Breaking News

Daily Archives: ಜುಲೈ 11, 2026

ಬರಗಾಲ ಕಾರಣಕ್ಕೆ ದಸರಾ ನಿಲ್ಲಿಸುವ, ಸರಳವಾಗಿ ಆಚರಿಸುವ ಪ್ರಶ್ನೆಯೇ ಇಲ್ಲ: ಸಿಎಂ

ಬೆಂಗಳೂರು: ನಾಡಹಬ್ಬ ದಸರಾ ಹಬ್ಬವನ್ನು  ಈ ಬಾರಿ 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಸಂಸ್ಕೃತಿ ಪರಂಪರೆಗಳಿಗೆ ಅನುಗುಣವಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್  ತಿಳಿಸಿದರು. ನಾಡಹಬ್ಬ ದಸರಾ- 2026 ಆಚರಣೆ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಬಾರಿಯ ದಸರಾ ಕಾರ್ಯಕ್ರಮದ ಅಂಗವಾಗಿ ಆ.26 …

Read More »

GBA ಚುನಾವಣೆ ಮುಂದೂಡಿಕೆಗೆ ಸುಪ್ರೀಂ ಮೆಟ್ಟಿಲೇರಿದ ರಾಜ್ಯ ಸರ್ಕಾರ

ಬೆಂಗಳೂರು: ಗ್ರೇಟರ್ ಬೆಂಗಳೂರು  ಚುನಾವಣೆ ಮತ್ತಷ್ಟು ವಿಳಂಬ ಆಗಲಿದೆ. ಡಿಸೆಂಬರ್‌ವರೆಗೆ ಚುನಾವಣೆ ಮುಂದೂಡಿಕೆ ಅಗತ್ಯ ಅಂತ ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರ ಕೋರಿದೆ ಆಗಸ್ಟ್‌ನೊಳಗೆ ಚುನಾವಣೆ ನಡೆಸಬೇಕಂತ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಕೂಡ ಎಲೆಕ್ಷನ್ ನಡೆಯೋದು ಡೌಟು ಆಗಿದೆ. ಬೆಂಗಳೂರಿನಲ್ಲಿ ಸುಮಾರು 1.03 ಕೋಟಿ ಮತದಾರರಿದ್ದಾರೆ. ಸುಮಾರು 40 ಲಕ್ಷ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸ್ವೀಕಾರ ಮತ್ತು ಅವುಗಳ ವಿಚಾರಣೆ ಇನ್ನೂ …

Read More »

ಒಂದೆಡೆ ಡ್ಯಾಂಗಳಿಗೆ ಜೀವಕಳೆ.. ಇತ್ತ ಕೈಕೊಟ್ಟ ಮುಂಗಾರಿನಿಂದ ಕಾರಂಜಾ ಜಲಾಶಯ ಬಹುತೇಕ ಖಾಲಿ

ಬೀದರ್: ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ರೈತರ ಜೀವನಾಡಿ ಕಾರಂಜಾ ಜಲಾಶಯದ  ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಳೆ ಕೊರತೆಯಿಂದಾಗಿ ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿಯ ಕಾರಂಜಾ ಡ್ಯಾಂ ಒಳಹರಿವು ಶೂನ್ಯವಾಗಿದೆ. 7.65 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಾರಂಜಾ ಜಲಾಶಯದಲ್ಲಿ ಸದ್ಯ 4.5 ಟಿಎಂಸಿ ನೀರು ಮಾತ್ರ ಇದ್ದು, ಬಹುತೇಕ 1 ಟಿಎಂಸಿ ನೀರು ಡೆಡ್ ಸ್ಟೋರೆಜ್ ಇದೆ‌. ಸದ್ಯ 3 ಟಿಎಂಸಿ ನೀರು ಮಾತ್ರ ಇದ್ದು, ಈ ತಿಂಗಳು ಮಳೆ …

Read More »

ಮತಾಂತರಕ್ಕೆ ಒತ್ತಾಯಿಸಿ ಚಿತ್ರಹಿಂಸೆ, ಹಲ್ಲೆ ನಡೆಸಿ ಉಜ್ಬೇಕಿಸ್ತಾನದಲ್ಲಿ ಕೇರಳ ಮೂಲದ ವಿದ್ಯಾರ್ಥಿನಿ ಹತ್ಯೆ

