ತಮ್ಮ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ “ಬೆಳಗಾವಿ ಜಿಲ್ಲಾ ವಿಕಲಚೇತನರ ಒಕ್ಕೂಟ” ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿತು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ದಿವ್ಯಾಂಗರು ಈ ಸಂದರ್ಭದಲ್ಲಿ ಗುಡುಗಿದ್ದಾರೆ. ಬೆಳಗಾವಿ ಜಿಲ್ಲಾ ವಿಕಲಚೇತನರ ಒಕ್ಕೂಟದ ನೇತೃತ್ವದಲ್ಲಿ ನೂರಾರು ವಿಕಲಚೇತನರು ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು. ವಿಕಲಚೇತನರ ಮಾಸಿಕ ಪೋಷಣಾ ಭತ್ಯೆಯನ್ನು ಕನಿಷ್ಠ 6,000 ರೂಪಾಯಿಗಳಿಗೆ …
Read More »Monthly Archives: ಏಪ್ರಿಲ್ 2026
ಕುಂದಾನಗರಿಯಲ್ಲಿ ಮೊಳಗಿದ ಕಪೂರ್ ಕುಟುಂಬದ ಎವರ್‌ಗ್ರೀನ್ ಗೀತೆಗಳು
ಕುಂದಾನಗರಿಯಲ್ಲಿ ಮೊಳಗಿದ ಕಪೂರ್ ಕುಟುಂಬದ ಎವರ್‌ಗ್ರೀನ್ ಗೀತೆಗಳು: ಕಲಾವಿದರ ಸುಶ್ರಾವ್ಯ ಗಾಯನಕ್ಕೆ ಬೆಳಗಾವಿ ಫಿದಾ ಸ್ಪಂದನ ಮೆಲೋಡಿಸ್’ನ ವತಿಯಿಂದ ಜಾನೆ ಕಹಾ ಗಯೇ ವೋ ದಿನ್ ಕಾರ್ಯಕ್ರಮ ಬೆಳಗಾವಿಯ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಭವನದ ಸಹಯೋಗದಲ್ಲಿ “ಸ್ಪಂದನ ಮೆಲೋಡಿಸ್’ನ ವತಿಯಿಂದ ಜಾನೆ ಕಹಾ ಗಯೇ ವೋ ದಿನ್ ಕಪೂರ್ ಕುಟುಂಬದ ಚಲನಚಿತ್ರಗಳ ಗೀತೆಗಳ ಗಾಯನ ಸ್ಪರ್ಧೆ ನಡೆಯಿತು. ಬೆಳಗಾವಿಯ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಭವನದ …
Read More »ಜೆಎಂಎಫ್‌ಸಿ ನ್ಯಾಯಾಧೀಶೆ ಕಾಂತಮ್ಮ ಹೃದಯಾಘಾತದಿಂದ ನಿಧನ
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಿದ್ದ 43 ವರ್ಷದ ಜೆಎಂಎಫ್‌ಸಿ ನ್ಯಾಯಾಧೀಶೆ ಕಾಂತಮ್ಮ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಮಧುಗಿರಿಯಲ್ಲಿ ನ್ಯಾಯಾಧೀಶೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಂಚೆದೊಡ್ಡಿ ಗ್ರಾಮದವರಾದ ಕಾಂತಮ್ಮ ಅವರ ಅಕಾಲಿಕ ನಿಧನವು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
Read More »ಲೋಳಸೂರಿನ ಶಿವಾನಂದ ಡೋಣಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಬೆಳಗಾವಿ: ಸಮಾಜದ ಸ್ವಾಸ್ಥ್ಯ ಕೆಡಿಸುವ ಕ್ರೂರ ಕೃತ್ಯವೆಸಗಿದ ಆರೋಪಿಯೊಬ್ಬನಿಗೆ ಬೆಳಗಾವಿಯ ಫಾಸ್ಟ್ ಟ್ರ್ಯಾಕ್ ಪೋಕ್ಸೋ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿ ಶಿವಾನಂದ ಬಸವರಾಜ ಡೋಣಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಘಟನೆಯ ಹಿನ್ನೆಲೆ: ಗೋಕಾಕ ತಾಲೂಕಿನ ಲೋಳಸೂರ ಗ್ರಾಮದ ನಿವಾಸಿಯಾದ ಆರೋಪಿಯು, 2025ರಲ್ಲಿ ಬಾಲಕಿಯ ಮೇಲೆ ಪ್ರೀತಿಯ ನಾಟಕವಾಡಿ ಆಕೆಯನ್ನು ಅಪಹರಿಸಿದ್ದನು. ಬಳ್ಳಾರಿಗೆ ಕರೆದೊಯ್ದು ಬಾಲಕಿಯ …
