ಚಿಕ್ಕಬಳ್ಳಾಪುರ: ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ವೇಳೆ ಗದ್ದಲ ಗಲಾಟೆ ಜೋರಾಗಿದೆ. ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಆಚೆ ಕಳುಹಿಸುವಂತೆ ಕುಮಾರಸ್ವಾಮಿ, ಸಂಸದ ಡಾ.ಕೆ ಸುಧಾಕರ್ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಆಕ್ರೋಶಿತರನ್ನು ಸಮಾಧಾನಪಡಿಸುವ ಯತ್ನ ನಡೆಸಿದ್ರು. ಇಷ್ಟಾದ್ರೂ ಗಲಾಟೆ ಮುಂದುವರೆದಿದೆ. ಕಾರ್ಯಕ್ರಮದಿಂದ ತಮ್ಮ ಬೆಂಬಲಿಗರೊಂದಿಗೆ …
Read More »Monthly Archives: ಜೂನ್ 2026
ರಾಮಮಂದಿರಕ್ಕೆ ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೆ ಲೆಕ್ಕ ಎಲ್ಲಿ – ಬಿ.ಕೆ ಹರಿಪ್ರಸಾದ್ ಪ್ರಶ್ನೆ
ಬೆಂಗಳೂರು: ರಾಮ ಮಂದಿರಕ್ಕೆ ಮುಕೇಶ್ ಅಂಬಾನಿ 900 ಕೋಟಿ ಹಣ ದೇಣಿಗೆ ನೀಡಿದ್ದರು. ಅದಕ್ಕೆ ಲೆಕ್ಕ ಇಲ್ಲ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ಇತಿಹಾಸದಲ್ಲಿ ಮಹಮ್ಮದ್ ಘಜ್ನಿ ಬಿಟ್ಟರೆ ಬಿಜೆಪಿಯವರೇ ದೇಶವನ್ನ ಲೂಟಿ ಮಾಡಿದ್ದು ಎಂದು ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಮಂದಿರ ದೇಣಿಗೆ ವಿವಾದ ಕುರಿತು ಶಿವಸೇನೆ ಸಂಜಯ್ ರಾವತ್ ಪ್ರಶ್ನೆಕೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇತಿಹಾಸ ಅಂದ್ರೆ ಮಹಮ್ಮದ್ ಘಜ್ನಿ ಅಂತಾರೆ, …
Read More »ಶಾಲೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅತಿಥಿ ಶಿಕ್ಷಕ – ಹೃದಯಾಘಾತದಿಂದ ಸಾವು
ರಾಯಚೂರು: ಶಾಲೆಯಲ್ಲಿದ್ದಾಗಲೇ ಎದೆನೋವು ಕಾಣಿಸಿಕೊಂಡು ಯುವ ಅತಿಥಿ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ನಡೆದಿದೆ. ನಾಗರಬೆಂಚಿ ಗ್ರಾಮದ 29 ವರ್ಷದ ವೀರನಗೌಡ ಪಾಟೀಲ್ ಮೃತಪಟ್ಟಿರುವ ಶಿಕ್ಷಕ. ಮೆದಿಕಿನಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿದ್ದ ವೀರನಗೌಡ ಪಾಟೀಲ್ ಊಟದ ನಂತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಮಸ್ಕಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಚಿಕ್ಕವಯಸ್ಸಿನಲ್ಲೇ ಶಿಕ್ಷಕ …
Read More »ಕಾರಲ್ಲೇ ಪ್ರೇಮಿಗಳ ಗಲಾಟೆ – ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಯುವಕ ಆತ್ಮಹತ್ಯೆ