ತಾಷ್ಕೆಂಟ್: ಉಜ್ಬೇಕಿಸ್ತಾನ್‌ನಲ್ಲಿ 22 ವರ್ಷದ ಭಾರತೀಯ ವೈದ್ಯಕೀಯ ವಿದ್ಯಾರ್ಥಿನಿ  ಹತ್ಯೆ ಮಾಡಲಾಗಿದೆ. ಮತಾಂತರಕ್ಕೆ ಒತ್ತಾಯಿಸಿ ಆಕೆಗೆ ಚಿತ್ರಹಿಂಸೆ ನೀಡಿ, ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ವಿದ್ಯಾರ್ಥಿನಿ ಪೋಷಕರು ದೂರು ನೀಡಿದ್ದಾರೆ. ಸವಾರಿಯಾ ಬಸಂತ್ ಕೊಲೆಯಾದ ವಿದ್ಯಾರ್ಥಿನಿ. ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೇರಳ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೂ ಮುನ್ನ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಪರಾಧವು ಉಜ್ಬೇಕಿಸ್ತಾನ್‌ನಲ್ಲಿ ನಡೆದಿದ್ದರೂ, ಇಲ್ಲಿ ಪ್ರಕರಣ …

Read More »

40 ವರ್ಷಗಳ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ

ವೆಲ್ಲಿಂಗ್ಟನ್: ಇಂಡೋನೇಷ್ಯಾ, ಆಸ್ಟ್ರೇಲಿಯಾ ಬಳಿಕ ಪ್ರಧಾನಿ ನರೇಂದ್ರ ಮೋದಿ ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದಾರೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಆಕ್ಲೆಂಡ್‌ನ ಸ್ಕೈಟವರ್‌ನಲ್ಲಿ ತ್ರಿವರ್ಣಧ್ವಜದ ದೀಪಬೆಳಗಿಸಿ ವಿಶೇಷ ಸ್ವಾಗತ ಕೋರಲಾಗಿದೆ. 40 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದು, ಪ್ರಧಾನಿ ಕ್ರಿಸ್ಟೋಫರ್ ಲಕ್ಸುನ್ ಬರಮಾಡಿಕೊಂಡರು. 2 ದೇಶಗಳ ಮಧ್ಯೆ ಮುಕ್ತವ್ಯಾಪಾರ ಒಪ್ಪಂದ ಏರ್ಪಡಲಿದೆ. ಈ ಭೇಟಿ ಐತಿಹಾಸಿಕವಾಗಿದ್ದು, ನಾಲ್ಕು ದಶಕಗಳಲ್ಲಿ ನ್ಯೂಜಿಲೆಂಡ್‌ಗೆ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಲಕ್ಸನ್ …

Read More »

ತಿಪಟೂರಿನ ಕೊಬ್ಬರಿ ಸೇರಿ ಕರ್ನಾಟಕದ ನಾಲ್ಕು ಉತ್ಪನ್ನಗಳಿಗೆ ಜಿಐ ನೋಂದಣಿಗೆ ಅವಕಾಶ

ತುಮಕೂರು: ಕರ್ನಾಟಕದ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳು ಮತ್ತು ಕರಕುಶಲ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಹತ್ವದ ಪ್ರಯತ್ನಕ್ಕೆ ಹೊಸ ಉತ್ತೇಜನ ಸಿಕ್ಕಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಾಜ್ಯದ ನಾಲ್ಕು ವಿಶಿಷ್ಟ ಉತ್ಪನ್ನಗಳಿಗೆ ಭೌಗೋಳಿಕ ಸೂಚನೆ (ಜಿಐ) ನೋಂದಣಿ ಪಡೆಯಲು ಬೆಂಬಲ ನೀಡಿದ್ದು, ಗ್ರಾಮೀಣ ಆರ್ಥಿಕತೆ ಹಾಗೂ ಸ್ಥಳೀಯ ಉತ್ಪಾದಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ನಿರೀಕ್ಷೆ ಮೂಡಿದೆ. ಜಿಐ ನೋಂದಣಿಗೆ ಗುರುತಿಸಲಾದ ಉತ್ಪನ್ನಗಳಲ್ಲಿ ತಿಪಟೂರು ತೆಂಗಿನಕಾಯಿ, ಹೊಯ್ಸಳ …

Read More »

ಊಟ ಸೇವನೆಯಿಂದ ಮಕ್ಕಳು ಅಸ್ವಸ್ಥ ಕೇಸ್ – ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ನಿಲಯದ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಶಾಲೆಯ ಪ್ರಭಾರಿ ಪ್ರಾಂಶುಪಾಲ ನಜೀಮಾ ಬೇಗಂ ಮತ್ತು ಪ್ರಭಾರಿ ವಾರ್ಡನ್ ಭೀಮಬಾಯಿ ಅವರನ್ನು ಅಮಾನತುಗೊಳಿಸಲಾಗಿದೆ. ಗುರುವಾರ ರಾತ್ರಿ ಶಾಲೆಯ 50 ಮಕ್ಕಳು ರಾತ್ರಿ ಊಟ ಸೇವಿಸಿದ್ದರು. ಅವರಲ್ಲಿ 39 ಮಕ್ಕಳು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಚಿತ್ತಾಪುರ ತಾಲೂಕಾ ಆಸ್ಪತ್ರೆ, ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರ್ತವ್ಯ ಲೋಪದ ಆಧಾರದ …