Read More »ಕೌಟುಂಬಿಕ ಕಲಹ: ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು: ನಾದಿನಿಯ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ದಂಪತಿ ನಡುವೆ ಉಂಟಾದ ಕಲಹವೊಂದು ತಾರಕಕ್ಕೇರಿ, ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿಯಲ್ಲಿ ನಡೆದಿದೆ. ಮೋಟಗಾನಹಳ್ಳಿಯ ನಿವಾಸಿ ವಿನಯ್ ಎಂಬುವವರ ಪತ್ನಿ ಜೀವಿತಾ (26) ಮೃತಪಟ್ಟ ದುರ್ದೈವಿ. ಸುಮಾರು 6 ವರ್ಷಗಳ ಹಿಂದೆ ವಿನಯ್ ಮತ್ತು ಜೀವಿತಾ ಅವರ ವಿವಾಹ ನಡೆದಿತ್ತು. ವಿನಯ್ ಬಟ್ಟೆ ಕೈಮಗ್ಗ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಎರಡು ವರ್ಷದ ಒಂದು …
Read More »ವಿವಾಹಿತೆ ಮಹಿಳೆಯ ಬ್ಲಾಕ್ ಮೇಲ್ ಗೆ ಸಿಲುಕಿ ಯುವಕ ಆತ್ಮಹತ್ಯೆ..!?
ನೆಲಮಂಗಲ ಟೌನ್ ವಾಜರಹಳ್ಳಿಯಲ್ಲಿ ಘಟನೆ 28 ವರ್ಷದ ಯುವಕ ದಿಲೀಪ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಜಿಮ್ ಟ್ರೈನರ್ ಆಗಿದ್ದ ದಿಲೀಪ್ ಗೆ ಜಿಮ್ ನಲ್ಲಿ 42 ವರ್ಷದ ಯೋಗಿತಾ ಪರಿಚಯ ಆಗಿದ್ದಳು. ಮದುವೆ ಆಗಿದ್ದರೂ ದಿಲೀಪ್ ಜೊತೆ ಸಂಬಂಧ ಬೆಳೆಸಿ ಮಹಿಳೆ ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ದಿಲೀಪ್ ಸಾ*ವಿಗೆ ಯೋಗಿತಾ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದಿಲೀಪ್ ಮಹಿಳೆಗೆ ಕರೆ ಮಾಡಿ ಮನೆಯ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ರಾತ್ರಿ …
Read More »ಸಿಎಂ ಸ್ಥಾನ ಬದಲಾವಣೆ ಚರ್ಚೆ ಸಹಜ
ಬೆಳಗಾವಿ : ಎಲ್ಲ ಸರ್ಕಾರದಲ್ಲೂ ಸಿಎಂ ಬದಲಾವಣೆ ಚರ್ಚೆಗಳಾಗಿವೆ. ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಎಲ್ಲ ಸರ್ಕಾರದಲ್ಲೂ ಸಿಎಂ ಸ್ಥಾನದ ಆಕಾಂಕ್ಷಿಗಳು ಕೇಳಿಯೇ ಕೇಳುತ್ತಾರೆ. ತಂದೆಯವರೇ ಐದು ವರ್ಷದ ಅವಧಿ ಮುನ್ನಡೆಸಿಕೊಂಡು ಹೋಗಲಿ ಎಂಬುದು ನಮ್ಮ ವೈಯಕ್ತಿಕ ಬೇಡಿಕೆಯಾಗಿದ್ದು, ಈ ಚರ್ಚೆಗಳಿಗೆ ಮುಖ್ಯಮಂತ್ರಿಯೇ ಸ್ಪಷ್ಟನೆ ಕೊಟ್ಟಿರುವುದರಿಂದ ಹೆಚ್ಚಿಗೆ ಮಾತನಾಡಲಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಬೈಲಹೊಂಗಲ ತಾಲೂಕಿನ ಸುಖದೇವಾನಂದ ಮಠದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ …
Read More »ಪರಿಷ್ಕೃತ ಕೈಗಾರಿಕಾ ತುಟ್ಟಿಭತ್ಯೆ ಶೀಘ್ರ ಜಮೆಗೆ ನಿವೃತ್ತರಾದ ಪಿಂಚಣಿದಾರರ ಆಗ್ರಹ
ಬೆಳಗಾವಿ: ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನಿಂದ ನಿವೃತ್ತರಾದ ಪಿಂಚಣಿದಾರರಿಗೆ ಸರ್ಕಾರದಿಂದ ಬರಬೇಕಿರುವ ಪರಿಷ್ಕೃತ ಕೈಗಾರಿಕಾ ತುಟ್ಟಿಭತ್ಯೆ ಶೀಘ್ರ ಜಮೆ ಮಾಡುವಂತೆ ಆಗ್ರಹಿಸಿ ನಗರದ ಬಿಎಸ್‌ಎನ್‌ಎಲ್ ಕಚೇರಿ ಎದುರು ಗುರುವಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಅಖಿಲ ಭಾರತೀಯ ಬಿಎಸ್‌ಎನ್‌ಎಲ್ ಪಿಂಚಣಿದಾರರ ಸಂಘ ಸೇರಿದಂತೆ ಒಟ್ಟು 12 ಸಂಘಟನೆಗಳ ನೇತೃತ್ವದಲ್ಲಿ ಇಲ್ಲಿನ ಪ್ರಧಾನ ಕಚೇರಿ ಎದುರು ಸೇರಿದ ಪಿಂಚಣಿದಾರರು ತಮ್ಮ ಬೇಡಿಕೆಗಳನ್ನು ಶೀಘ್ರವೇ ಈಡೇರಿಸದೇ ಹೋದಲ್ಲಿ ಏ.30ರಂದು ದೇಶಾದ್ಯಂತ ಎಲ್ಲ ಬಿಎಸ್‌ಎನ್‌ಎಲ್ ಕಚೇರಿಗಳ ಎದುರು …
Read More »ನಷ್ಟದಲ್ಲಿರುವ ಉದ್ಯಮಗಳಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡದಂತೆ ಆಗ್ರಹ
ಬೆಳಗಾವಿ : ಬಿಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ ನಷ್ಟದಲ್ಲಿರುವ ಕೆಲವು ಕಾರ್ಖಾನೆ ಮತ್ತು ಉದ್ಯಮಗಳಿಗೆ ಕೋಟ್ಯಂತರ ರೂಪಾಯಿ ಸಾಲ ಕೊಡಲು ಮುಂದಾಗಿದ್ದ, ಇದು ಬ್ಯಾಂಕಿನ ಭವಿಷ್ಯಕ್ಕೆ ಮಾರಕವಾಗಲಿದ್ದು, ಆಡಳಿತ ಮಂಡಳಿ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಮುಂಬರುವ ಸಭೆಯಲ್ಲಿ ಸಾಲ ಮಂಜೂರಾತಿಗಾಗಿ ಈಗಾಗಲೇ ಅನೇಕ ಸಕ್ಕರೆ ಕಾರ್ಖಾನೆಗಗಳು ಹಾಗೂ ಕೆಲ ರಾಜಕಾರಣಿಗಳು ಜಮೀನು …
Read More »ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು
ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು ಅತ್ಯಂತ ಪ್ರಖರವಾಗಿವೆ ಎಂದು ಹಿರಿಯ ಸಾಹಿತಿ ಡಾ.ರಾಘವೇಂದ್ರ ಪಾಟೀಲ ಹೇಳಿದರು. ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಮಹಾಂತ ಭವನದಲ್ಲಿ ಏರ್ಪಡಿಸಿದ್ದ ಡಾ.ಬೆಟಗೇರಿ ಕೃಷ್ಣ್ಣಶರ್ಮ ಜಯಂತಿ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನವೋದಯದ ಪ್ರತಿಭಾವಂತ ಕವಿಯಾಗಿದ್ದ ಕೃಷ್ಣಶರ್ಮರು ಕಾವ್ಯಗಳಲ್ಲಿ ಸ್ತ್ರೀಗೆ …
Read More »
Laxmi News 24×7