ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಅಮಾಯಕ ವ್ಯಕ್ತಿಯೊಬ್ಬರ ಜೀವವನ್ನು ಬಲಿ ಪಡೆದಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮೊಟ್ಟೆ ಖರೀದಿ ವೇಳೆ ಹಣದ ವಿಚಾರವಾಗಿ ಆರಂಭವಾದ ವಾಗ್ವಾದ, ತಳ್ಳಾಟ ಹಲ್ಲೆಗೆ ತಿರುಗಿ, ಗೂಡಂಗಡಿ ನಡೆಸುತ್ತಿದ್ದ 55 ವರ್ಷದ ಶಿವಾಜಿರಾವ್ ಬೈರೋಜಿ ಸಾವನ್ನಪ್ಪಿದ್ದಾರೆ. ಪ್ರಕರಣದ ಸಂಬಂಧ ನಾಲ್ವರು ಯುವಕರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ …
Read More »Daily Archives: ಜುಲೈ 2, 2026
ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಳ್ಳಾರಿ ಕಾಮುಕ ಉಪನ್ಯಾಸಕ ಅರೆಸ್ಟ್
ಬಳ್ಳಾರಿ: ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ ಸನ್ಮಾರ್ಗದಲ್ಲಿ ನಡೆಸಬೇಕಾದ ಉಪನ್ಯಾಸಕನೊಬ್ಬನೇ ತನ್ನ ಕಾಮದ ಹಸಿವಿಗಾಗಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಳಸಿಕೊಂಡು ದ್ರೋಹ ಬಗೆದಿರುವ ಆಘಾತಕಾರಿ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ ವಿದ್ಯಾರ್ಥಿನಿಯ ಜೀವನದ ಜೊತೆ ಆಟವಾಡಿದ ಕಾಮುಕ ಉಪನ್ಯಾಸಕನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಳ್ಳಾರಿ ನಗರದ ಖಾಸಗಿ ಕಾಲೇಜೊಂದರ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರವಿಕಿರಣ್ ಬಂಧಿತ ಆರೋಪಿಯಾಗಿದ್ದಾನೆ. ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನೇ ಈತ ಟಾರ್ಗೆಟ್ ಮಾಡಿದ್ದನು. 2025 ರಲ್ಲಿ …
Read More »ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ನಾಲ್ವರ ಬಂಧನ
ನವದೆಹಲಿ: ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಜಾಲವನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಭದೀಪ್ ಸಿಂಗ್, ಗುರ್ಜಂತ್ ಸಿಂಗ್, ಸಜನ್ ಸಿಂಗ್ ಹಾಗೂ ಗಗನ್‌ಪ್ರೀತ್ ಸಿಂಗ್ ಹೆಸರಿನ ಶಂಕಿತರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತರು ಐಎಸ್‌ಐ ಹ್ಯಾಂಡ್ಲರ್ ಶಹಜಾದ್ ಭಟ್ ಹಾಗೂ ಆತನ ಸಹಚರರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಗುರುತು ಪತ್ತೆಯಾಗದಂತೆ …
Read More »ಸಿಕ್ಕಸಿಕ್ಕವರ ಮೇಲೆ ಹುಚ್ಚುನಾಯಿ ದಾಳಿ – ಇಬ್ಬರು ಮಕ್ಕಳು ಸೇರಿ 8 ಮಂದಿಗೆ ಗಾಯ