Read More »

ಸಂಪುಟದಲ್ಲಿ ನನಗೂ ಸ್ಥಾನ ಸಿಗಲಿ: ಹಾನಗಲ್ ಶಾಸಕ ಶ್ರೀನಿವಾಸ ಮಾನೆ

ಬೆಳಗಾವಿ: ಮುಂದೆ ಆಗುವ ಸಂಪುಟ ವಿಸ್ತರಣೆ ವೇಳೆ ನನಗೂ ಅವಕಾಶ ಕೊಡಬೇಕು, ನಾನೂ ಪ್ರಬಲ ಆಕಾಂಕ್ಷಿ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ತಿಳಿಸಿದ್ದಾರೆ.‌ ಬೆಳಗಾವಿಯ ನಗರದ ಪ್ರವಾಸಿ ಪ್ರವಾಸಿ ಮಂದಿರದಲ್ಲಿ ಸಿಎಂ ಡಿ.ಕೆ ಶಿವಕುಮಾರ ಅವರನ್ನು ಭೇಟಿ ಮಾಡಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ರಚನೆಯಲ್ಲಿ ಕಿತ್ತೂರು ಕರ್ನಾಟಕ ಪಾತ್ರ ಬಹುಮುಖ್ಯವಾಗಿದೆ. ಇಲ್ಲಿ ಅತಿಹೆಚ್ಚು ಸ್ಥಾನಗಳಿಸುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು …

Read More »

ಬೆಳಗಾವಿಯಲ್ಲಿನ ಆರ್‌ಎಸ್ಎಸ್ ಸಭೆ ನಂತರ ರಾಜ್ಯದಲ್ಲಿ ಅನಾಹುತ ಸಾಧ್ಯತೆ: ಹರಿಪ್ರಸಾದ್

ಬೆಳಗಾವಿಯಲ್ಲಿ ಇಂದಿನಿಂದ  ಆರ್‌ಎಸ್‌ಎಸ್ ಪ್ರಮುಖ ವಾರ್ಷಿಕ ಸಭೆ ಆರಂಭಗೊಂಡಿದ್ದು, ಈ ಸಭೆಯ ಮುಕ್ತಾಯದ ನಂತರ ರಾಜ್ಯದಲ್ಲಿ ಅನಾಹುತಗಳು ಅಥವಾ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸಂಘಟನೆಯು ಈ ಬಾರಿ ಬೆಳಗಾವಿಯನ್ನೇ ಗುರಿಯಾಗಿಸಿಕೊಂಡು ಸಭೆ ನಡೆಸುತ್ತಿರುವುದರ ಉದ್ದೇಶ ಏನೆಂಬುದು ತಿಳಿಯುತ್ತಿಲ್ಲ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಹಿಂದೆಲ್ಲಾ ಇವರ ಪ್ರಮುಖ ಸಭೆಗಳು ಮುಗಿದ ತಕ್ಷಣ …

Read More »

ಮಂತ್ರಿಸ್ಥಾನ ಕೊಡಿ ಎಂದು ಚಿಕ್ಕಮಕ್ಕಳಂತೆ ಕೇಳುವುದಿಲ್ಲ: ಶಾಸಕ ಅಶೋಕ ಪಟ್ಟಣ

ಬೆಳಗಾವಿ:  ಮಂತ್ರಿಸ್ಥಾನ ಕೊಡಿ ಎಂದು ನಾನು ಪದೇ ಪದೇ ಚಿಕ್ಕಮಕ್ಕಳಂತೆ  ಕೇಳುವುದಿಲ್ಲ ಎಂದು ರಾಮದುರ್ಗ ಮತ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಅವರು ತಿಳಿಸಿದರು. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಹಿಂದೆ ಬೀಳಲ್ಲಾ. ನಮಗೂ ಗೌರವವಿದೆ, ಸ್ವಾಭಿಮಾನವಿದೆ. ಸಚಿವ ಸ್ಥಾನಕ್ಕಿಂತಲೂ ಸ್ವಾಭಿಮಾನ ದೊಡ್ಡದಾಗಿರುತ್ತೇ ಎಂದು ಹೇಳಿದರು. ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನ ಕೇಳಿದ್ದೇವೆ.ಸಿಎಂ ಅವರಿಗೆ ಗೊತ್ತಿದೆ ನಾವು ಎಷ್ಟು ಕೆಲಸ ಮಾಡಿದ್ದೇವೆ, …

Read More »