Breaking News

Daily Archives: ಅಕ್ಟೋಬರ್ 9, 2026

ಅಡುಗೆ ಎಣ್ಣೆ ಮರುಬಳಕೆ ವಿರುದ್ಧ ಶೀಘ್ರ ಕ್ರಮ: ಯು.ಟಿ.ಖಾದರ್

ತುಮಕೂರು: ಅಡುಗೆ ಎಣ್ಣೆ ಮರುಬಳಕೆ ದಂಧೆಗೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್  ಹೇಳಿದ್ದಾರೆ. ಡಿಹೆಚ್‌ಓ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಟೆಲ್‌ಗಳಲ್ಲಿ ಅಡುಗೆ ಎಣ್ಣೆ ಮರುಬಳಕೆ ದಂಧೆ ನಡೆಯುತ್ತಿದೆ. ಇದನ್ನು ಬ್ಯಾನ್ ಮಾಡುವ ಯೋಚನೆ ಇದೆ. ಎಣ್ಣೆಯನ್ನು ಎಲ್ಲಿ ಖರೀದಿಸುತ್ತಾರೋ ಅಲ್ಲಿಯೇ ನೋಂದಣಿ ಮಾಡಬೇಕಾಗುತ್ತದೆ. ಇದಕ್ಕಾಗಿ ಒಂದು ಆ್ಯಪ್‌ನಲ್ಲಿ ನಮೂದು ಮಾಡುವಂತೆ ಚಿಂತನೆ ನಡೆಸಲಾಗಿದೆ. ಬಳಕೆ ಮಾಡಿದ …

Read More »

ರೇಣುಕಾಸ್ವಾಮಿ ಕೊಲೆ ಕೇಸ್‌ | ಮದ್ವೆಯಾದ ಖುಷಿಯಲ್ಲಿದ್ದ ಚಿಕ್ಕಣ್ಣಗೆ ಶಾಕ್‌ – ಇಬ್ಬರು ನಟರಿಗೆ ಕೋರ್ಟ್ ಸಮನ್ಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ  ಹಾಗೂ ನಟ ಯಶಸ್ ಸೂರ್ಯ ಅವರಿಗೆ 59ನೇ ಸಿಸಿಹೆಚ್ ಕೋರ್ಟ್  ಸಮನ್ಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಇಬ್ಬರು ನಟರು, ಕೊಲೆಗೂ ಮುನ್ನ ಆರೋಪಿ ದರ್ಶನ್  ಭಾಗಿಯಾಗಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆ ಸಾಕ್ಷ್ಯ ಹೇಳಲು ನ್ಯಾಯಾಲಯ ಸಮನ್ಸ್ ನೀಡಿದೆ. ಪ್ರಕರಣದ ವಿಚಾರಣೆಯನ್ನ ನಡೆಸುತ್ತಿರುವ 59ನೇ ಸಿಸಿಹೆಚ್ ಕೋರ್ಟ್, ಅಕ್ಟೋಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ಇಬ್ಬರು ನಟರಿಗೆ ಸಮನ್ಸ್‌ ಜಾರಿಗೊಳಿಸಿದೆ. …

Read More »

SSLC – ದ್ವಿತೀಯ ಪಿಯುಸಿ ಪರೀಕ್ಷೆ – 1, 2 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – ಆಕ್ಷೇಪಣೆಗೆ 15 ದಿನ ಅವಕಾಶ

ಬೆಂಗಳೂರು: ಮುಂಬರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ-1  ಮತ್ತು ಪರೀಕ್ಷೆ 2ರ ತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆಗೊಳಿಸಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟ ಮಾಡಿದ್ದು, ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2 ಪರೀಕ್ಷೆಗಳನ್ನ 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ – 1 …

Read More »

ಕ್ಯಾನ್ಸರ್‌ ಔಷಧಗಳ ಬೆಲೆ 70% ಇಳಿಕೆ ಸಾಧ್ಯತೆ; ಸರ್ಕಾರದ ಮುಂದಿದೆ ಹೊಸ ಪ್ರಸ್ತಾವನೆ!

ನವದೆಹಲಿ: ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಹಲವು ಔಷಧಗಳ  ಬೆಲೆ ಶೇ.70ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ನಿಗದಿತ ವ್ಯಾಪಾರ ಮಾರ್ಜಿನ್‌ಗೆ ಶೇ.30ರ ಮಿತಿ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ಸಾಧ್ಯವಾದರೆ ಕ್ಯಾನ್ಸರ್‌ ಔಷಧಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ನಿಗದಿತ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಬಾರದ  ಕ್ಯಾನ್ಸರ್‌ ಔಷಧಗಳಿಗೆ ಈ ಮಿತಿಯನ್ನ ಅನ್ವಯಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ದುಬಾರಿ ಕ್ಯಾನ್ಸರ್‌ ಔಷಧಗಳನ್ನ ಕೈಗೆಟುಕುವ ದರದಲ್ಲಿ …

Read More »

