Breaking News

Daily Archives: ಜುಲೈ 31, 2026

ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಶಂಕೆ: ನಾಗಲಕ್ಷ್ಮಿ ಚೌಧರಿ ಅನುಮಾನ

ಬಾಗಲಕೋಟೆ: ನಗರದ 50 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಡೆಯುತ್ತಿರಬಹುದು ಎಂಬ ಗಂಭೀರ ಅನುಮಾನವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 30 ಹೆರಿಗೆಗಳಾಗುತ್ತಿವೆ. ಆದರೆ, ದಾಖಲೆಗಳನ್ನು ಗಮನಿಸಿದಾಗ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಜನನ ಪ್ರಮಾಣವೇ ಹೆಚ್ಚಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಹೆಣ್ಣು …

Read More »

ಬಕೆಟ್‌ನಲ್ಲಿ ಬಿದ್ದು 8 ತಿಂಗಳ ಕಂದಮ್ಮ ದುರ್ಮರಣ

ಹಾಸನ: ಬಕೆಟ್‌ನಲ್ಲಿ ಬಿದ್ದು 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿ ನಡೆದಿದೆ. ಪುಷ್ಪಾಲೋಚನ ಸಾವನ್ನಪ್ಪಿದ ಪುಟ್ಟ ಮಗು. ಪುಷ್ಪಾಲೋಚನ ಗಿರೀಶ್-ಚೈತ್ರಾ ಮೂರನೇ ಪುತ್ರಿಯಾಗಿದ್ದಳು. ಗಿರೀಶ್ ಚಿನ್ನ-ಬೆಳ್ಳಿ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಹೆಣ್ಣುಮಕ್ಕಳು. ಈ ಪೈಕಿ ಪುಷ್ಪಾಲೋಚನ ಮೂರನೆಯವಳು. ಚೈತ್ರಾ ಬಕೆಟ್‌ನಲ್ಲಿ ಬಟ್ಟೆ ನೆನೆಯಲು ಹಾಕಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತೆವಳುತ್ತಾ ಬಂದ ಕಂದಮ್ಮ ಬಕೆಟ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ …

Read More »

ಸೋಮವಾರ ಬೆಂಗಳೂರಿಗೆ ತಮಿಳುನಾಡು ಸಿಎಂ

ಚೆನ್ನೈ: ಸಿಡಬ್ಲ್ಯೂಆರ್‌ಸಿ ಆದೇಶ, ರಾಜ್ಯದಲ್ಲಿ ಕಾವೇರಿ ಹೋರಾಟದ ಮಧ್ಯೆಯೂ ತಮಿಳುನಾಡು ಸಿಎಂ ಜೋಸೆಫ್ ವಿಜಯ್  ಇದೇ ಮುಂದಿನ ಸೋಮವಾರ ಬೆಂಗಳೂರಿಗೆ  ಬರಲಿದ್ದಾರೆ. ಕಾವೇರಿ ನೀರು-ಮೇಕೆದಾಟು ಡ್ಯಾಮ್ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಜೊತೆ ಪರಸ್ಪರ ಚರ್ಚೆ ಮಾಡಲಿದ್ದಾರೆ. ಬೆಂಗಳೂರಿಗೆ ಬರಲು ಪ್ರೈವೆಟ್ ಜೆಟ್ ಸಿದ್ಧಗೊಳಿಸಿರುವ ಸಿಎಂ ವಿಜಯ್‌ಗೆ ಜಲಸಂಪನ್ಮೂಲ ಖಾತೆ ಸಚಿವ ಎನ್.ಆನಂದ್, ಕೃಷಿ ಸಚಿವ ಆರ್.ವಿನೋದ್ ಸಾಥ್ ಕೊಡುವ ಸಾಧ್ಯತೆ ಇದೆ. ವಿಧಾನಸೌಧದಲ್ಲಿ ಚರ್ಚೆಗೂ ಮೊದಲು ಸಿಎಂ …

Read More »