ಹಾಸನ: ಸಿಕ್ಕ ಸಿಕ್ಕವರ ಮೇಲೆ ಹುಚ್ಚುನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಅರಕಲಗೂಡಿನ ಉಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹುಚ್ಚುನಾಯಿಯ ದಾಳಿಯಿಂದ ಇಬ್ಬರು ಮಕ್ಕಳು ಸೇರಿ 8 ಮಂದಿ ಗಾಯಗೊಂಡಿದ್ದಾರೆ. ರಾಜು, ರಘು, ಅಂಜಲಿ, ಮಂಜಯ್ಯ ಹಾಗೂ ಇಬ್ಬರು ಮಕ್ಕಳು ಸೇರಿದಂತೆ 8 ಜನರಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳಿಗೆ ಕೊಣನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಚ್ಚುನಾಯಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. …
Read More »ರಾಮಮಂದಿರ ದೇಣಿಗೆ ಕಳ್ಳತನದಲ್ಲಿ ಟಿನ್ನು ಯಾದವ್ ಕಿಂಗ್‌ಪಿನ್: ಚಂಪತ್ ರಾಯ್ ಬಹಿರಂಗ
ಲಕ್ನೋ: ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಪ್ರತಿದಿನ ಹೊಸ ಹೊಸ ವಿಷಯಗಳು ಬಹಿರಂಗವಾಗುತ್ತಿವೆ. ಕಾಣಿಕೆ ಕಳ್ಳತನದಲ್ಲಿ ಟಿನ್ನು ಯಾದವ್ ಪ್ರಮುಖ ಪಾತ್ರಧಾರಿ ಎಂದು ಪೊಲೀಸರ ವಿಚಾರಣೆಯಲ್ಲಿ ಚಂಪತ್ ರಾಯ್ ಗಂಭೀರ ಆರೋಪ ಮಾಡಿದ್ದಾರೆ. ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಕೂಡ ಚಂಪತ್ ರಾಯ್ ಚಾಲಕನಾಗಿದ್ದ. ಇಡೀ ಹಗರಣದ ಹಿಂದಿನ ಪ್ರಮುಖ ವ್ಯಕ್ತಿ ಟಿನ್ನು ಯಾದವ್ ಎಂದು ಚಂಪತ್ ರಾಯ್ ಒಪ್ಪಿಕೊಂಡಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಟಿನ್ನು ಯಾದವ್ …
Read More »KPSC ಅಧ್ಯಕ್ಷರ ಅಧಿಕಾರ ದುರುಪಯೋಗ ಆರೋಪ : ಸಿಎಂಗೆ ಜೋಶಿ ಬರೆದ ಪತ್ರದಲ್ಲೇನಿದೆ?
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಅಧ್ಯಕ್ಷರು ಅಧಿಕಾರ ದುರುಪಯೋಗ ಪಡಿಸಿಕೊಂಡ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಸಮಗ್ರ ತನಿಖೆ ಆಗಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. KPSC ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಅಧಿಕಾರ ದುರ್ಬಳಕೆ ಮತ್ತು ಸ್ವಜನಪಕ್ಷಪಾತ ಎಸಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಕುರಿತು KPSC ಕಾರ್ಯದರ್ಶಿ ಸರ್ಕಾರಕ್ಕೆ ವಿಸ್ತೃತ ವರದಿ …
Read More »ಮತದಾರರ ಪಟ್ಟಿಯಲ್ಲಿ 2002ರ ದಾಖಲೆ ಸಿಗದಿದ್ದರೆ ಬೇಡ ಆತಂಕ: ಪರ್ಯಾಯ ಮಾರ್ಗ ತಿಳಿಸಿದ ಚುನಾವಣಾ ಆಯೋಗ
ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ ವೇಳೆ ಗಣತಿ ನಮೂನೆ ಭರ್ತಿ ಮಾಡಲು 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ಪೋಷಕರ ಹೆಸರುಗಳು ಸಿಗುತ್ತಿಲ್ಲ ಎಂದು ಕರ್ನಾಟಕದ ಹಲವಾರು ಮತದಾರರು ದೂರು ನೀಡಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಸ್ಪಷ್ಟನೆ ನೀಡಿದೆ. ನಿಮ್ಮ ಅಥವಾ ನಿಮ್ಮ ಆಪ್ತ ಕುಟುಂಬ ಸದಸ್ಯರ ಹೆಸರು 2002ರ ಎಸ್‌ಐಆರ್ ಪಟ್ಟಿಯಲ್ಲಿ ಇಲ್ಲದಿದ್ದರೆ, ಸಂತತಿ ಅಥವಾ ಸಂಬಂಧಿಕರ ಮ್ಯಾಪಿಂಗ್ ಆಯ್ಕೆ ಮಾಡಬಹುದು. ಇಲ್ಲವೇ, ಕ್ಲೈಮ್ಸ್ …
