Breaking News

ಪಬ್‌ನಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ರಾದ್ಧಾಂತ

Spread the love

ಬೆಂಗಳೂರು: ಪಬ್‌ನಲ್ಲಿ ಕುಡಿದ ಮತ್ತಿನಲ್ಲಿ ಅಬಕಾರಿ ಇನ್‌ಸ್ಪೆಕ್ಟರ್  ರಾದ್ಧಾಂತ ಮಾಡಿರುವ ಘಟನೆ ಜೆ.ಪಿ.ನಗರದಲ್ಲಿ  ನಡೆದಿದೆ. ಮಲ್ಲಪ್ಪ ಎಸ್ ಕುಂದಗೋಳ ಕುಡಿದು ಕಿರಿಕ್ ಮಾಡಿದ ಅಬಕಾರಿ ಇನ್ಸಪೆಕ್ಟರ್.

ಸರ್ಕಾರಿ ಐಡಿ ಕಾರ್ಡ್ ಹಾಕಿಕೊಂಡು ಇನ್‌ಸ್ಪೆಕ್ಟರ್ ಪಬ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಕಂಠಪೂರ್ತಿ ಕುಡಿದು ಸಿಕ್ಕಸಿಕ್ಕವರಿಗೆ ಅವಾಜ್ ಹಾಕಿದ್ದಾರೆ. ಇನ್‌ಸ್ಪೆಕ್ಟರ್ ರಾದ್ಧಾಂತದ ವೀಡಿಯೋ ಲಭ್ಯವಾಗಿದೆ.

ಪಬ್‌ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಜೊತೆಯೂ ಇನ್‌ಸ್ಪೆಕ್ಟರ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಮ್ಯಾನೇಜರ್‌ಗೂ ಅವಾಜ್ ಹಾಕಿದ್ದಾರೆ. ಅಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪಬ್‌ನಲ್ಲಿ ಜನ ಗುಂಪುಗಟ್ಟಿದ ಬೆನ್ನಲ್ಲೇ ಅಧಿಕಾರಿ ಹೊರನಡೆದಿದ್ದಾರೆ.

ಸಬ್ ಡಿವಿಸನ್ 11 ರಲ್ಲಿ ಕೆಲಸ ಮಾಡುತ್ತಿರುವ ಮಲ್ಲಪ್ಪ ಎಸ್ ಕುಂದಗೋಳ ಪಬ್‌ಗೆ ಹೋಗಿದ್ದರು. ಕುತ್ತಿಗೆಗೆ ಹಾಕಿರುವ ಐಡಿ ಕಾರ್ಡ್ ಕೂಡ ತೆಗೆಯದೇ ಕುಡಿದು ರಾದ್ಧಾಂತ ಮಾಡಿದ್ದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