ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವರ್ಷದವರೆಗೂ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನೀಡಿದ ಆದೇಶವನ್ನು ಮಾರ್ಪಾಡುವಂತೆ ಮನವಿ ಮಾಡಿದ್ದಾರೆ. ಬದಲಾದ ವಕೀಲರ ಮೂಲಕ ಅರ್ಜಿ ಸಲ್ಲಿಸಿರುವ ಅವರು, ವೈಯಕ್ತಿಕ ಸ್ವಾತಂತ್ರ‍್ಯ ಮತ್ತು ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ ಆರ್ಟಿಕಲ್ 21 ಅಡಿಯಲ್ಲಿ ರಕ್ಷಿತವಾಗಿದೆ. ಹೀಗಾಗೀ ತುರ್ತು ಪರಿಸ್ಥಿತಿಗಳಿಗೆ ಅನ್ವಯವಾಗುವಂತೆ ಆದೇಶ ಬದಲಿಸಬೇಕು. ಒಂದು ವರ್ಷದೊಳಗೆ ಜಾಮೀನು ಅರ್ಜಿ …
Read More »Monthly Archives: ಜೂನ್ 2026
133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್
ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ಬ್ರ್ಯಾಂಡೆಡ್ ಔಷಧಿ ಮಾರಾಟ ಮಾಡುತ್ತಿದ್ದಾರೆ ಎಂದು ರಾಜ್ಯದ ಔಷಧ ನಿಯಂತ್ರಣ ಇಲಾಖೆ ಕಳೆದ ಎರಡು ದಿನಗಳಲ್ಲಿ 172 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮೇಲೆ ದಾಳಿ ಮಾಡಿದ್ದು, ಇದೀಗ 133 ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಹೊರಡಿಸಿದೆ. ರಾಜ್ಯದಲ್ಲಿ 1200ಕ್ಕೂ ಹೆಚ್ಚು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಇವೆ. ಇದರಲ್ಲಿ 172ರ ಔಷಧಿ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು, …
Read More »ಬಸವಕಲ್ಯಾಣದ ‘ಬಸವಾದಿ ಶರಣರ ಹಿಂದೂ ಸಮಾವೇಶ’ ರದ್ದತಿಗೆ ಬಸವಪರ ಸಂಘಟನೆಗಳ ಒತ್ತಾಯ
ಬೆಳಗಾವಿ: ಬಸವಕಲ್ಯಾಣದಲ್ಲಿ ಜೂನ್ 28ರಂದು ನಡೆಯಲಿರುವ ‘ಬಸವಾದಿ ಶರಣರ ಹಿಂದೂ ಸಮಾವೇಶ’ಕ್ಕೆ ಅನುಮತಿ ನೀಡಬಾರದು ಹಾಗೂ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಬಸವಪರ ಸಂಘಟನೆಗಳ ಒಕ್ಕೂಟವು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಮನವಿಯಲ್ಲಿ, ಕೆಲವು ಧಾರ್ಮಿಕ ಮುಖಂಡರು ಲಿಂಗಾಯತ ಸಮಾಜ, ಬಸವಾದಿ ಶರಣರು ಹಾಗೂ ಮಠಾಧೀಶರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದಾಗಿ ಆರೋಪಿಸಿ, ಇಂತಹ ಹಿನ್ನೆಲೆಯಲ್ಲೇ ಬಸವಕಲ್ಯಾಣದಲ್ಲಿ ಸಮಾವೇಶ ಆಯೋಜನೆ ಮಾಡುವುದು ಸಮಾಜದಲ್ಲಿ ಗೊಂದಲ ಮತ್ತು ಅಶಾಂತಿಗೆ …
Read More »ಉಚಗಾಂವ ರಸ್ತೆ ಕಾಮಗಾರಿಗೆ ಭೂಮಿಪೂಜೆ, ಬೆನಕನಹಳ್ಳಿಯಲ್ಲಿ ದೇವಸ್ಥಾನ ಮೇಲ್ಚಾವಣಿ ಕಾಮಗಾರಿಗೆ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆಯಾಗಿ ಉಚಗಾಂವ ಗ್ರಾಮದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಉಚಗಾಂವ ಗ್ರಾಮದ ವಿವಿಧ ಬಡಾವಣೆಗಳು ಹಾಗೂ ಒಳರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ …
Read More »ಬೈಕ್-ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ: ಓರ್ವ ಸಾವು
ಬೆಳಗಾವಿ: ಬೈಕ್ ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ನಗರದ ನಾಥಪೈ ವೃತ್ತದ ಬಳಿ ನಡೆದಿದೆ. ಬೈಕ್ ಸವಾರ ಗಣೇಶ ಸ್ಥಳದಲ್ಲಿಯೇ ಮೃತಪಟ್ಟ ಯುವಕ. ಹಿಂಬದಿ ಕುಳಿತಿದ್ದ ಆತನ ಸ್ನೇಹಿತನಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಟ್ರಕ್ ಚಾಲಕ ಅಪಘಾತವಾಗುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದ್ದಾನೆ. ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …
Read More »ಒಂದೇ ತಿಂಗಳಲ್ಲಿ 2ನೇ ಬಾರಿ ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಪೈಪ್ ಕಳ್ಳತನ – ಆಪರೇಷನ್ ಥಿಯೇಟರ್ ಬಂದ್
ಗದಗ: ಜಿಲ್ಲಾ ಕೇಂದ್ರ ಗದಗ ನಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಭದ್ರತೆಯಿಲ್ಲದ ಕಾರಣ ಕಳ್ಳರು ಸರಣಿ ಕಳ್ಳತನ ನಡೆಸುತ್ತಿದ್ದು, ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ದುಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಕಳ್ಳತನವಾಗಿದ್ದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಇದೇ ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಪೈಪ್‌ಗಳನ್ನು …
Read More »ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್
ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ ಕೊನೆಗೂ ವಿಜಯಪುರದಲ್ಲಿ ಬಯಲಾಗಿದೆ.. ಬರೋಬ್ಬರಿ 1 ಕೋಟಿ 65 ಲಕ್ಷ ಮೌಲ್ಯದ ಮದ್ಯ ಹಾಗೂ ಟ್ರಕ್ ಈಗ ಖಾಕಿ ವಶದಲ್ಲಿದೆ. ಪೊಲೀಸ್ ಠಾಣೆಯಲ್ಲಿ ನಿಂತಿರೋ ಟ್ರಕ್.. ಟ್ರಕ್ …
Read More »ಚನ್ನಮ್ಮನ ಕಿತ್ತೂರು: ಟೆಂಪೊ ಪಲ್ಟಿ, ಮೂವರು ಸ್ಥಳದಲ್ಲೇ ಸಾವು, ಆರು ಮಂದಿಗೆ ಗಾಯ
ಚನ್ನಮ್ಮನ ಕಿತ್ತೂರು: ಇಲ್ಲಿನ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಸುಕಿನಲ್ಲಿ, ಸಿಮೆಂಟ್ ಕಂಬಗಳನ್ನು ಸಾಗಣೆ ಮಾಡುತ್ತಿದ್ದ ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದವರಾದ ಆದಿಲ್ ಖಾನ್ ವಯಸ್ಸು (26), ಪವನ್ (26) ಮತ್ತು ನಜೀರ್ ಖಾನ್ (25) ಮೃತರು. ಎಲ್ಲರೂ ಉತ್ತರ ಪ್ರದೇಶದ ಉನ್ನವ್ ಜಿಲ್ಲೆಯ ಕುರಸಟ್ ಗ್ರಾಮದವರು ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಇನ್ನಷ್ಟು ವಿವರಗಳು ಗೊತ್ತಾಗಬೇಕಿದೆ. | ವಾಹನ …
