ಚಾಮರಾಜನಗರ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಹುಬ್ಬೆ ಹುಣಸೆ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಇದರ ಪರಿಣಾಮ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ತಟ್ಟೆಹಳ್ಳ ಮೈದುಂಬಿ ಹರಿಯುತ್ತಿದ್ದು, ಹಲವು ವಾರ್ಡ್‌ಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುಮಾರು 28 ವರ್ಷಗಳ ಬಳಿಕ ತಟ್ಟೆಹಳ್ಳ ಈ ರೀತಿ ತುಂಬಿ ಹರಿಯುತ್ತಿದೆ. ಹಳ್ಳದ ನೀರು ಹೆಚ್ಚಾದ ಪರಿಣಾಮ ಹನೂರು ಪಟ್ಟಣದ ಸೊಪ್ಪಿನ ಕೇರಿ, ದೇವಾಂಗಪೇಟೆ, ಆಂಜನೇಯ ಬೀದಿ ಸೇರಿದಂತೆ ಹಲವು ಪ್ರದೇಶಗಳಿಗೆ ಹಾಗೂ …
Read More »Daily Archives: ಸೆಪ್ಟೆಂಬರ್ 30, 2026
ನೋಟು ರದ್ದತಿಯಿಂದ ಆರ್ಥಿಕತೆ ನಾಶ, ಮತ ರದ್ದತಿಯಿಂದ ಪ್ರಜಾಪ್ರಭುತ್ವ ನಾಶ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ನವದೆಹಲಿ : ಮತದಾರರ ಹಕ್ಕುಗಳು, ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಈ ಸಂಬಂಧ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮಂಗಳವಾರ ನಡೆದ CWC ಸಭೆಯ ಆರಂಭಿಕ ಭಾಷಣದಲ್ಲಿ ಮಾತನಾಡಿದ ಖರ್ಗೆ, ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದು ಕಾಂಗ್ರೆಸ್‌ನ ಐತಿಹಾಸಿಕ ಜವಾಬ್ದಾರಿ ಎಂದು ಹೇಳಿದರು. ಅರ್ಹ ಪ್ರತಿಯೊಬ್ಬ ನಾಗರಿಕನ ಮತ …
Read More »45 ಲಕ್ಷ ವೆಚ್ಚದ ಮದುವೆ, 116.64 ಗ್ರಾಂ ಚಿನ್ನ ಗಿಫ್ಟ್; ಆದರೂ ತಪ್ಪದ ವರದಕ್ಷಿಣೆ ಕಿರುಕುಳ – ಟೆಕ್ಕಿ ಆತ್ಮಹತ್ಯೆ
ಮುಂಬೈ: 45 ಲಕ್ಷ ವೆಚ್ಚದಲ್ಲಿ ಮದುವೆ ಮಾಡಿಕೊಟ್ಟು, 116.64 ಗ್ರಾಂ ಚಿನ್ನ ಉಡುಗೊರೆಯಾಗಿ ನೀಡಿದ್ರೂ, ಕಾರು ಖರೀದಿಗೆ 5 ಲಕ್ಷ ರೂ. ವರದಕ್ಷಿಣೆಗೆ ಪತಿ ಪೀಡಿಸಿದ್ದಕ್ಕೆ 4 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪುಣೆಯ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಷ್ಣವಿ ಓಂಕಾರ್ ಗಿಸ್ರೆ (24) ಆತ್ಮಹತ್ಯೆಗೆ ಶರಣಾದ ಮಹಿಳೆ. ಭಾರೀ ವೆಚ್ಚದಲ್ಲಿ ಮದುವೆ ಮಾಡಿಕೊಟ್ಟರೂ, ಚಿನ್ನ ನೀಡಿದರೂ ಕಾರು ಖರೀದಿಸಲು ಇನ್ನೂ 5 ಲಕ್ಷ ರೂ. ನೀಡುವಂತೆ ಪತಿ ಮತ್ತು ಅತ್ತೆ-ಮಾವ …
Read More »ಯೋಜಿತ ಬೆಂಗಳೂರು ನಿರ್ಮಾಣಕ್ಕಾಗಿ ವ್ಯವಸ್ಥಿತ ರಸ್ತೆ ಜಾಲ: ಕೃಷ್ಣ ಬೈರೇಗೌಡ
ಬೆಂಗಳೂರು: ಜಿಬಿಎ ಹೊರಗಿನ-ಬೆಂಗಳೂರು ನಗರ ಜಿಲ್ಲೆಯ ಒಳಗಿನ ಪ್ರದೇಶಗಳ ಭವಿಷ್ಯದ ದೃಷ್ಟಿಯಿಂದ ಹೊಸ ರಸ್ತೆ ಜಾಲ (ರೋಡ್ ಗ್ರಿಡ್) ನಿರ್ಮಾಣ ಹಾಗೂ ಸಮರ್ಪಕ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರ ಕಳೆದ 25 ವರ್ಷಗಳಿಂದ ಸೂಕ್ತ ಪೂರ್ವಯೋಜನೆ ಹಾಗೂ ಮುಂಜಾಗ್ರತಾ ತಯಾರಿ …
Read More »ನೈಸ್ ಅಕ್ರಮ 2ಜಿ, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು: ಡಿಕೆಶಿಗೆ ದಾಖಲೆ ಸಮೇತ ಹೆಚ್‌ಡಿಕೆ ಕೌಂಟರ್
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವೆ ನೈಸ್ ವಾರ್ ತಾರಕಕ್ಕೇರಿದೆ. ನೈಸ್ ಯೋಜನೆಗೆಸಹಿ ಹಾಕಿದ್ದೇ ದೇವೇಗೌಡರು ಎಂದು ಹೇಳಿದ್ದ ಸಿಎಂ ಡಿಕೆಶಿಗೆ ಕುಮಾರಸ್ವಾಮಿ ದಾಖಲಾತಿ ಸಮೇತ ಕೌಂಟರ್ ಕೊಟ್ಟಿದ್ದಾರೆ. ನೈಸ್ ಯೋಜನೆ 3 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಬೃಹತ್ ಹಗರಣವಾಗಿದ್ದು ಇದು 2ಜಿ ತರಂಗಾಂತರ ಮತ್ತು ಕಲ್ಲಿದ್ದಲು ಹಗರಣಕ್ಕಿಂತಲೂ ದೊಡ್ಡ ಅಕ್ರಮ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ …
Read More »ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತ ಬೇಡ: ಬ್ಯಾಂಕುಗಳಿಗೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಸಿಎಂ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ ಮಾಸಿಕ 2,000 ರೂಪಾಯಿ ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡಿಕೊಳ್ಳದಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸಲ್ಲಿಸಿದ ಮನವಿ ಪತ್ರಕ್ಕೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ …
Read More »ಒಡಹುಟ್ಟಿದ ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಅಣ್ಣನಿಂದ ಕೊಲೆ
ಬೀದರ್: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಅಣ್ಣ-ತಮ್ಮನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶಿವಪೂರ ಗ್ರಾಮದಲ್ಲಿ ನಡೆದಿದೆ. 20 ವರ್ಷದ ಸಚಿನ್ ಮೃತ ಯುವಕ. ಸಚಿನ್‌ನ ತಲೆಗೆ ಕಲ್ಲು ಎತ್ತಿಹಾಕಿ ಆತನ ಅಣ್ಣ ನಿತಿನ್ ಹತ್ಯೆ ಮಾಡಿದ್ದಾನೆ. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದಲೇ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆಯುತ್ತಿತ್ತು. ತಡರಾತ್ರಿ ಇಬ್ಬರೂ ಕುಡಿದ ಮತ್ತಿನಲ್ಲಿದ್ದಾಗ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು …
Read More »ರಸ್ತೆಯಲ್ಲಿ ಏಕಾಏಕಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು – ಸಂಪೂರ್ಣ ಸುಟ್ಟು ಕರಕಲು
ಕೋಲಾರ: ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕಾರ್ಪಿಯೋ ಕಾರೊಂದು ಇದ್ದಕ್ಕಿದ್ದಂತೆ ಮಧ್ಯರಾತ್ರಿ ನಡು ರಸ್ತೆಯಲ್ಲಿ ಹೊತ್ತಿ ಉರಿದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕು ಕೆಂದಟ್ಟಿ ರಾಷ್ಟ್ರೀಯ ಹೆದ್ದಾರಿ-75 ರದೆಂದಟ್ಟಿ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ರಾಷ್ಟ್ರೀಯ ಹೆದ್ದಾರಿ-75ರ ಕೆಂದಟ್ಟಿ ಬಳಿ ಕಾರು ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ …
Read More »ಹರಿಹರ ಪಂಚಮಸಾಲಿ ಪೀಠದಲ್ಲಿ ಸಭೆ, ಸಮಾರಂಭಕ್ಕೆ ಬ್ರೇಕ್ – ನಿಷೇಧಾಜ್ಞೆ ಮುಂದುವರಿಕೆ
ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಪರ ಭಕ್ತರು ಹಾಗೂ ಟ್ರಸ್ಟಿಗಳ ನಡುವಿನ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಲಿಂಗೈಕ್ಯ ಡಾ ಮಹಾಂತ ಸ್ವಾಮೀಜಿ 89ನೇ ಜಯಂತೋತ್ಸವ ಕಾರ್ಯಕ್ರಮದಲ್ಲೇ ಟ್ರಸ್ಟಿಗಳ ವಿರುದ್ದ ಹೋರಾಟಕ್ಕೆ ಭಕ್ತರು ಮುಂದಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ನಿಷೇಧಾಜ್ಞೆ ಮುಂದುವರಿಸಿ ಆದೇಶ ಹೊರಡಿಸಿದ್ದಾರೆ. ಲೆಕ್ಕ ಕೊಡಿ ಅಭಿಯಾನ ಸಮಿತಿ, ಟ್ರಸ್ಟಿಗಳ ವಿರುದ್ಧ ಮತ್ತೆ ಹೋರಾಟಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ …
Read More »ಸ್ಕೂಟಿ, ಲಾರಿ ನಡುವೆ ಮುಖಾಮುಖಿ ಡಿಕ್ಕಿ – ಯುವಕ ಸ್ಥಳದಲ್ಲೇ ಸಾವು
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ವೇಯ ಸರ್ವೀಸ್ ರಸ್ತೆಯಲ್ಲಿ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಕೆಂಪನಹಳ್ಳಿ ಗೇಟ್ ಬಳಿ ನಡೆದಿದೆ. ರಾಮನಗರ ತಾಲೂಕಿನ ದಾರಾಪುರ ಗ್ರಾಮದ ನಿವಾಸಿ ನಿತಿನ್ (21) ಮೃತಪಟ್ಟ ಸವಾರ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಹಿಂಬದಿ ಸವಾರ ಸೇವಂತ್‌ನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ರಾತ್ರಿ ಕೆಲಸ …
Read More »
Laxmi News 24×7