ಅಮೆರಿಕದಲ್ಲಿನ ಭಾರತೀಯ ಐಟಿ ಕಂಪನಿಗಳಿಗೆ ಶಾಕ್ – ಗ್ರೀನ್‌ಕಾರ್ಡ್‌ ಯೋಜನೆಯಿಂದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸಸ್ಪೆಂಡ್‌

ವಾಷಿಂಗ್ಟನ್: ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸ  ಪಡೆಯುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ, ಅಮೆರಿಕದ ಕಾರ್ಮಿಕ ಇಲಾಖೆ  ಭಾರತೀಯ ಟೆಕ್‌ ದೈತ್ಯ ಕಂಪನಿಗಳಿಗೆ ಶಾಕ್‌ ಕೊಟ್ಟಿದೆ. ಇನ್ಫೋಸಿಸ್ , ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳನ್ನು ಗ್ರೀನ್‌ ಕಾರ್ಡ್‌ ಯೋಜನೆಯಿಂದ ಅಮಾನತುಗೊಳಿಸಿದೆ. ಹೌದು. ಐಟಿ ಹೊರಗುತ್ತಿಗೆ ಕಂಪನಿಗಳನ್ನ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮದಿಂದ  ಅಮಾನತುಗೊಳಿಸಿದೆ. ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್‌ಸಿಎಲ್, ಕ್ಯಾಪ್‌ಜೆಮಿನಿ ಹಾಗೂ …

Read More »

ಗಂಧರ್ವನಾದ್ರೂ ರಾಕ್ಷಸನಂತೆ ವರ್ತಿಸಿದ ಮಹಾಕವಿ – ರಣರಂಗದಲ್ಲಿ ಯಶಸ್‌, ಮಂಜ… ನಿಲ್ಲದ ವಾಕ್ಸಮರ

ಬಿಗ್‌ಬಾಸ್‌ ಕನ್ನಡ 13ರ  ಈ ಸೀಸನ್‌ನಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂಬ ವಿಶೇಷ ಥೀಮ್‌ ನೀಡಿ, ಮನುಷ್ಯನಲ್ಲಿರುವ ಎರಡು ಗುಣಗಳನ್ನು ಹೊರಹಾಕುವ ರೀತಿಯ ಟಾಸ್ಕ್‌ ಕೊಟ್ಟಿದ್ದರು. ಅದರಂತೆ ಗಂಧರ್ವರಾಗಿದ್ದ ಮಂಜ ರಾಕ್ಷಸರ ಆಟವನ್ನೂ ತಾಳಲಾಗದೇ ಅತಿರೇಕಕ್ಕೇರಿ ಮಾತುಗಳನ್ನು ಆಡಿದ್ದಾರೆ. ವಾರದ ಆರಂಭದಲ್ಲಿ ಮಂಜು ನೇತೃತ್ವದ ತಂಡ ರಾಕ್ಷಸರಾಗಿ ಹಾಗೂ ಗಾನವಿ ನೇತೃತ್ವದ ತಂಡ ಗಂಧರ್ವರಾಗಿದ್ದರು. ಗಗನ್‌ ಚಿನ್ನಪ್ಪ, ಪ್ರಶಾಂತ್‌, ಜಗ್ಗಿ, ಸೌಂದರ್ಯ, ಸಂಗೀತಾ ಕೂಡ ರಾಕ್ಷಸರಾಗಿ ಅಬ್ಬರಿಸಿ, ಗಂಧರ್ವ ಲೋಕದಲ್ಲಿದ್ದ …

Read More »

ಆನ್‌ಲೈನ್‌ ಗೇಮ್‌ನಲ್ಲಿ ಹಣ ಹೂಡಿಕೆಗೆ ಸ್ನೇಹಿತರಿಂದ ಕಿರುಕುಳ, ಕೊಲೆ ಬೆದರಿಕೆ – 13ರ ಬಾಲಕ ಆತ್ಮಹತ್ಯೆ

ದಾವಣಗೆರೆ: ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಲು ಸ್ನೇಹಿತರು ನೀಡಿದ ನಿರಂತರ ಕಿರುಕುಳ, ಜೀವ ಬೆದರಿಕೆ ಹಾಗೂ ಹಲ್ಲೆಗೆ ಬೇಸತ್ತು 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾಲೂಕಿನ ಪಾಂಡೊಮಟ್ಟಿ ಗ್ರಾಮದಲ್ಲಿ ನಡೆದಿದೆ. ಮಾಚನಾಯಕನಹಳ್ಳಿಯ ಬಸವ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ 8ನೇ ತರಗತಿ ಓದುತ್ತಿದ್ದ ಮನೋಜ್ ಟಿ.ಆರ್. (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಫ್ರೀ ಫೈರ್ ಗೇಮಿಂಗ್ ಆಪ್‌ನಲ್ಲಿ ಹಣ ಹಾಕುವಂತೆ …

Read More »

ಸಕಲ ಸರ್ಕಾರಿ ಗೌರವಗಳೊಂದಿಗೆ ನಾನಾ ಪಾಟೇಕರ್‌ ಅಂತ್ಯಕ್ರಿಯೆ – ಪುಣೆಯ ಸ್ವಗ್ರಾಮದಲ್ಲಿ ಅಂತಿಮ ವಿಧಿವಿಧಾನ