Read More »ಕೆಆರ್ ಪುರಂ ತ್ರಿವಳಿ ಹತ್ಯೆ ಕೇಸ್ – ಪುದುಚೇರಿಯಲ್ಲಿ ಹಂತಕಿ ಶ್ವೇತಾ ಬಂಧನ
ಬೆಂಗಳೂರು: ಕೆಆರ್ ಪುರಂ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತಂದೆ, ತಾಯಿ, ತಂಗಿಯನ್ನ ಕೊಲೆ ಮಾಡಿ ಆರೋಪಿ ಶ್ವೇತಾ ಪ್ರಿಯರಕನೊಂದಿಗೆ ತಲೆಮರಿಸಿಕೊಂಡಿದ್ದಳು. ಸದ್ಯ ಆರೋಪಿ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ಕೆನತ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಕೊಲೆ ನಡೆದ ಮನೆ ಶೋಧದ ವೇಳೆ ಶ್ವೇತಾ ಡೈರಿ ಪತ್ತೆಯಾಗಿದೆ. ಹಲವು ದಿನಗಳಿಂದ ಶ್ವೇತಾ ಡೈರಿ ಬರೆಯುತ್ತಿದ್ದಳು. ಡೈರಿಯಲ್ಲಿ ಐ ಆ್ಯಮ್ ಸ್ಯಾಡ್, ಐ …
Read More »ದಾವಣಗೆರೆಯಲ್ಲಿ ಜಿಹಾದಿ ಸಂಚು ಬಯಲು: ರಾಮಮಂದಿರ ಸ್ಫೋಟಿಸಲು ಸ್ಕೆಚ್, ಶಸ್ತ್ರಾಸ್ತ್ರ ಹಿಡಿದು ಫೋಟೋಶೂಟ್ ದಾವಣಗೆರೆ: ಬನ್ನಿಕೋಡು ಗ್ರಾಮದಲ್ಲಿ ಸೆರೆಯಾಗಿದ್ದ ಶಂಕಿತ ಉಗ್ರ ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಸ್ಕೆಚ್ ಹಾಕಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರನೊಬ್ಬನನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ದಾವಣಗೆರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿನ್ನೆ(ಜೂನ್ 23) ಯಶಸ್ವಿಯಾಗಿ ಬಂಧಿಸಿದ್ದರು. ಉತ್ತರ ಪ್ರದೇಶ ಮೂಲದ ಸುಹೇಲ್ (20) ಬಂಧಿತ ಆರೋಪಿ. ಈತ ಹರಿಹರದ ಬನ್ನಿಕೋಡು ಗ್ರಾಮದಲ್ಲಿ ಅಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಈತನ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ದೇಶದಲ್ಲಿ ದೊಡ್ಡ ಮಟ್ಟದ ಸಮಾಜಘಾತಕ ಚಟುವಟಿಕೆಗಳನ್ನು ಈತನ ಗ್ಯಾಂಗ್ ಯೋಜನೆ ರೂಪಿಸಿದ್ದ ವಿಚಾರ ಲಭ್ಯವಾಗಿದೆ. ನಾನು ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ಬಯಸಿದ್ದೆ ಎಂದು ಆತ ಪೊಲೀಸರ ಮುಂದೆ ಒಪ್ಪಿಕೊಂಡಿರುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಮೂಲತಃ ಉತ್ತರ ಪ್ರದೇಶದವನಾದ ಸುಹೇಲ್, ಕಳೆದ 15 ದಿನಗಳ ಹಿಂದೆಯಷ್ಟೇ ಹರಿಹರಕ್ಕೆ ಬಂದಿದ್ದನು. ಯಾರೂ ತನ್ನನ್ನು ಶಂಕಿಸಬಾರದು ಎಂಬ ಕಾರಣಕ್ಕೆ ಹರಿಹರದ ಪಕ್ಕದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಾ ಬನ್ನಿಕೋಡು ಗ್ರಾಮದಲ್ಲಿ ತಂಗಿದ್ದನು. ಜೂನ್ 3 ರಂದು ದಾವಣಗೆರೆಯಲ್ಲಿ ಬಂಧನಕ್ಕೊಳಗಾಗಿದ್ದ ಇತರ ಕೆಲವು ಶಂಕಿತ ಉಗ್ರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾಗ ಈ ಸುಹೇಲ್ ಹೆಸರು ಬೆಳಕಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ವಾಟ್ಸಪ್‌ನಲ್ಲಿ ಪಾಕ್ ನಂಟು ಸುಹೇಲ್‌ನ ಮೊಬೈಲ್ ಡೇಟಾವನ್ನು ರಿಟ್ರೀವ್ ಮಾಡಿದಾಗ ಆತನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪಾಕಿಸ್ತಾನದ ಲಿಂಕ್‌ಗಳು ಪತ್ತೆಯಾಗಿವೆ. ಈತ ಇನ್‌ಸ್ಟಾಗ್ರಾಮ್ ಚಾಟ್‌ಗಳ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದನು. ಈತನ ಮೊಬೈಲ್‌ನಲ್ಲಿ ಪಾಕಿಸ್ತಾನದ ಕೋಡ್ (+92) ಇರುವ ನಂಬರ್ ಒಂದನ್ನು ರಾಣಾ ಭಾಯ್ ಎಂದು ಸೇವ್ ಮಾಡಿಕೊಳ್ಳಲಾಗಿತ್ತು. ಇದರ ಜೊತೆಗೆ ದೇಶವಿರೋಧಿ ಚಟುವಟಿಕೆ ನಡೆಸುವ MEMON & JUTTU- 333 ಹಾಗೂ RANABHAI 333’ಎಂಬ ಗ್ರೂಪ್‌ಗಳಲ್ಲಿ ಈತ ಸಕ್ರಿಯ ಸದಸ್ಯನಾಗಿದ್ದನು. ಅಷ್ಟೇ ಅಲ್ಲದೇ ಉಗ್ರರನ್ನು ಹೋಲುವ ರೀತಿಯಲ್ಲಿ, ಕೈಯಲ್ಲಿ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಈತ ತೆಗೆಸಿಕೊಂಡಿದ್ದ ಫೋಟೋಗಳು ಮೊಬೈಲ್‌ನಲ್ಲಿ ಲಭ್ಯವಾಗಿವೆ. ನಿನ್ನೆ ಈತನನ್ನು ಬಂಧಿಸಿದ ಬಳಿಕ ತೀವ್ರ ವಿಚಾರಣೆಗಾಗಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ತದನಂತರ ಹೆಚ್ಚಿನ ತನಿಖೆ ಮತ್ತು ಪ್ರಕರಣದ ದಾಖಲಾತಿಗಾಗಿ ಇಂದು ಮತ್ತೆ ಹರಿಹರ ಗ್ರಾಮಾಂತರ ಠಾಣೆಗೆ ವಾಪಸ್ ಕರೆತರಲಾಗಿದ್ದು, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತನಿಖೆ ಮುಂದುವರಿದಿದೆ. ಶಂಕಿತ ಉಗ್ರನ ಬಂಧನದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪ್ರಾಥಮಿಕ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತ ಕೆಲಸ ಹುಡುಕಿಕೊಂಡು ದಾವಣಗೆರೆಗೆ ಬಂದಿದ್ದನು. ಪ್ರಾಥಮಿಕ ತನಿಖೆಯ ಪ್ರಕಾರ ಆತ ಚಾಟ್ ಮೂಲಕ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ. ಆತನ ಮೊಬೈಲ್‌ನಲ್ಲಿ ಕೆಲವು ಆಕ್ಷೇಪಾರ್ಹ ವಿಚಾರಗಳು ಪತ್ತೆಯಾಗಿವೆ. ಸದ್ಯ ಆರೋಪಿ ಪೊಲೀಸರ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರಿದಿದೆ. ತನಿಖೆಯ ನಂತರ ಮತ್ತಷ್ಟು ಹೆಚ್ಚಿನ ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ.
ದಾವಣಗೆರೆ: ಬನ್ನಿಕೋಡು ಗ್ರಾಮದಲ್ಲಿ ಸೆರೆಯಾಗಿದ್ದ ಶಂಕಿತ ಉಗ್ರ ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಸ್ಕೆಚ್ ಹಾಕಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರನೊಬ್ಬನನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ದಾವಣಗೆರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಿನ್ನೆ(ಜೂನ್ 23) ಯಶಸ್ವಿಯಾಗಿ ಬಂಧಿಸಿದ್ದರು. ಉತ್ತರ ಪ್ರದೇಶ ಮೂಲದ ಸುಹೇಲ್ (20) …
Read More »
Laxmi News 24×7