Read More »ಹನಿಟ್ರ್ಯಾಪ್ ಮೂಲಕ ಸಹೋದ್ಯೋಗಿಯ ಕಿಡ್ನ್ಯಾಪ್ – 12 ಲಕ್ಷಕ್ಕೆ ಬೇಡಿಕೆ, 8 ಮಂದಿ ಅರೆಸ್ಟ್
ವಿಜಯಪುರ: ಜಮೀನು ಮಾರಾಟ ಮಾಡಿದ ಹಣದ ಆಸೆಗಾಗಿ ಹನಿಟ್ರ‍್ಯಾಪ್ ಮೂಲ ಸಹೋದ್ಯೋಗಿಯನ್ನೇ ಕಿಡ್ನ್ಯಾಪ್ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಬರೋಬ್ಬರಿ 12 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದ ಅಂತರ-ಜಿಲ್ಲಾ ಅಪಹರಣಕಾರರನ್ನು ಪೊಲೀಸರು ಗ್ಯಾಂಗ್ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ನಗರದ ಕಸ್ತೂರಿ ಕಾಲೋನಿಯ ನಿವಾಸಿ 22 ವರ್ಷದ ಸಾಹಿಲ್‌ನನ್ನು ಜೂನ್ 18ರಂದು ಕಾಣೆಯಾಗಿದ್ದ. ಯಾರೋ ದುಷ್ಕರ್ಮಿಗಳು ತನ್ನ ಮಗನನ್ನು ಅಪಹರಿಸಿದ್ದಾರೆಎಂದು ಮಮ್ತಾಜ್ ಜೂ.19ರಂದು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ …
Read More »30 ದಿನ ಜೈಲಿಗೆ ಹೋದರೆ ಪ್ರಧಾನಿ, ಸಿಎಂ, ಸಚಿವರು ವಜಾ – ಮಸೂದೆಗೆ ಸಿದ್ಧತೆ
ನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ ಅವರನ್ನು ಸ್ವಯಂಚಾಲಿತವಾಗಿ ಅಧಿಕಾರದಿಂದ ತೆಗೆದುಹಾಕುವ ಪರಿಷ್ಕೃತ ಮಸೂದೆಯನ್ನು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ. ವಿವಾದಾತ್ಮಕ 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಜುಲೈ 17 ರಂದು ತನ್ನ ವರದಿಯನ್ನು ಅಂಗೀಕರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಪ್ರಸ್ತಾವನೆಯು ಇನ್ನೂ …
Read More »ಉಗಾಂಡದಲ್ಲಿ ಕೊಟ್ಟೂರು ಮಹಿಳೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್
ಬಳ್ಳಾರಿ: ಪತಿಯ ಜೊತೆ ಉಗಾಂಡ ದೇಶದಲ್ಲಿ ನೆಲೆಸಿದ್ದ ಕರ್ನಾಟಕ ವಿಜಯನಗರ ಜಿಲ್ಲೆಯ ಕೊಟ್ಟೂರು ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನ ಹಟ್ಟಿಯ ಬಿಂದು (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಪತಿ ಚಂದ್ರಶೇಖರ್ ಜೊತೆ ಮೃತ ಬಿಂದು ಉಗಾಂಡ ದೇಶದಲ್ಲಿ ನೆಲೆಸಿದ್ರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪಾರ್ಥಿವ ಶರೀರ ತರಲು ತರಳಬಾಳು ಮಠದ ಶ್ರೀಗಳು …
Read More »
Laxmi News 24×7