ರಾಯಚೂರು: ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಮಿಂಚು ಸಹಿತ ಜೋರು ಮಳೆಯಾಗಿದ್ದು , ನಾನಾ ಅವಾಂತರ ಸಹ ಸೃಷ್ಟಿಯಾಗಿವೆ. ಲಿಂಗಸೂಗೂರು ತಾಲೂಕಿನ ಯರಜಂತಿ ಬಳಿ ಬಸವನ ಬಗಡಿ ದೊಡ್ಡಿಯಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವನ್ನಪ್ಪಿದ್ದಾರೆ. 40 ವರ್ಷದ ದುರುಗಮ್ಮ ಸಿಡಿಲಿಗೆ ಬಲಿಯಾದ ರೈತ ಮಹಿಳೆ. ಮಳೆ ಹಿನ್ನೆಲೆ ಬಣವೆಗೆ ತಾಡಪಾಲು ಹೊದಿಸುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …
Read More »Monthly Archives: ಏಪ್ರಿಲ್ 2026
ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿ ಬಂಧನ
ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಾಯಕನಹಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗುಂತ ಕೊಲಮ್ಮನಹಳ್ಳಿ ಗ್ರಾಮದ ಪಾಲಯ್ಯ ಜಿ (58) ಬಂಧಿತ ಆರೋಪಿ. ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಹಾಗು ಚಳ್ಳಕೆರೆ ಉಪ ಡಿವೈಎಸ್ಪಿ ಸತ್ಯನಾರಾಯಣ ರಾವ್ ಮಾರ್ಗದರ್ಶನದಲ್ಲಿ, ತಳಕು ಪೊಲೀಸ್ ವೃತ್ತ ನಿರೀಕ್ಷಕ …
Read More »ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ
ಬೆಂಗಳೂರು: ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಬಿ.ಟೆಕ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಡಿಶಾ ಮೂಲದ ಚಿನ್ಮಯ್ ಪ್ರಸಾದ್ ಸಾಹೋ ಎಂಬ ಯುವಕ ಕಣ್ಮರೆಯಾಗಿದ್ದಾನೆ. ಬಿ.ಟೆಕ್ ಓದಿಕೊಂಡಿರುವ ಚಿನ್ಮಯ್ ತನ್ನ ಗೆಳತಿಯೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಯುವಕ ಮತ್ತು ಯುವತಿ ಒಟ್ಟಿಗೆ ವಾಸವಾಗಿದ್ದು, ಕೆಲ ದಿನಗಳ ಹಿಂದೆ ಯುವಕ ಚಿನ್ಮಯ್ ಮೊಬೈಲ್‌ಗೆ ಆತನದ್ದೇ ಖಾಸಗಿ ಫೋಟೋಗಳು ಬಂದಿತ್ತು. ಸೈಬರ್ ವಂಚಕರು, ಇನ್ನೂ ಹಲವು ಖಾಸಗಿ ಫೋಟೋಗಳಿವೆ. …
Read More »ಸಂಪುಟ ಪುನರ್ ರಚನೆ ಮಾಡಲು ಹೈಕಮಾಂಡ್‌ಗೆ ಮನವಿ: ಬಂಗಾರಪೇಟೆ ನಾರಾಯಣಸ್ವಾಮಿ
ಬೆಂಗಳೂರು: ಸಂಪುಟ ಪುನರ್ ರಚನೆ ಮಾಡಬೇಕು ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ತಿಳಿಸಿದ್ದಾರೆ. ದೆಹಲಿಗೆ ಶಾಸಕರು ಹೋಗಿದ್ದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿಗೆ ಹೋಗಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದೇವೆ. ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳಿದ್ದೇವೆ. ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಮೇ ಮೊದಲ ವಾರದಲ್ಲಿ ಪುನಾರಚನೆ ಮಾಡುತ್ತೇವೆ ಎಂದಿದ್ದಾರೆ. ಸಂಪುಟ ಪುನಾರಚನೆ …
Read More »ನಾನು ಜೆಡಿಎಸ್‌ಗೆ ಹೋಗ್ತೀನಿ ಅನ್ನೋದು ಊಹಾಪೋಹ – ಜಮೀರ್ ಅಹ್ಮದ್ ಸ್ಪಷ್ಟನೆ
ಬೆಂಗಳೂರು: ನನಗೆ ಕಾಂಗ್ರೆಸ್ ಏನು ಕಡಿಮೆ ಮಾಡಿಲ್ಲ. ನಾನು ಯಾಕೆ ಜೆಡಿಎಸ್‌ಗೆ ಹೋಗಲಿ. ನಾನು ಜೆಡಿಎಸ್‌ಗೆ ಹೋಗುತ್ತೇನೆ ಅನ್ನೋದು ಊಹಾಪೋಹ ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಜಮೀರ್ ಜೆಡಿಎಸ್‌ಗೆ ಹೋಗುತ್ತಾರೆ, ಕುಮಾರಸ್ವಾಮಿ ಜೊತೆ ರಹಸ್ಯ ಮಾತುಕತೆ ಮಾಡಿದ್ದಾರೆ ಎಂಬ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಥೂ..ಥೂ…ನಾನು ಯಾಕೆ ಜೆಡಿಎಸ್‌ಗೆ ಹೋಗಲಿ. ಇದೆಲ್ಲ ಊಹಾಪೋಹ ಸುದ್ದಿ ಎಂದರು. ನಾನು ಜೆಡಿಎಸ್ ಬಿಟ್ಟು ಬಂದು ಮತ್ತೆ ಯಾಕೆ ಹೋಗಲಿ? ಕಾಂಗ್ರೆಸ್ …
