ಬೆಂಗಳೂರು: ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ ನಟ ರಿಷಬ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕರಾವಳಿ ಪ್ರವಾಸೋದ್ಯಮ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇನ್ನು 20 ದಿನದಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿ ಪ್ರತ್ಯೇಕ ನೀತಿ ರಚನೆ ಮಾಡಲಾಗಿದೆ. ಪ್ರತ್ಯೇಕ ನೀತಿಯ ಬಗ್ಗೆ …
Read More »Monthly Archives: ಜೂನ್ 2026
ಗ್ಯಾರಂಟಿಗೆ ವೋಟರ್ ಐಡಿ ಕಡ್ಡಾಯ
ಬೆಂಗಳೂರು: ಗ್ಯಾರಂಟಿ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಆಧಾರ್ ಜೊತೆಗೆ ವೋಟರ್ ಐಡಿ ಇದ್ರೆ ಮಾತ್ರ ಗ್ಯಾರಂಟಿ ನೀಡಲು ಸರ್ಕಾರ ತೀರ್ಮಾನಿಸಿದೆ. ಗ್ಯಾರಂಟಿ ಪರಿಷ್ಕರಣೆ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಗ್ಯಾರಂಟಿ ಪರಿಷ್ಕರಣೆಗೆ ತೀರ್ಮಾನಿಸಲಾಗಿದೆ. ಫಲಾನುಭವಿಗಳ ರೀ-ವೇರಿಫಿಕೇಶನ್ ನಡೆಯಲಿದ್ದು, ಫಲಾನುಭವಿಗಳು ಹೊಸ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿದೆ. ಮರು ಪರಿಶೀಲನೆಗೆ ನಿಯೋಜಿತ ಅಧಿಕಾರಿಗಳು ಹೊಸ ಮರುಪರಿಶೀಲನಾ ಅರ್ಜಿ ತಗೆದುಕೊಂಡು ಹೋಗಿ ಮನೆ ಮನೆಗೆ …
Read More »ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿ ಶಿಫಾರಸು
ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬೆನ್ನಲ್ಲೇ ಇದೀಗ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಗ್ಯಾರಂಟಿ ಅನುಷ್ಠಾನ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶುಕ್ರವಾರ (ಜೂ.19) ನಡೆದ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಶಿಫಾರಸು ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯ ಎಂದು ಮುಖ್ಯಮಂತ್ರಿಗಳಿಗೆ ಸಮಿತಿ ಮನವಿ ಮಾಡಿವೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಗೆ ಸದ್ಯ 5,173 …
Read More »ಎಂಎಲ್‌ಸಿ ಚುನಾವಣೆಯಲ್ಲಿ ನಮಗೆ ಬಿದ್ದಿರುವುದು ಆತ್ಮಸಾಕ್ಷಿಯ ಮತಗಳು: ಸಚಿವ ಸತೀಶ್ ಜಾರಕಿಹೊಳಿ
ಎಂಎಲ್‌ಸಿ ಚುನಾವಣೆಯಲ್ಲಿ ಇಷ್ಟೊಂದು ಮತಗಳು ಬರುತ್ತವೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಕೇವಲ ನಾಲೈದು ಮತಗಳು ಬರಬಹುದು ಅಂದುಕೊಂಡಿದ್ದೆವು. ಆದರೆ ಇಲ್ಲಿ ಬಿದ್ದಿರುವುದು ಆತ್ಮಸಾಕ್ಷಿಯ ಮತಗಳು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ರಾಜಧಾನಿಯ ಅರಮನೆ ಮೈದಾನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿ ಮಾಡೆಲ್ ಈಗ ಕರ್ನಾಟಕದಲ್ಲೂ ಅನುಷ್ಠಾನಗೊಂಡಿದೆ. ನಾವು ಬಿಜೆಪಿಯ ಮಾಡೆಲ್ ಅನ್ನೇ ಅನುಕರಿಸಿದ್ದೇವೆ. ಇದು ಕುದುರೆ ವ್ಯಾಪಾರ ಅಲ್ಲ ಬದಲಿಗೆ ಇದೊಂದು ರಾಜಕೀಯ ತಂತ್ರಗಾರಿಕೆ ಎಂದು …