ಕೈಕೊಟ್ಟ ಲವ್ವರ್ – ಮನನೊಂದು ಯುವಕ ಆತ್ಮಹತ್ಯೆ

ಕಾರವಾರ: ಪ್ರೀತಿಸಿದ ಹುಡುಗಿ ಕೈಕೊಟ್ಟ ಹಿನ್ನೆಲೆಯಲ್ಲಿ ಮನಸ್ಸಿನ ನೋವು ತಾಳಲಾರದೇ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಭಾಗದ ರಾಮನಗರದ ಬಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಹರೀಶ ಮೇಸ್ತಾ (24) ಆತ್ಮಹತ್ಯೆಗೆ ಶರಣಾದ ಯುವಕ. ತಾನು ಗಾಢವಾಗಿ ಪ್ರೀತಿಸುತ್ತಿದ್ದ ಯುವತಿಯನ್ನೇ ಮದುವೆಯಾಗಬೇಕೆಂಬ ಕನಸು ಕಂಡಿದ್ದ ಹರೀಶನಿಗೆ, ಇತ್ತೀಚೆಗೆ ಆಕೆ ದೂರವಾಗಿದ್ದು ತೀವ್ರ ನೋವು ತಂದೊಡ್ಡಿತ್ತು. ಪ್ರೇಮ ವೈಫಲ್ಯದಿಂದ ತೀವ್ರ ಮನನೊಂದಿದ್ದ ಈತ, ಮನೆಯಲ್ಲೇ …

Read More »

ಕಾವೇರಿ ವ್ಯಾಪ್ತಿಯಲ್ಲಿ ತೀವ್ರಗೊಂಡ ಪ್ರತಿಭಟನೆ – ಮಂಡ್ಯದಲ್ಲಿ ಜನನಾಯಗನ್ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ

ಬೆಂಗಳೂರು: ಕರ್ನಾಟಕ ಬಂದ್‌ಗೂ ಮುನ್ನ ಕಾವೇರಿ ಕೊಳ್ಳದ  ಜಿಲ್ಲೆಗಳಲ್ಲಿ ಕಿಚ್ಚು ಜೋರಾಗುತ್ತಿದೆ. ಸಿಡಬ್ಲ್ಯೂಎಂಸಿ ಆದೇಶ ನೀಡುತ್ತಿದ್ದಂತೆ, ಮಂಡ್ಯದ ಸಂಜಯ್ ವೃತ್ತದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡದಂತೆ ಆಗ್ರಹಿಸಿದ್ದಾರೆ. ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಮಿಳುನಾಡು ಸಿಎಂ ವಿರುದ್ಧ ಧಿಕ್ಕಾರ ಕೂಗಿವೆ. ಇನ್ನೊಂದೆಡೆ, ಕನ್ನಡಪರ ಸಂಘಟನೆಗಳು ಗುರುಶ್ರೀ ಥಿಯೇಟರ್‌ನಲ್ಲಿ ತಮಿಳುನಾಡು ಸಿಎಂ ವಿಜಯ್ ನಟನೆಯ ಜನನಾಯಗನ್ ಚಿತ್ರದ ಪೋಸ್ಟರ್ ಹರಿದು …

Read More »

ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ: ಮತ್ತೊಂದು ವೀಡಿಯೋದಲ್ಲಿ ಮೋದಿ ಅಭಿನಂದನೆ

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ವಿಷಯಗಳ ಕುರಿತು ಒಂದು ವಾರದ ಅವಧಿಯಲ್ಲಿ ನಾಲ್ಕನೇ ಬಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಹಂಚಿಕೊಂಡಿದ್ದಾರೆ. 4ನೇ ಇನ್‌ಸ್ಟಾ ವೀಡಿಯೋದಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದಕ್ಕೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಶಿಕ್ಷೆಯನ್ನು ಹೆಚ್ಚಿಸಲು ಮತ್ತು ಅಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಹಲವಾರು ಕ್ರಮಗಳನ್ನು ಪ್ರಸ್ತಾಪಿಸುವ ಮಸೂದೆಯನ್ನು ಬುಧವಾರ …

Read More »

ಸೋಮವಾರ ಡಿಕೆ ಸಂಪುಟ ವಿಸ್ತರಣೆ?; ನಾಳೆ-ನಾಡಿದ್ದು ಅಂತಿಮ ಪಟ್ಟಿ ರವಾನೆ

ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಸೋಮವಾರ ಡಿಕೆ ಸಂಪುಟ ವಿಸ್ತರಣೆಯಾಗಲಿದ್ದು, ನಾಳೆ ಅಥವಾ ನಾಡಿದ್ದು ಅಂತಿಮ ಪಟ್ಟಿ ರವಾನೆಯಾಗಲಿದೆ. ಸೋಮವಾರ ಅಧಿಕೃತವಾಗಿ ಸಂಪುಟ ವಿಸ್ತರಣೆ ಆಗಲಿದೆ. ಸೋಮವಾರವೇ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ‘ಪಬ್ಲಿಕ್ ಟಿವಿ’ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ. ಇಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಭೇಟಿ ಬಳಿಕ, ‘ನೀವು ಹೊರಡಿ.. ನಾವು ಪಟ್ಟಿ …

Read More »

