ತುಮಕೂರು: ಕರ್ನಾಟಕದ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳು ಮತ್ತು ಕರಕುಶಲ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಹತ್ವದ ಪ್ರಯತ್ನಕ್ಕೆ ಹೊಸ ಉತ್ತೇಜನ ಸಿಕ್ಕಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಾಜ್ಯದ ನಾಲ್ಕು ವಿಶಿಷ್ಟ ಉತ್ಪನ್ನಗಳಿಗೆ ಭೌಗೋಳಿಕ ಸೂಚನೆ (ಜಿಐ) ನೋಂದಣಿ ಪಡೆಯಲು ಬೆಂಬಲ ನೀಡಿದ್ದು, ಗ್ರಾಮೀಣ ಆರ್ಥಿಕತೆ ಹಾಗೂ ಸ್ಥಳೀಯ ಉತ್ಪಾದಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ನಿರೀಕ್ಷೆ ಮೂಡಿದೆ. ಜಿಐ ನೋಂದಣಿಗೆ ಗುರುತಿಸಲಾದ ಉತ್ಪನ್ನಗಳಲ್ಲಿ ತಿಪಟೂರು ತೆಂಗಿನಕಾಯಿ, ಹೊಯ್ಸಳ …
Read More »Daily Archives: ಜುಲೈ 11, 2026
ಊಟ ಸೇವನೆಯಿಂದ ಮಕ್ಕಳು ಅಸ್ವಸ್ಥ ಕೇಸ್ – ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತು
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ನಿಲಯದ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಶಾಲೆಯ ಪ್ರಭಾರಿ ಪ್ರಾಂಶುಪಾಲ ನಜೀಮಾ ಬೇಗಂ ಮತ್ತು ಪ್ರಭಾರಿ ವಾರ್ಡನ್ ಭೀಮಬಾಯಿ ಅವರನ್ನು ಅಮಾನತುಗೊಳಿಸಲಾಗಿದೆ. ಗುರುವಾರ ರಾತ್ರಿ ಶಾಲೆಯ 50 ಮಕ್ಕಳು ರಾತ್ರಿ ಊಟ ಸೇವಿಸಿದ್ದರು. ಅವರಲ್ಲಿ 39 ಮಕ್ಕಳು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಚಿತ್ತಾಪುರ ತಾಲೂಕಾ ಆಸ್ಪತ್ರೆ, ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರ್ತವ್ಯ ಲೋಪದ ಆಧಾರದ …
Read More »ಸಂಪುಟದಲ್ಲಿ ನನಗೂ ಸ್ಥಾನ ಸಿಗಲಿ: ಹಾನಗಲ್ ಶಾಸಕ ಶ್ರೀನಿವಾಸ ಮಾನೆ
ಬೆಳಗಾವಿ: ಮುಂದೆ ಆಗುವ ಸಂಪುಟ ವಿಸ್ತರಣೆ ವೇಳೆ ನನಗೂ ಅವಕಾಶ ಕೊಡಬೇಕು, ನಾನೂ ಪ್ರಬಲ ಆಕಾಂಕ್ಷಿ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ತಿಳಿಸಿದ್ದಾರೆ. ಬೆಳಗಾವಿಯ ನಗರದ ಪ್ರವಾಸಿ ಪ್ರವಾಸಿ ಮಂದಿರದಲ್ಲಿ ಸಿಎಂ ಡಿ.ಕೆ ಶಿವಕುಮಾರ ಅವರನ್ನು ಭೇಟಿ ಮಾಡಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ರಚನೆಯಲ್ಲಿ ಕಿತ್ತೂರು ಕರ್ನಾಟಕ ಪಾತ್ರ ಬಹುಮುಖ್ಯವಾಗಿದೆ. ಇಲ್ಲಿ ಅತಿಹೆಚ್ಚು ಸ್ಥಾನಗಳಿಸುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು …
Read More »ಬೆಳಗಾವಿಯಲ್ಲಿನ ಆರ್‌ಎಸ್ಎಸ್ ಸಭೆ ನಂತರ ರಾಜ್ಯದಲ್ಲಿ ಅನಾಹುತ ಸಾಧ್ಯತೆ: ಹರಿಪ್ರಸಾದ್
ಬೆಳಗಾವಿಯಲ್ಲಿ ಇಂದಿನಿಂದ ಆರ್‌ಎಸ್‌ಎಸ್ ಪ್ರಮುಖ ವಾರ್ಷಿಕ ಸಭೆ ಆರಂಭಗೊಂಡಿದ್ದು, ಈ ಸಭೆಯ ಮುಕ್ತಾಯದ ನಂತರ ರಾಜ್ಯದಲ್ಲಿ ಅನಾಹುತಗಳು ಅಥವಾ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸಂಘಟನೆಯು ಈ ಬಾರಿ ಬೆಳಗಾವಿಯನ್ನೇ ಗುರಿಯಾಗಿಸಿಕೊಂಡು ಸಭೆ ನಡೆಸುತ್ತಿರುವುದರ ಉದ್ದೇಶ ಏನೆಂಬುದು ತಿಳಿಯುತ್ತಿಲ್ಲ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಹಿಂದೆಲ್ಲಾ ಇವರ ಪ್ರಮುಖ ಸಭೆಗಳು ಮುಗಿದ ತಕ್ಷಣ …
Read More »ಮಂತ್ರಿಸ್ಥಾನ ಕೊಡಿ ಎಂದು ಚಿಕ್ಕಮಕ್ಕಳಂತೆ ಕೇಳುವುದಿಲ್ಲ: ಶಾಸಕ ಅಶೋಕ ಪಟ್ಟಣ
ಬೆಳಗಾವಿ: ಮಂತ್ರಿಸ್ಥಾನ ಕೊಡಿ ಎಂದು ನಾನು ಪದೇ ಪದೇ ಚಿಕ್ಕಮಕ್ಕಳಂತೆ ಕೇಳುವುದಿಲ್ಲ ಎಂದು ರಾಮದುರ್ಗ ಮತ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಅವರು ತಿಳಿಸಿದರು. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಹಿಂದೆ ಬೀಳಲ್ಲಾ. ನಮಗೂ ಗೌರವವಿದೆ, ಸ್ವಾಭಿಮಾನವಿದೆ. ಸಚಿವ ಸ್ಥಾನಕ್ಕಿಂತಲೂ ಸ್ವಾಭಿಮಾನ ದೊಡ್ಡದಾಗಿರುತ್ತೇ ಎಂದು ಹೇಳಿದರು. ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನ ಕೇಳಿದ್ದೇವೆ.ಸಿಎಂ ಅವರಿಗೆ ಗೊತ್ತಿದೆ ನಾವು ಎಷ್ಟು ಕೆಲಸ ಮಾಡಿದ್ದೇವೆ, …
Read More »ಆರ್‌ಎಸ್ಎಸ್ ಸಭೆ: ಶತಾಬ್ದಿ ವರ್ಷದ ಕಾರ್ಯಕ್ರಮಗಳ ಯೋಜನೆ
ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯು ಕರ್ನಾಟಕದ ಬೆಳಗಾವಿಯ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾಯಿತು. ಈ ಸಭೆಯಲ್ಲಿ ಸಂಘದ ಸರಸಂಘಚಾಲಕರಾದ ಡಾ. ಮೋಹನ ಭಾಗವತ್ ಅವರು, ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಎಲ್ಲ ಸಹಕಾರ್ಯವಾಹರು, ಅಖಿಲ ಭಾರತೀಯ ಕಾರ್ಯವಿಭಾಗದ ಪ್ರಮುಖರು, ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ಹಾಗೂ ಎಲ್ಲ 46 ಪ್ರಾಂತಗಳ ಪ್ರಾಂತ …
Read More »
Laxmi News 24×7