Read More »ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ: ಬೆಳಗಾವಿಯಲ್ಲಿ ನಡೆಯಲಿದೆ ನೇರ ಸಂದರ್ಶನ ಮತ್ತು ಉದ್ಯೋಗ ಮೇಳ
ಬೆಳಗಾವಿ: ಬೆಳಗಾವಿ ನಗರದ ಕಾ.ರಾ.ವಿ ಆಸ್ಪತ್ರೆ ಹಾಗೂ ಇಲ್ಲಿನ ಚಿಕಿತ್ಸಾಲಯಗಳಿಗೆ ಗುತ್ತಿಗೆ ಆಧಾರದ ಮೇಲೆ 5 ವಿಮಾ ವೈದ್ಯಾಧಿಕಾರಿಗಳನ್ನು (ಮೆರಿಟ್ ಕಮ್ ರೊಸ್ಟರ್) ಮೂಲಕ ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಜೂನ್ 24 ರಂದು ಬೆಳಗ್ಗೆ 10.30 ರಿಂದ ಸಂಜೆ 4, ಗಂಟೆಯವರೆಗೆ ಬೆಳಗಾವಿಯ ಕಾ.ರಾ.ವಿ ಆಸ್ಪತ್ರೆಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23324216 / 23324218 ಗೆ ಸಂಪರ್ಕಿಸಬಹುದು …
Read More »ಬೆಳಗಾವಿ ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 5 ಲಕ್ಷ ಮೌಲ್ಯದ ಅಫೀಮ್ ಜಪ್ತಿ
ಬೆಳಗಾವಿ: ರಾಜಸ್ಥಾನದ ಪಾಲಿಯಿಂದ ತಂದು ಬೆಳಗಾವಿಯ ಹಿಂಡಾಲ್ಕೋ ಫ್ಯಾಕ್ಟರಿ ಸಮೀಪ ಎನ್.ಹೆಚ್ 48 ಹೆದ್ದಾರಿಯ ಸರ್ವಿಸ್ ರಸ್ತೆಯ ಹತ್ತಿರ ಅಫೀಮ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಜಸ್ಥಾನದ ಮೂಲದ ರೋಪಿತನಾದ ಶುಭಂ ಮದನಲಾಲ ಶರ್ಮ (29) ಎಂಬಾತನನ್ನು ಬಂಧಿಸಲಾಗಿದೆ. ಈತ ಖೇತಾರಾಮ ಚೌಧರಿ ಎಂಬುವ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ಸಿಸಿಬಿ ವಿಭಾಗದ ಪಿಐ ರವರಾದ ಮಂಜುನಾಥ ನಾಯಿಕ ಹಾಗೂ ಸಿಬ್ಬಂದಿಯವರು ದಾಳಿ ಮಾಡಿದ್ದಾರೆ.ದಾಳಿ ವೇಳೆ 5,00,000 ರೂ. ಮೌಲ್ಯದ 1.048 …
Read More »ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ: ನೀರು ಮಿತವಾಗಿ ಬಳಸಲು ಬೆಳಗಾವಿ ಪಾಲಿಕೆ ಮನವಿ
ಬೆಳಗಾವಿ: ಪ್ರಸ್ತುತ ಮುಂಗಾರು ಮಳೆಯ ಅಭಾವದ ಕಾರಣ, ಬೆಳಗಾವಿ ಮಹಾನಗರಕ್ಕೆ ನೀರು ಸರಬರಾಜು ಮಾಡುವ, ರಕ್ಕಸಕೊಪ್ಪ ಜಲಾಶಯ ಹಾಗೂ ಹಿಡಕಲ್ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತವಾಗಿರುತ್ತದೆ. ಮಹಾನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆಯನ್ನು ನಿಭಾಯಿಸಲು ಈ ಕೆಳಗಿನಂತೆ ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಸ್ತುತ 24/7 ವಲಯಗಳಿಗೆ ದಿನನಿತ್ಯ 2 ತಾಸಿನವರೆಗೆ ನೀರನ್ನು ಸರಬರಾಜು ಮಾಡಲಾಗುವುದು. 4 ರಿಂದ 5 ದಿನಗಳಿಗೊಮ್ಮೆ 3 ರಿಂದ 4 ತಾಸಿನವರೆಗೆ ನೀರು ಸರಬರಾಜು …
Read More »ಗೋಕಾಕದ ಪಂಚನಟ್ಟಿ ಬಳಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ, ಇಬ್ಬರು ಯುವಕರು ಸ್ಥಳದಲ್ಲೇ ಸಾವು!