ಝೀರೋ ಟ್ರಾಫಿಕ್‌ನಲ್ಲಿ ಸಾಗಿಸುತ್ತಿದ್ದಾಗ ಅಂಬುಲೆನ್ಸ್ ಟೈರ್ ಪಂಕ್ಚರ್ – ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ 4 ತಿಂಗಳ ಮಗು ಸಾವು

ದಾವಣಗೆರೆ: ಅಂಬುಲೆನ್ಸ್‌ನಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಸಾಗಿಸಿದರೂ ಪ್ರಯತ್ನ ವಿಫಲವಾಗಿ ಶಾಸಕೋಶ ಸೋಂಕಿನಿಂದ ಬಳಲುತ್ತಿದ್ದ 4 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮೇಶ್ ಹಾಗೂ ಪವಿತ್ರಾ ದಂಪತಿಯ ಹೆಣ್ಣು ಮಗು ಮೃತ ದುರ್ದೈವಿ. ಕಳೆದ 3 ತಿಂಗಳ ಹಿಂದೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪವಿತ್ರಾಗೆ ಹೆರಿಗೆಯಾಗಿ ಹೆಣ್ಣು ಮಗು ಜನಿಸಿತ್ತು. ಕಳೆದ ಕೆಲವು ದಿನದಿಂದ ಶ್ವಾಸಕೋಶ ಸೊಂಕಿನಿಂದ ಮಗು ಬಳಲುತ್ತಿತ್ತು. ಕಳೆದ …

Read More »

ಕಾವೇರಿ ನೀರು ಹೋರಾಟದ ಕನ್ನಡಿಗರ ಕಿಚ್ಚಿಗೆ ಫಿಲ್ಮ್ ಚೇಂಬರ್ ಬೆಂಬಲ

ಕಾವೇರಿ ನೀರು ವಿಚಾರವಾಗಿ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯವಾಗಿದ್ದು, ಕನ್ನಡ ಜನತೆಯ ಪರ ಸಿನಿಮಾ ರಂಗ ಧ್ವನಿಯೆತ್ತಿದೆ. ನಾಡು-ನುಡಿ ವಿಚಾರವಾಗಿ ಯಾವುದೇ ಹೋರಾಟ ನಡೆದರೂ, ಅಲ್ಲಿ ಸಿನಿ ಕಲಾವಿದರು ಕೈ ಸೇರಿದರೆ ಧ್ವನಿ ಜೋರಾಗಿರುತ್ತೆ ಅನ್ನೋ ಮಾತಿದೆ. ಅದರಂತೆ ಮತ್ತೊಮ್ಮೆ ಕಾವೇರಿ ನೀರಿಗಾಗಿ ಹೋರಾಡುವ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ. ತಮಿಳುನಾಡಿಗೆ ಪ್ರತಿನಿತ್ಯ 3,500 ಟಿಎಂಟಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನವನ್ನು ಕನ್ನಡಿಗರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಕನ್ನಡಪರ …

Read More »

ಬೆಟ್ಟದಲ್ಲಿ 3ನೇ ಆಷಾಢ ಶುಕ್ರವಾರದ ಸಂಭ್ರಮ – ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡಿ

ಮೈಸೂರು: ಆಷಾಢ ಮಾಸದ 3ನೇ ಶುಕ್ರವಾರವಾದ  ಇಂದು ನಾಡದೇವತೆ ತಾಯಿ ಚಾಮುಂಡಿ  ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ಆಷಾಢ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ  ಸಹಸ್ರಾರು ಸಂಖ್ಯೆಯ ಭಕ್ತರು ಹರಿದುಬಂದಿದ್ದಾರೆ. ಬ್ರಾಹ್ಮಿ ಮುಹೂರ್ತದಿಂದಲೇ ಕೆಲ ಭಕ್ತರು ರಸ್ತೆ ಮಾರ್ಗವಾಗಿ ಬಂದ್ರೆ, ಇನ್ನೂ ಕೆಲವರು ಮೆಟ್ಟಿಲುಗಳ ಮಾರ್ಗವಾಗಿ ಬಂದು ತಾಯಿ ಚಾಮುಂಡಿಯ ದರ್ಶನ ಪಡೆಯುತ್ತಿದ್ದಾರೆ. 3ನೇ ಆಷಾಢ ಶುಕ್ರವಾರವಾದ ಇಂದು ತಾಯಿ ಚಾಮುಂಡಿಗೆ ಲಕ್ಷ್ಮಿ ದೇವಿಯ ಅಲಂಕಾರ ಮಾಡಲಾಗಿದೆ. ಇದರೊಂದಿಗೆ ಇಡೀ …

Read More »