Read More »ಬೆಂಗ್ಳೂರಲ್ಲಿ ಜೀವಂತ ಗ್ರೆನೇಡ್ ಪತ್ತೆ ಕೇಸ್ – 7 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್‌ಐಎ ಕೋರ್ಟ್
ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, 7 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಎನ್‌ಐಎ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಇಂದು (ಏ.21) ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 7 ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. …
Read More »ಬಿಸಿಲ ತಾಪಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾವು
ಬೆಳಗಾವಿ: ಹಿಟ್ ಸ್ಟ್ರೋಕ್‌ಗೆ ರಾಜ್ಯದಲ್ಲಿ ಎರಡನೇಯ ಬಲಿಯಾಗಿದೆ. ಬಿಸಿಲಿನ ತಾಪಕ್ಕೆ ಬೆಳಗಾವಿ ಜಿಲ್ಲೆಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ವೆಂಕಟೇಶ್ ಬಳ್ಳಾರಿ (35) ಮೃತ ದುರ್ದೈವಿ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸೋಮವಾರ (ಏ.21) ಬಸವೇಶ್ವರ ಜಯಂತಿ ಸಂದರ್ಭದಲ್ಲಿ ಫೋಟೋ ಪೂಜೆ ಬಳಿಕ ಮೆರವಣಿಗೆ ಸಂದರ್ಭದಲ್ಲಿ ತಲೆ ತಿರುಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು …
Read More »ರಾಹುಲ್ ಗಾಂಧಿ ಕೋಲ್ಕತ್ತಾ ಭೇಟಿ ರದ್ದು – ಅನುಮತಿ ನಿರಾಕರಣೆಗೆ ದೀದಿ ಸರ್ಕಾರವೇ ಕಾರಣ: ಕಾಂಗ್ರೆಸ್ ಆರೋಪ
ಕೋಲ್ಕತ್ತಾ: ಸ್ಥಳೀಯ ಆಡಳಿತವು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆ ಏ.23 ರಂದು ನಿಗದಿಯಾಗಿದ್ದ ರಾಹುಲ್ ಗಾಂಧಿ ಅವರ ಕೋಲ್ಕತ್ತಾ ಭೇಟಿಯನ್ನ ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ರಾಹುಲ್ ಗಾಂಧಿ ಕೋಲ್ಕತ್ತಾಗೆ ಭೇಟಿ ನೀಡಬೇಕಿತ್ತು. ಆದ್ರೆ ಮಮತಾ ಬ್ಯಾನರ್ಜಿ ಸರ್ಕಾರ ಉದ್ದೇಶಪೂರ್ವಕವಾಗಿ ಅನುಮತಿ ನಿರಾಕರಿಸಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಮಮತಾ ಬ್ಯಾನರ್ಜಿ ಸರ್ಕಾರದ ಆದೇಶದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ …
Read More »ಮಬನೂರ ಗ್ರಾಮದೇವತೆ ಜಾತ್ರೆ ಮಹೋತ್ಸವದಲ್ಲಿ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಭಾಗಿ
ಸವದತ್ತಿ : ತಾಲೂಕಿನ ಮಬನೂರ ಗ್ರಾಮದೇವತೆ ಜಾತ್ರೆ ಮಹೋತ್ಸವದಲ್ಲಿ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಭಾಗಿಯಾಗಿ ದೇವಿ ಆಶೀರ್ವಾದ ಪಡೆದರು. ನಂತರ ಊರಿನ ಹಿರಿಯರು ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.
Read More »ಮಬನೂರ ಗ್ರಾಮದೇವತೆ ಜಾತ್ರೆ ಮಹೋತ್ಸವದಲ್ಲಿ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಭಾಗಿ
ಮಬನೂರ ಗ್ರಾಮದೇವತೆ ಜಾತ್ರೆ ಮಹೋತ್ಸವದಲ್ಲಿ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಭಾಗಿ. ಸವದತ್ತಿ : ತಾಲೂಕಿನ ಮಬನೂರ ಗ್ರಾಮದೇವತೆ ಜಾತ್ರೆ ಮಹೋತ್ಸವದಲ್ಲಿ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಭಾಗಿಯಾಗಿ ದೇವಿ ಆಶೀರ್ವಾದ ಪಡೆದರು. ನಂತರ ಊರಿನ ಹಿರಿಯರು ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಗೆ ಸತ್ಕಾರ ಮಾಡಿದರು.
Read More »
Laxmi News 24×7