಲ್ಲಾ ಅಂತಾ ಹೆಂಡ್ತಿ ಬೈಯ್ತಾ ಇದ್ಳು ಎಂದು ಸ್ಥಳೀಯ ನಿವಾಸಿ ಮಾದೇಶ್ ತಿಳಿಸಿದ್ದಾರೆ. ಹೌದು. ಬೆಚ್ಚಿಬೀಳಿಸುವಂತ ಹತ್ಯಾಕಾಂಡ ಬೆಂಗಳೂರಿನಲ್ಲಿ ನಡೆದಿದೆ. ಕ್ಯಾಬ್ ಡ್ರೈವರ್ ಒಂದೇ ಕುಟುಂಬದ 7 ಮಂದಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಮಧ್ಯೆ ಸ್ಥಳೀಯ ನಿವಾಸಿಯೊಬ್ಬರು …
Read More »ಬಾಗಲಕೋಟೆಯಲ್ಲಿ ಜುವೆಲ್ಲರಿ ಬೀಗ ಮುರಿದು 2 ಕೋಟಿ ಮೌಲ್ಯದ ಬೆಳ್ಳಿ, ಚಿನ್ನಾಭರಣ ದರೋಡೆ
ಬಾಗಲಕೋಟೆ: ನಗರದ ನವನಗರ ಸೆಕ್ಟರ್ 31 ರಲ್ಲಿರುವ ಪ್ರಸಿದ್ಧ ‘ಓಂ ಜ್ಯೂವೆಲ್ಲರ್ಸ್’ ಅಂಗಡಿಯಲ್ಲಿ ಮಧ್ಯರಾತ್ರಿ ಸಿನಿಮೀಯ ಮಾದರಿಯಲ್ಲಿ ಕನ್ನ ಕೊರೆದಿರುವ ಖದೀಮರು, ಸುಮಾರು 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ದಿಗಂಬರ್ ಕುರಡೇಕಾರ್ ಅವರಿಗೆ ಸೇರಿದ ಈ ಜ್ಯೂವೆಲ್ಲರಿ ಅಂಗಡಿಯನ್ನು ಟಾರ್ಗೆಟ್ ಮಾಡಿದ್ದ ಇಬ್ಬರು ಕಳ್ಳರು, ಕಾರಿನಲ್ಲಿ ಬಂದು ಅಂಗಡಿಯ ಮುಂಭಾಗ ನಿಲ್ಲಿಸಿದ್ದಾರೆ. ನಂತರ ಗ್ಯಾಸ್ ಕಟ್ಟರ್ …
Read More »ಹಾಸ್ಟೆಲ್ನ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು
ಕಲಬುರಗಿ: ಹಾಸ್ಟೆಲ್ನ ನಾಲ್ಕನೇ ಮಹಡಿ ಮೇಲಿಂದ ಬಿದ್ದು ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಕಲಬುರಗಿ (kalaburagi) ನಗರದ ರಾಜಾಪುರ ಬಡಾವಣೆ ಬಳಿಯ ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದಿದೆ. ಮುಜಾಹೀದ್ ಪಟೇಲ್ (25) ಮೃತ ವಿದ್ಯಾರ್ಥಿ. ಈತ ಕಲಬುರಗಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು ತಡರಾತ್ರಿ ಹಾಸ್ಟೆಲ್ ಮೇಲಿಂದ ಬಿದ್ದಿದ್ದಾನೆ. ಇನ್ನು ಮೊನ್ನೆಯಷ್ಟೆ ಇದೇ ಹಾಸ್ಟೆಲ್ನಲ್ಲಿ ಓರ್ವ ವಿದ್ಯಾರ್ಥಿಯನ್ನ ಬೆತ್ತಲುಗೊಳಿಸಿ ಮಾರಣಾಂತಿಕವಾಗಿ ಹಲ್ಲೆಗೊಳಿಸಲಾಗಿತ್ತು. ಆ ಘಟನೆ ಮಾಸುವ ಮುನ್ನವೇ …
Read More »ಅಪ್ರಾಪ್ತ ಮಗಳ ಬ್ರೈನ್ ವಾಷ್ ಮಾಡಿದ್ದಾನೆ, 15 – 20 ದಿನದಿಂದ ಒಬ್ಬೋಬ್ಬರೆ ಮಿಸ್ ಆಗಿದ್ದಾರೆ: ಸೀಮಂತ್ ಕುಮಾರ್
