Breaking News

Daily Archives: ಆಗಷ್ಟ್ 29, 2026

UGC-NET: 84 ವಿಷಯಗಳಿಗೆ ಫಲಿತಾಂಶ ಪ್ರಕಟ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ 84 ವಿಷಯಗಳಿಗೆ ನಡೆದ UGC-NET ಜೂನ್ 2026 ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಅಧಿಕೃತ NTA ವೆಬ್‌ಸೈಟ್‌ನಲ್ಲಿ ತಮ್ಮ ಅಂಕಗಳು ಮತ್ತು ಅರ್ಹತಾ ಸ್ಥಿತಿಯನ್ನು ಪರಿಶೀಲಿಸಬಹುದು. ಪರೀಕ್ಷೆಯ ಬಗ್ಗೆ ವಾರಗಳ ಅನಿಶ್ಚಿತತೆಯ ನಂತರ UGC NET 2026 ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಆ ಪತ್ರಿಕೆಗಳಲ್ಲಿ ವರದಿಯಾದ ಸಮಸ್ಯೆಗಳನ್ನು ಅನುಸರಿಸಿ NTA ಮೂರು ವಿಷಯಗಳಿಗೆ ಮರು …

Read More »

ಸಿಎನ್‌ಜಿ ಬೆಲೆ 4 ರೂ. ಏರಿಕೆ – ಇಂದಿನಿಂದಲೇ ಹೊರ ದರ ಜಾರಿ

ನವದೆಹಲಿ: ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಸಂಕುಚಿತ ನೈಸರ್ಗಿಕ ಅನಿಲ  ಬೆಲೆ ಏರಿಕೆಯಾಗಿದ್ದು, ಆ.29ರ ಶನಿವಾರ (ಇಂದು) ಬೆಳಗ್ಗೆ 6 ಗಂಟೆಯಿಂದ ಪ್ರತಿ ಕೆಜಿಗೆ 3.89 ರೂ. ಹೆಚ್ಚಳವಾಗಲಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್  ತಿಳಿಸಿದೆ. ಬೆಲೆ ಏರಿಕೆಯ ಬಳಿಕ ದೆಹಲಿಯಲ್ಲಿ CNG ದರವು ಪ್ರತಿ ಕೆಜಿಗೆ 86.98 ರೂ. ತಲುಪಿದೆ. ಇದಕ್ಕೂ ಮೊದಲು CNG ದರ ಪ್ರತಿ ಕೆಜಿಗೆ 83.09 ರೂ. ಇತ್ತು. ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ …

Read More »

ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ

ಮೈಸೂರು: ಮೈಕ್ರೋಫೈನಾನ್ಸ್  ಕಿರುಕುಳಕ್ಕೆ ಹೆದರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರದಲ್ಲಿ ನಡೆದಿದೆ. ನಂಜಾಪುರದ ವಸಂತಕುಮಾರ್ ಪುತ್ರ ರಂಜಿತ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೆ ನಿರ್ಮಾಣಕ್ಕಾಗಿ ಮೈಕ್ರೋಫೈನಾನ್ಸ್‌ನಲ್ಲಿ 12 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಯಲ್ಲಿ ವಿಳಂಬ ಹಿನ್ನೆಲೆ 2 ಬಾರಿ ಫೈನಾನ್ಸ್ ನವರು ಮನೆಗೆ ಬೀಗ ಹಾಕಿದ್ದರು. ಈವರೆಗೆ 8 ಲಕ್ಷ ರೂ. ಪಾವತಿ ಮಾಡಿದ್ದ ರಂಜಿತ್‌ ಇತ್ತೀಚೆಗೆ 3 …

Read More »

ಮಂತ್ರಾಲಯದಲ್ಲಿ ಪೂರ್ವಾರಾಧನೆ ಸಂಭ್ರಮ: ಸಂಜೆ ಗುರು ಅನುಗ್ರಹ ಪ್ರಶಸ್ತಿ ಪ್ರದಾ‌ನ

ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳು  ಸಶರೀರರಾಗಿ ವೃಂದಾವನಸ್ಥರಾಗಿ 355 ವರ್ಷಗಳು ಸಂದಿರುವ ಹಿನ್ನೆಲೆ ಎಲ್ಲೆಡೆ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಮಂತ್ರಾಲಯದಲ್ಲಿ ಇಂದು ಪೂರ್ವಾರಾಧನೆಯ ಸಡಗರವಿದ್ದು, ಬೆಳಗಿನ ಜಾವದಿಂದಲೇ ನಾನಾ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಇಂದು ವಿಶೇಷವಾಗಿ ನಿರ್ಮಾಲ್ಯ ವಿಸರ್ಜನ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ನಡೆಯಲಿದೆ. ಮಠದ ಪ್ರಾಕಾರದಲ್ಲಿ ರಜತ ಸಿಂಹ, ಗಜ …