ತುಮಕೂರು: ಪ್ರೇಮಿಗಳ ನಡುವೆ ಕಾರಲ್ಲೇ ಗಲಾಟೆ ನಡೆದು, ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ. ನಾಗೇಂದ್ರ (30) ಸಜೀವ ದಹನವಾದ ವ್ಯಕ್ತಿ. ತುಮಕೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿಕೊಂಡಿದ್ದಾನೆ. ಇದರಿಂದ ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ. ಇದಕ್ಕೂ ಮುನ್ನ, ಕಾರಿನಲ್ಲಿದ್ದ ಯುವತಿ ತಲೆಗೆ ನಾಗೇಂದ್ರ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಕಾರಿನಲ್ಲಿ …
Read More »ತುರ್ತು ಪರಿಸ್ಥಿತಿ ಇದು ಕಾಂಗ್ರೆಸ್ಸ ಮಾಡಿದ ಪ್ರಜಾಪ್ರಭುತ್ವದ ಕಗ್ಗೊಲೆ: ವೀರಣ್ಣ ಚರಂತಿಮಠ
ತುರ್ತು ಪರಿಷ್ಥಿಯಲ್ಲಿ ಸೇರೆವಾಸ ಅನುಭವಿಸಿದ ಹಿರಿಯರಿಗೆ ಸನ್ಮಾನ ಬಾಗಲಕೋಟೆ : ೧೯೭೫ ಜೂನ ೨೫ ದೇಶದ ಪ್ರಜಾಪ್ರಭುತ್ವದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯವಾಗಿರುವ ತುರ್ತುಪರಿಸ್ಥಿತಿ ಹೇರಿದ ದಿನ. ತಮ್ಮ ಸ್ವಾರ್ಥ ಅಧಿಕಾರದ ಹಪಾಹಪಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಅಪಚಾರ ಬಗೆದು, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿತು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು. ಅವರು ನಗರದ ಶಿವಾನಂದ ಜಿನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ …
Read More »ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಬಾಗಲಕೋಟೆ ವಿಶ್ವವಿದ್ಯಾಲಯ ಡಿಸೆಂಬರ್ ಮತ್ತು ಜನೆವರಿಯಲ್ಲಿ ನಡೆಸಿದ 6ನೇಯ ಸೆಮಿಸ್ಟರ್ ಪರೀಕ್ಷೆ ಯಲ್ಲಿ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದು ಗಂಗಾ ಅಮಾತೆಪ್ಪನವರ ಜಾಹಿರಾತು ಮತ್ತು ಸಾಂಸ್ಥಿಕ ಸಂವಹನ ವಿಷಯಕ್ಕೆ 100ಕ್ಕೆ 100 ಮತ್ತು ಡಿಜಿಟಲ್ ಮಾಧ್ಯಮದ ಪರಿಚಯ ಪತ್ರಿಕೆಗೆ 98 ಅಂಕ ಪಡೆದರೆ, ಶಾಂತಾ ಪಾಟೀಲ ಪ್ರಥಮ ಪತ್ರಿಕೆಗೆ 80, ದ್ವಿತೀಯ ಪತ್ರಿಕೆಗೆ 89 ಹಾಗ ದೀಪಾ …
Read More »ಹಣ್ಣಿಗಾಗಿ ಸುತ್ತುವರಿದ ಕೋತಿಗಳು – ಹೆದರಿ ಬೆಟ್ಟದಿಂದ ಕಾಲುಜಾರಿ ಬಿದ್ದು ಮಹಿಳೆ ಸಾವು
ಚೆನ್ನೈ: ಹಣ್ಣಿಗಾಗಿ ಮುತ್ತಿಗೆ ಹಾಕಿದ ಕೋತಿಗಳಿಗೆ ಹೆದರಿ ನವವಿವಾಹಿತ ಮಹಿಳೆಯೊಬ್ಬರು ಬೆಟ್ಟದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. ತೂತುಕುಡಿಯ ದಕ್ಷಿಣ ತಿಟ್ಟಂಕುಳಂ ಪ್ರದೇಶದ ಅನಿತಾ ಮೃತ ದುರ್ದೈವಿ. ಕಳೆದ ತಿಂಗಳಷ್ಟೇ 29 ವರ್ಷದ ಸುರೇಶ್ ಅವರನ್ನು ವಿವಾಹವಾಗಿದ್ದರು. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಇತ್ತೀಚೆಗೆ ಮನೆಗೆ ಮರಳಿದ್ದರು. ದಂಪತಿ ಪೂಜೆ ಸಲ್ಲಿಸಲು ಕಜುಗುಮಲೈನಲ್ಲಿರುವ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮುಖ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ, …
