Breaking News

Daily Archives: ಆಗಷ್ಟ್ 30, 2026

ಕೆಪಿಎಸ್‌ಸಿ ನೇಮಕಾತಿ ಹಗರಣ – IAS ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಅರೆಸ್ಟ್‌

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಅವರನ್ನು ಬಂಧಿಸಲಾಗಿದೆ. ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಗ್ಯಾನೇಂದ್ರ ಅವರನ್ನು ಸಿಐಡಿ ಅರೆಸ್ಟ್‌ ಮಾಡಿದೆ. ನಿನ್ನೆ 11 ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದು ಮಧ್ಯಾಹ್ನ 12 ಗಂಟೆಯಿಂದ ಮತ್ತೆ ವಿಚಾರಣೆ ನಡೆಸಿದ್ದರು.

Read More »

ಟಾಕ್ಸಿಕ್‌ ಸಿನಿಮಾ, ಯಶ್‌ ನಟನೆ ಹಾಡಿಹೊಗಳಿದ ರಿಷಬ್‌ ಶೆಟ್ಟಿ

ಟಾಕ್ಸಿಕ್‌ ಸಿನಿಮಾ ಹಾಗೂ ಯಶ್‌ ಅವರ ಅಭಿನಯವನ್ನು ಕಾಂತಾರ ನಟ ರಿಷಬ್‌ ಶೆಟ್ಟಿ ಹಾಡಿಹೊಗಳಿದ್ದಾರೆ. ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ನಿಮ್ಮ ಬದ್ಧತೆಯನ್ನು ನಾವು ಗೌರವಿಸುತ್ತೇವೆ ಎಂದು ರಿಷಬ್‌ ಶ್ಲಾಘಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಿಷಬ್‌ ಶೆಟ್ಟಿ, ಒಬ್ಬ ಕಲಾವಿದನಾಗಿ, ನೀವು ಒಂದು ಪಾತ್ರವನ್ನು ನಿರ್ವಹಿಸಿದಾಗ, ಅದನ್ನು ನಿಮ್ಮ ಹೃದಯದಿಂದ ಜೀವಂತಗೊಳಿಸಲು ಪ್ರಯತ್ನಿಸುತ್ತೀರಿ. ಇಲ್ಲಿ, ಒಬ್ಬ ಪ್ರಭಾವಿ ವ್ಯಕ್ತಿಯ ಹೋರಾಟವನ್ನು ಚಿತ್ರಿಸಿರುವ ದೃಢವಿಶ್ವಾಸದಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ ಎಂದು …

Read More »