ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ನಲ್ಲಿ ಶೇ.26ರಿಂದ 31ರಷ್ಟು ಎಥೆನಾಲ್ ಮಿಶ್ರಣ ಆರೋಪಕ್ಕೆ ತೈಲ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಎಥನಾಲ್ ಪ್ರಮಾಣದ ಅಂಕಿಅಂಶಗಳನ್ನು ಪ್ರಶ್ನಿಸಿದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಪ್ರಶ್ನಿಸಿವೆ. ಕರ್ನಾಟಕದಲ್ಲಿ ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ನಿಗದಿತ ಮಾನದಂಡ ಉಲ್ಲಂಘನೆಯಾಗಿಲ್ಲ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಿದ 893 ಇ20 ಪೆಟ್ರೋಲ್ ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಎಲ್ಲ 893 ಮಾದರಿಗಳಲ್ಲೂ ಎಥನಾಲ್ ಪ್ರಮಾಣ ಶೇ.19ರಿಂದ 21ರ ನಡುವೆ ದಾಖಲಾಗಿದೆ. …
Read More »Daily Archives: ನವೆಂಬರ್ 7, 2026
ರಾಷ್ಟ್ರೀಯ ಮಟ್ಟದ ‘ಹ್ಯಾಕ್ಟ್4ಹೈರ್-2026’ ಹ್ಯಾಕಥಾನ್ನಲ್ಲಿ ಎಎಂಬಿಐಟಿ ವಿದ್ಯಾರ್ಥಿಗಳ ತಂಡಕ್ಕೆ ರನ್ನರ್-ಅಪ್ ಗೌರವ
ಬೆಳಗಾವಿ: ಬೆಳಗಾವಿಯ ಅನಂತಶಯನಗಲ್ಲಿಯ ಭರತೇಶ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಎಂಬಿಐಟಿ)ಯ ‘ಟೀಮ್ ಇಂಪ್ಯಾಕ್ಟ್+’ ವಿದ್ಯಾರ್ಥಿಗಳ ತಂಡವು ರಾಷ್ಟ್ರೀಯ ಮಟ್ಟದ ‘ಹ್ಯಾಕ್ಟ್4ಹೈರ್-2026’ ಹ್ಯಾಕಥಾನ್ನಲ್ಲಿ ದ್ವಿತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದೆ. ಮೈಸೂರಿನ ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿಎಸ್ಇ ವಿಭಾಗದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ವಿಭಾಗದ ವತಿಯಿಂದ ಅಕ್ಟೋಬರ್ 30 ಮತ್ತು 31, 2026ರಂದು ಆಯೋಜಿಸಲಾಗಿದ್ದ ಈ ಪ್ರತಿಷ್ಠಿತ 24 ಗಂಟೆಗಳ ಹ್ಯಾಕಥಾನ್ನಲ್ಲಿ ದೇಶದ ವಿವಿಧ ಭಾಗಗಳಿಂದ …
Read More »“ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ದೇಹವನ್ನು ಗರಗಸದಿಂದ ತುಂಡು ಮಾಡಿದೆ”: ನ್ಯಾಯಾಲಯದಲ್ಲಿ ಪತಿಯ ಸ್ಫೋಟಕ ಹೇಳಿಕೆ
ಪ್ರಗತಿವಾಹಿನಿ ಸುದ್ದಿ: ಪತ್ನಿ ಸಾವಿನ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಆಘಾತ ಮೂಡಿಸಿದೆ. ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಿರುವ ಪತಿ, ಬಳಿಕ ಮೃತದೇಹವನ್ನು ಗರಗಸದಿಂದ ತುಂಡು ಮಾಡಲು ಪ್ರಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಕಸದ ಚೀಲಗಳಲ್ಲಿ ಹಾಕಿ ವಿವಿಧೆಡೆ ಎಸೆದಿರುವುದಾಗಿಯೂ ಹೇಳಿದ್ದಾನೆ. ಆದರೆ, ಪತ್ನಿಯ ಸಾವಿಗೆ ತಾನು ಕಾರಣ ಎಂಬ ಆರೋಪವನ್ನು ನಿರಾಕರಿಸಿದ್ದಾನೆ. ಅಮೆರಿಕದ ವರ್ಜೀನಿಯಾದಲ್ಲಿ ಈ ಘಟನೆ …
Read More »ಗ್ರೀನ್ ಹೈಡ್ರೋಜನ್ ತಂತ್ರಜ್ಞಾನ: ಕೆಎಲ್ಎಸ್ ಜಿಐಟಿಯಲ್ಲಿ ತಜ್ಞರ ಉಪನ್ಯಾಸ
ಬೆಳಗಾವಿ: ಭವಿಷ್ಯದ ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ಮಹತ್ವದ ಪಾತ್ರ ವಹಿಸಲಿರುವ ಗ್ರೀನ್ ಹೈಡ್ರೋಜನ್ ಉತ್ಪಾದನೆ, ಅದರ ತಂತ್ರಜ್ಞಾನ ಹಾಗೂ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೆಎಲ್ಎಸ್ ಗೋಗಟೆ ತಂತ್ರಜ್ಞಾನ ಸಂಸ್ಥೆಯ (ಕೆಎಲ್ಎಸ್ ಜಿಐಟಿ) ರಸಾಯನಶಾಸ್ತ್ರ ವಿಭಾಗದಿಂದ ತಜ್ಞರ ಉಪನ್ಯಾಸ ಆಯೋಜಿಸಲಾಗಿತ್ತು. ರಾಷ್ಟ್ರೀಯ ವಿಜ್ಞಾನ ದಿನದ ಉಪನ್ಯಾಸ ಮಾಲಿಕೆಯ ಭಾಗವಾಗಿ ನವೆಂಬರ್ 6ರಂದು ಬಿ.ಇ. ಮತ್ತು ಬಿ.ಎಸ್ಸಿ (ಆನರ್ಸ್) ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗೋವಾದ ಐಐಟಿಯ ರಾಸಾಯನಿಕ …