Read More »ಪಾಲಿಕೆಯಲ್ಲಿ ಕರ್ನಾಟಕ ಪರ ಗೋತ್ತುವಳಿ ಮಂಡನೆಗೆ ಆಗ್ರಹಿಸಿ 101 ಈಡುಗಾಯಿ ಒಡೆದು ಪ್ರತಿಭಟನೆ
ಬೆಳಗಾವಿ: ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಆಗ್ರಹಿಸಿ ಕಳೆದ ನೂರು ದಿನಗಳಿಂದ ನಡೆದ ಕನ್ನಡ ಸಂಘಟನೆಗಳ ಹೋರಾಟ ಶುಕ್ರವಾರ ವಿಘ್ನೇಶ್ವರನನ್ನೂ ತಲುಪಿದೆ. ಕಳೆದ ಮಾರ್ಚ 26 ರಿಂದ ಆರಂಭವಾದ ಈ ಹೋರಾಟಕ್ಕೆ ಜೂನ್ 26 ರಂದು ನೂರು ದಿನಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಮುಂಜಾನೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 101 ಈಡುಗಾಯಿಗಳನ್ನು ಒಡೆಯುವ ಮೂಲಕ ಬೆಳಗಾವಿ ಪಾಲಿಕೆಯ …
Read More »ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ನಾಶಪಡಿಸಿದ ಪೊಲೀಸರು
ಬೆಳಗಾವಿ: ಬೆಳಗಾವಿ ಪೊಲೀಸ್ ಕಮೀಷನರೇಟ್ ಘಟಕದಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು. ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿಮಾಡಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳಲ್ಲಿ ಜಪ್ತಾದ ಮಾದಕ ವಸ್ತುಗಳಾದ 10,76,500 ರೂ ಮೌಲ್ಯದ 24ಕೆಜಿಗೂ ಅಧಿಕ ಗಾಂಜಾ (15 ಪ್ರಕರಣಗಳಲ್ಲಿ), 8,02,400 ರೂ. ಮೌಲ್ಯದ 120ಗ್ರಾಂ ಮತ್ತು 83ಮಿಲಿಗ್ರಾಂ ಹೆರಾಯಿನ್ (08 ಪ್ರಕರಣಗಳಲ್ಲಿ), 39,00,000 …
Read More »ಎಲ್‌ಇಡಿ ಬಲ್ಬ್ ನುಂಗಿದ ಎಂಟು ತಿಂಗಳ ಕಂದಮ್ಮ
ಮಡಿಕೇರಿ: ಎಂಟು ತಿಂಗಳ ಕಂದಮ್ಮ ಎಲ್‌ಇಡಿ ಬಲ್ಬ್ ನುಂಗಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದೆ. ಮನೆಯಲ್ಲಿದ್ದ ವೇಳೆ ಮಗು ಏಕಾಏಕಿ ವಿಪರೀತವಾಗಿ ಅಳಲು ಶುರುಮಾಡಿದ್ದು, ಗಾಬರಿಗೊಂಡ ಪೋಷಕರು ಕಾರಣ ತಿಳಿಯದೇ ಕೂಡಲೇ ಮಡಿಕೇರಿ ನಗರದ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಬಳಿಕ ಎಕ್ಸ್‌ರೇ ತೆಗೆಸಿ ನೋಡಿದಾಗ ಮಗುವಿನ ಗಂಟಲು ಭಾಗದಲ್ಲಿ ಸಣ್ಣ ಲೋಹದ ವಸ್ತು ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಆರಂಭದಲ್ಲಿ ಪಿನ್ ನುಂಗಿರಬಹುದೆಂದು …
Read More »
Laxmi News 24×7