ಬೆಂಗಳೂರು: ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸುವಂತ ಹತ್ಯಾಕಾಂಡ ನಡೆದಿದೆ. ಕ್ಯಾಬ್ ಡ್ರೈವರ್ ಒಂದೇ ಕುಟುಂಬದ 7 ಮಂದಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಇಂದುಶೇಖರ್ ರುಬ್ಬುಗುಂಡಿನಿಂದ ಇಡೀ ಕುಟಂಬವನ್ನೇ ಹತ್ಯೆ ಮಾಡಿದ್ದಾನೆ. ಹೆಂಡ್ತಿ, ಹೆಂಡ್ತಿ ತಾಯಿ, ಹೆಂಡ್ತಿಯ ಅಣ್ಣಂದಿರು, ಅತ್ತಿಗೆಯರನ್ನ ಇಂದುಶೇಖರ್ ಕೊಲೆಗೈದಿದ್ದಾನೆ. ಈ ಪ್ರಕರಣದ ಪ್ರಾಥಮಿಕ ತನಿಖೆಯ ಬಗ್ಗೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ರಾಜಾಜೀನಗರ ಪೊಲೀಸ್ ಠಾಣೆಗೆ ಭೇಟಿ …
Read More »7 ಜನರ ಕೊಲೆಗೆ ಅಪ್ರಾಪ್ತ ಮಗಳ ಸಾಥ್ – ಹಂತಕನಿಂದ ಜಸ್ಟ್ಮಿಸ್ ಆದ ಬಾಲಕ ಹೇಳಿದ್ದೇನು?
ಬೆಂಗಳೂರು: ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ. ಕೊಲೆಗೈದ ಹಂತಕನ ಟ್ರೇಸಿಂಗ್ ವೇಳೆ ಕಾರಿನಲ್ಲಿ ಸಿಕ್ಕ ಬಾಲಕ, ಆರೋಪಿಯ ಮರ್ಡರ್ ಪ್ಲ್ಯಾನ್ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಏಳು ಜನರ ಮರ್ಡರ್ ಮಾಡಿರುವ ಆರೋಪಿ ಇಂದುಶೇಖರ್, ಹೆಂಡತಿ ಬೈಯುತ್ತಿದ್ದಳು, ಗಲಾಟೆ ಮಾಡುತ್ತಿದ್ದಳು ಎಂಬ ಸಿಟ್ಟಿಗೆ ಪತ್ನಿ ಜೊತೆ ಅತ್ತೆ, ಪತ್ನಿಯ ಇಬ್ಬರು ಅಣ್ಣಂದಿರು, ಇಬ್ಬರು ಅತ್ತಿಗೆ ಹಾಗೂ 7 …
Read More »ದೀಪಾವಳಿ ಹಬ್ಬಕ್ಕೆ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು
ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು ಸಂಚರಿಸಲಿವೆ. ದೀಪಾವಳಿ ಹಬ್ಬದ ವೇಳೆ ರಾಜ್ಯದ ಜನತೆಗೆ ಊರುಗಳಿಗೆ ತೆರಳಲು ಅನುಕೂಲವಾಗಲೆಂದು ರಾಜಧಾನಿ ಬೆಂಗಳೂರಿನಿಂದ ಬೆಳಗಾವಿವರೆಗೆ ವಿಶೇಷ ರೈಲು ಓಡಿಸುವಂತೆ ಸಚಿವ ಪ್ರಹ್ಲಾದ್ ಜೋಶಿ ಅವರು ನೈರುತ್ಯ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿದ್ದರು. ಸಚಿವರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ಎರಡು ವಿಶೇಷ ರೈಲು ಸಂಚಾರ ಕಲ್ಪಿಸಿದೆ. ದೀಪಾವಳಿ ಹಬ್ಬದ ವೇಳೆ …
Read More »ಮೆಟ್ರೋ ನಮ್ಮ ಯೋಜನೆ, ನಾವು ಸಾಲ ಮಾಡಿ ಕಟ್ಟಿರೋ ಯೋಜನೆ, ಬಿಜೆಪಿ ಪ್ರಚಾರ ತೆಗೆದುಕೊಳ್ತಿದೆ: ಡಿಕೆಶಿ
ರಾಮನಗರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದು ತಮ್ಮ ಕನಕಪುರ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ರಾತ್ರಿ ರಾಮನಗರ ಕಾರ್ಯಕ್ರಮ ಮುಗಿಸಿ ಕನಕಪುರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ, ಬೆಳಿಗ್ಗೆ ಬೆಂಗಳೂರಿಗೆ ತೆರಳುವ ಮುನ್ನ ಕ್ಷೇತ್ರದ ಜನರ ಅಹವಾಲು ಸ್ವೀಕಾರ ಮಾಡಿದ್ರು. ಮುಂದಿನ ವಾರ ಮತ್ತೆ ಕ್ಷೇತ್ರಕ್ಕೆ ಬಂದು ಸಂಪೂರ್ಣ ಅಹವಾಲುಗಳನ್ನ ಸ್ವೀಕರಿಸುತ್ತೇನೆ ಎಂದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ಮಧ್ಯಾಹ್ನ ನಾನು ದೆಹಲಿಗೆ ತೆರಳುತ್ತಿದ್ದೇನೆ. ಸಂಜೆ ರಾಹುಲ್ …
Read More »ಹೆಂಡ್ತಿ ಮೇಲಿನ ಸಿಟ್ಟಿಗೆ ಬೆಂಗ್ಳೂರಲ್ಲಿ ಏಳು ಮರ್ಡರ್ – ಕೊಲೆಗೈದು ನಂದಿ ಬೆಟ್ಟದಲ್ಲಿ ಮೃತದೇಹ ಎಸೆದಿರುವ ಹಂತಕ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್ವೊಂದು ನಡೆದಿದೆ. ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಶ್ರೀರಾಂಪುರ ನಿವಾಸಿ ಶೇಖರ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಂಪನಿಯೊಂದಕ್ಕೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ಮಾಡಿರೋದು ಒಂದಲ್ಲ.. ಎರಡಲ್ಲ.. ಮೂರಲ್ಲ.. ಬರೋಬ್ಬರಿ ಏಳು ಜನರ ಮರ್ಡರ್. ಹೆಂಡತಿ ಬೈಯುತ್ತಿದ್ದಳು, ಗಲಾಟೆ ಮಾಡುತ್ತಿದ್ದಳು ಎಂಬ ಸಿಟ್ಟಿಗೆ ಪತ್ನಿ …
Read More »ದೀಪಾವಳಿ ಹಬ್ಬದ ಎಫೆಕ್ಟ್; ಬೆಂಗಳೂರಿಂದ ಊರುಗಳತ್ತ ಜನರ ದಂಡು – ಕಿ.ಮೀ.ಗಟ್ಟಲ್ಲೇ ಟ್ರಾಫಿಕ್ ಜಾಮ್
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಹೊರಟಿರುವ ಜನರ ದಂಡು ಹೊರಟಿದೆ. ಪರಿಣಾಮವಾಗಿ ರಸ್ತೆಗಳಲ್ಲಿ ವಾಹನಗಳು ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿವೆ. ತುಮಕೂರು ರಸ್ತೆಯಲ್ಲಿ ವಾಹನಗಳು ಟ್ರಾಫಿಕ್ನಲ್ಲಿ ಸಾಲಾಗಿ ನಿಂತಿವೆ. ಯಶವಂತಪುರ ಫ್ಲೈಓವರ್ನಿಂದಲೇ ಟ್ರಾಫಿಕ್ ಜಾಮ್ ಶುರುವಾಗಿ ಜನರು ಹೈರಾಣಾಗಿದ್ದಾರೆ. ಹೆದ್ದಾರಿಯಲ್ಲಿ ವಾಹನಗಳು ಸ್ಲೋ ಮೂವಿಂಗ್ ಆಗುತ್ತಿವೆ. ಬೆಂಗಳೂರು ಕ್ರಾಸ್ ಮಾಡಲು ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. ಮುಂದಿನ ಕೆಲ ಗಂಟೆಗಳ …
Read More »
Laxmi News 24×7