Read More »ಸಫಾಯಿ ಕಾರ್ಮಿಕರಿಗೆ ದೀಪಾವಳಿ ಉಡುಗೊರೆ: ಹ್ಯಾಂಪರ್ ವಿತರಣೆ
ಬೆಳಗಾವಿ: ದೀಪಾವಳಿಯ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ದಿ. ಪುಂಡಲಿಕ ರಾಮಚಂದ್ರ ಹಂಗಿರಗೆಕರ ಫೌಂಡೇಶನ್ ಹಾಗೂ ಶ್ರೀ ರಾಮ್ ಇನೋವೇಶನ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ಸ್ವಚ್ಛತಾ ಕಾರ್ಮಿಕರಿಗೆ ದೀಪಾವಳಿ ಉಡುಗೊರೆ ಹ್ಯಾಂಪರ್ಗಳನ್ನು ವಿತರಿಸಲಾಯಿತು. ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಹಗಲಿರುಳು ಶ್ರಮಿಸುವ ಸ್ವಚ್ಛತಾ ಕಾರ್ಮಿಕರ ಸೇವೆಯನ್ನು ಗೌರವಿಸಿ, ಅವರ ಕಾರ್ಯದ ಬಗ್ಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ದೀಪಾವಳಿ ಉಡುಗೊರೆ …
Read More »ಆಸ್ತಿ ಮಾರ್ಗಸೂಚಿ ಮೌಲ್ಯ ಶೇ. 40ರಷ್ಟು ಹೆಚ್ಚಳಕ್ಕೆ ಕ್ರೆಡಾಯ್ ಆಕ್ಷೇಪ
ಬೆಳಗಾವಿ: ನಗರದ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು ಶೇ. 40ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಬೆಳಗಾವಿ ಕ್ರೆಡಾಯ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ವಾಸ್ತವಿಕ ಮಾರುಕಟ್ಟೆ ಪರಿಸ್ಥಿತಿಯನ್ನು ಪರಿಶೀಲಿಸದೆ ಹಾಗೂ ಸಂಬಂಧಪಟ್ಟವರೊಂದಿಗೆ ಸಮರ್ಪಕ ಚರ್ಚೆ ನಡೆಸದೆ ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಸಂಘಟನೆ ಆಕ್ಷೇಪಿಸಿದೆ. ಆಸ್ತಿ ಮಾರ್ಗಸೂಚಿ ಮೌಲ್ಯ ಪರಿಷ್ಕರಣೆ ಸಂಬಂಧ ಕ್ರೆಡಾಯ್ ಸದಸ್ಯರು ತಹಸೀಲ್ದಾರ್ ಹಾಗೂ ಉಪನೋಂದಣಾಧಿಕಾರಿಗಳೊಂದಿಗೆ ಸಭೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈ ವೇಳೆ ಪ್ರಸ್ತಾವಿತ ಶೇ. 40ರಷ್ಟು …
Read More »ಕಬ್ಬು ಬೆಳೆಗಾರರ ಹೋರಾಟಕ್ಕೆ ಮೊದಲ ಹಂತದ ಜಯ; ಗುರ್ಲಾಪುರದಲ್ಲಿ ರೈತರ ಸಂಭ್ರಮಾಚರಣೆ
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಸತತ 12 ದಿನಗಳ ಕಾಲ ನಡೆದ ರೈತರ ಹೋರಾಟಕ್ಕೆ ಮೊದಲ ಹಂತದ ಯಶಸ್ಸು ದೊರೆತ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ವಿಜಯೋತ್ಸವ ಆಚರಿಸಿದರು. ಹೋರಾಟದ ಸ್ಥಳದಲ್ಲಿಯೇ ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚುವ ಮೂಲಕ ರೈತರು ಸಂಭ್ರಮಿಸಿದರು. ಈ ವೇಳೆ ರೈತ ಪರ ಘೋಷಣೆಗಳು ಮೊಳಗಿದವು. ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ …
Read More »ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಡಿಕೆಶಿಯೇ ಮುಖ್ಯಮಂತ್ರಿ*: *ಸತೀಶ್ ಜಾರಕಿಹೊಳಿ ಸ್ಪಷ್ಟನೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆಯಾಗುವ ಪ್ರಶ್ನೆಯೇ ಇಲ್ಲ. ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದೆ. ಹೀಗಾಗಿ ಮತ್ತೊಮ್ಮೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷ ಯಾರಿಗೂ ಪಕ್ಷಕ್ಕಿಂತ ಹೆಚ್ಚಿನದನ್ನು ನೀಡಲು ಸಾಧ್ಯವಿಲ್ಲ ಎಂದು ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಈ ಹಿಂದೆ ತಾವು ಮುಖ್ಯಮಂತ್ರಿಯಾಗದಿದ್ದರೂ …
Read More »
Laxmi News 24×7