Read More »

ವಿನಾಶಕಾರಿ ಹಠಾತ್ ಪ್ರವಾಹಕ್ಕೆ 550ಕ್ಕೂ ಹೆಚ್ಚು ಮಂದಿ ಬಲಿ – ಕೊನೆಗೂ ವಿದೇಶಿ ನೆರವು ಪಡೆಯಲು ಒಪ್ಪಿದ ನೇಪಾಳ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ನೆರವು ಬೇಡ ಎಂದಿದ್ದ ನೇಪಾಳ ಇದೀಗ ನಿರ್ಧಾರ ಬದಲಿಸಿ, ವಿದೇಶಿ ಸಹಾಯ ಪಡೆಯಲು ಒಪ್ಪಿಕೊಂಡಿದೆ. ಭೀಕರ ಜಲಪ್ರಳಯದಲ್ಲಿ ಈಗಾಗಲೇ 550ಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದು, 2000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇದರ ನಡುವೆ ದುರಂತದ ಪ್ರಭಾವವನ್ನರಿತ ನೇಪಾಳ ಸರ್ಕಾರ  ಇದೀಗ ತನ್ನ ನಿರ್ಧಾರವನ್ನು ಬದಲಿಸಿ, ರಕ್ಷಣಾ ಕಾರ್ಯಾಚರಣೆಗಾಗಿ ನೆರವು ನೀಡುವುದಾಗಿ ತಿಳಿಸಿದ್ದ ಭಾರತ, ಚೀನಾ, …

Read More »

ಬಸ್ ನಿಲ್ದಾಣದಲ್ಲೇ ಮಹಿಳೆಯ ಸರ ಕಳ್ಳತನ: ಕಣ್ಣಿರಿಟ್ಟ ಮಹಿಳೆ, ಪೊಲೀಸರಿಂದ ತಲಾಶ್

ಬೆಳಗಾವಿ: ಬೈಲಹೊಂಗಲ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಸುಮಾರು 5.50 ಲಕ್ಷ ರೂ. ಮೌಲ್ಯದ 3.5 ತೊಲಿ ಬಂಗಾರದ ಆಭರಣ ಕಳ್ಳತನವಾಗಿರುವ ಘಟನೆ ನಡೆದಿದೆ. ತಾಲೂಕಿನ ನನಗುಂಡಿಕೊಪ್ಪ ಗ್ರಾಮದ ಮಂಗಲಾ ಬಸಯ್ಯ ದೇಸಾಯಿ (35) ಬಂಗಾರ ಕಳೆದುಕೊಂಡವರು. ಅವರು ನನಗುಂಡಿಕೊಪ್ಪದಿಂದ ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಇಳಿದು, ಬಳಿಕ ಮರಕುಂಬಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಲು ಬೈಲಹೊಂಗಲ–ಯರಗಟ್ಟಿ ಬಸ್ ಹತ್ತಿದ್ದರು. ಬಸ್ ಹತ್ತಿದ ಕೆಲವೇ ಕ್ಷಣಗಳಲ್ಲಿ ಕೊರಳನ್ನು …

Read More »

ಸಿದ್ದರಾಮೇಶ್ವರ ಗುರುಗಳ ಹೆಸರಿನಡಿ10 ಭೋವಿ ಸಮುದಾಯ ಭವನ ನಿರ್ಮಣ ಸಮಾಜ ಕಲ್ಯಾಣ ಸಚಿವ:- ಕೆಹೆಚ್. ಮುನಿಯಪ್ಪ

ಜಾತಿ ಪ್ರಮಾಣ ಪತ್ರದ ಗೊಂದಲಗಳ ನಿವಾರಣೆಗೆ ಕ್ರಮ , ನೂರೊಂದು ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ಇಂದು ವಿಕಾಸ ಸೌಧದದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು. ಸಮಾಜ ಕಲ್ಯಾಣ ಇಲಾಖೆಯ ಅಡಿ ಬರುವ ಭೋವಿ ಅಭಿವೃದ್ಧಿ ನಿಗಮದ ಸಭೆಯನ್ನು ನಡೆಸಿದರು. ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ರವರು ಸಮುದಾಯದ ಸಮಸ್ಯಗಳ …

Read More »