ಪುಣೆ: ಬಾಲಿವುಡ್‌ ದಿಗ್ಗಜ ನಟ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯನ್ನು ಗುರುವಾರ ಪುಣೆಯ ಗ್ರಾಮೀಣ ಭಾಗದಲ್ಲಿರುವ ಡೊಂಜೆ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು 75 ವರ್ಷದ ನಟ ನಾನಾ ಪಾಟೇಕರ್ ಅವರಿಂದು ಗೋವಾದಲ್ಲಿ ನಿಧನರಾಗಿದ್ದರು. ಬಳಿಕ ಅವರ ಪಾರ್ಥಿವ ಶರೀರವನ್ನ ಅಂತಿಮ ವಿಧಿವಿಧಾನಗಳಿಗಾಗಿ ಅವರ ಸ್ವಗ್ರಾಮಕ್ಕೆ ತರಲಾಯಿತು. ನಾನಾ ಪಾಟೇಕರ್ ಅವರ ನಿಧನಕ್ಕೆ ಇಡೀ ಬಾಲಿವುಡ್‌ ಚಿತ್ರರಂಗವೇ ಕಂಬನಿ ಮಿಡಿಯಿತು. ಅವರೊಂದಿಗೆ ಕೆಲಸ ವಿವಿಧ ಕ್ಷೇತ್ರಗಳಲ್ಲಿ ಜೊತೆಯಾಗಿದ್ದ ನಟರು, …

Read More »

ಬೆಳಗಾವಿಯ ಖಡಕ್ ಅಕ್ಕ-ತಂಗಿ ಏಕಕಾಲಕ್ಕೆ ಬಿಎಸ್ಎಫ್​ಗೆ: ಕುಂದಾನಗರಿ ವೀರ ವನಿತೆಯರಿಗೆ ಸಲಾಂ!

ಬೆಳಗಾವಿ: ಕಠಿಣ ತರಬೇತಿ, ಶಿಸ್ತು ಮತ್ತು ಪರಿಶ್ರಮದ ಮೂಲಕ ಬೆಳಗಾವಿ ಅಕ್ಕ-ತಂಗಿ ಒಂದೇ ಭರ್ತಿಯಲ್ಲೇ ಬಿಎಸ್ಎಫ್‌ಗೆ ಆಯ್ಕೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ದೇಶದ ಗಡಿ ಕಾಯುತ್ತಿದ್ದಾರೆ. ಈ ಮೂಲಕ ಹೆಣ್ಣುಮಕ್ಕಳು ಗಡಿ ಕಾವಲು ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ. ಇದು ಕೇವಲ ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೇ ಇಡೀ ಬೆಳಗಾವಿಗೆ ಹೆಮ್ಮೆಯ ಸಂಗತಿ. ರಜೆಗೆ ಆಗಮಿಸಿದ್ದ ವೇಳೆಈ ಕುರಿತಂತೆ ಸಹೋದರಿಯರು ಮಾತನಾಡಿದ್ದಾರೆ. ಬೆಳಗಾವಿ ಖಡಕ್ ಗಲ್ಲಿಯ ಸ್ವರಾಂಜಲಿ ಜಾಧವ(25) ಮತ್ತು ಗೀತಾಂಜಲಿ …

Read More »

ಪಿಡಿಒ ವರ್ಗಾವಣೆ ಮಾಡುವವರೆಗೆ ಮಂಗೇನಕೊಪ್ಪ ಗ್ರಾ.ಪಂ. ಸಿಬ್ಬಂದಿ ಅಸಹಕಾರ ಚಳುವಳಿ

ಬೆಳಗಾವಿ: ತಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಗ್ರಾಪಂ ಪಿಡಿಒ ಉತ್ತಮ ಬನಸೋಡೆ ಅವರನ್ನು ಬೇರೆಡೆ ವರ್ಗಾವಣೆ ಮಾಡುವವರೆಗೆ ಗ್ರಾಮ ಪಂಚಾಯತಿಯ ದೈನಂದಿನ ಕೆಲಸಗಳಿಂದ ಹೊರಗುಳಿಯುವ ಮೂಲಕ ಅಸಹಕಾರ ಚಳುವಳಿ ನಡೆಸುವುದಾಗಿ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮ ಪಂಚಾಯತಿಯ ಸಿಬ್ಬಂದಿ ಗುರುವಾರ ತಾ.ಪಂ ಇ.ಒ ಅವರಿಗೆ ಪತ್ರ ನೀಡಿದ್ದಾರೆ. ತಾ.ಪಂ ಇ.ಒ ಅವರಿಗೆ ನೀಡಿರುವ ಪತ್ರದಲ್ಲಿ ತಮ್ಮ ಸಮಸ್ಯೆ ಉಲ್ಲೇಖಿಸಿರುವ ಗ್ರಾಪಂ ಸಿಬ್ಬಂದಿ, “ಮಂಗೇನಕೊಪ್ಪ ಗ್ರಾಪಂಗೆ ಈಚೆಗೆ ನಿಯುಕ್ತಿಗೊಂಡ ಪಿಡಿಒ ಉತ್ತಮ ಅವರು …

Read More »