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಗೋಕಾಕ ತಾಲೂಕಿನ ಪಂಚನಟ್ಟಿ ಗ್ರಾಮದ ಬಳಿ ಇರುವ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಸ್ಥಳದಲ್ಲೇ ಇಬ್ಬರು ದುರದೈವಿಗಳು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರನ್ನು ಪಂಚನಟ್ಟಿ ಗ್ರಾಮದ ಈರಪ್ಪ ಮಲ್ಲಪ್ಪ ನಂದಿಗೌಡರ (32) ಮತ್ತು ಮಲ್ಲಪ್ಪ ಮಹಾದೇವ ನಂದಿಗೌಡರ …
Read More »ಧಾರವಾಡ ಕೋರ್ಟ್‌ಗೆ ಇ-ಮೇಲ್ ಬಾಂಬ್ ಬೆದರಿಕೆ – ಕಲಾಪ ಸ್ಥಗಿತ
ಧಾರವಾಡ: ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಕಲಾಪಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಹೊರಗೆ ಕಳುಹಿಸಲಾಯಿತು. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಅನುಮಾನಾಸ್ಪದ ಇ-ಮೇಲ್ ಬಂದಿದ್ದು, ಅದರಲ್ಲಿ ಬಾಂಬ್ ಸ್ಫೋಟದ ಬಗ್ಗೆ ಬೆದರಿಕೆ ಹಾಕಲಾಗಿದೆ. “Karunanidhi.kundi.@underworlddog” ಎಂಬ ಇ-ಮೇಲ್ ವಿಳಾಸದಿಂದ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆಗೆ …
Read More »ನಡು ರಸ್ತೆಯಲ್ಲಿ ತಲ್ವಾರ್‌ನಿಂದ ಬೃಹತ್ ಕೇಕ್ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್ – ಪುಂಡನ ವಿರುದ್ಧ ಎಫ್‌ಐಆರ್
ಚಿಕ್ಕಮಗಳೂರು: ಇಲ್ಲಿನ ವಾಜಪೇಯಿ ಲೇಔಟ್‌ನಲ್ಲಿ ಯುವಕರ ಗುಂಪೊಂದು ನಡು ರಸ್ತೆಯಲ್ಲಿ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿ, ಪುಂಡಾಟ ಮೆರೆದಿದೆ. ಮಹಮದ್ ಸಮೀರ್ ಎಂಬಾತ ಮಧ್ಯರಾತ್ರಿ ವೇಳೆ ರೌಡಿ ಸ್ಟೈಲ್‌ನಲ್ಲಿ ಕಾರಿನಿಂದ ಕೆಳಗಿಳಿದು ಲಾಂಗ್‌ನಿಂದ ಕೇಕ್ ಕತ್ತರಿಸಿದ್ದಾನೆ. ಸುಮಾರು 5 ಕೆಜಿಗೂ ಅಧಿಕ ತೂಕದ ಬೃಹತ್ ಕೇಕ್ ಕತ್ತರಿಸಲಾಗಿದೆ. ಈ ವೇಳೆ 10ಕ್ಕೂ ಹೆಚ್ಚು ಯುವಕರು ಸ್ಥಳದಲ್ಲಿದ್ದರು. ಇದನ್ನು ವಿಡಿಯೋ ಮಾಡಿದ್ದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್ …
Read More »
Laxmi News 24×7