Breaking News

ರಾಯಚೂರಿನಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವು – ತೆಂಗಿನ ಮರ ಸುಟ್ಟು ಭಸ್ಮ

Spread the love

ರಾಯಚೂರು: ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಮಿಂಚು ಸಹಿತ ಜೋರು ಮಳೆಯಾಗಿದ್ದು , ನಾನಾ ಅವಾಂತರ ಸಹ ಸೃಷ್ಟಿಯಾಗಿವೆ. ಲಿಂಗಸೂಗೂರು  ತಾಲೂಕಿನ ಯರಜಂತಿ ಬಳಿ ಬಸವನ ಬಗಡಿ ದೊಡ್ಡಿಯಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವನ್ನಪ್ಪಿದ್ದಾರೆ.

40 ವರ್ಷದ ದುರುಗಮ್ಮ ಸಿಡಿಲಿಗೆ ಬಲಿಯಾದ ರೈತ ಮಹಿಳೆ. ಮಳೆ ಹಿನ್ನೆಲೆ ಬಣವೆಗೆ ತಾಡಪಾಲು ಹೊದಿಸುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಾನ್ವಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಸಿಡಿಲು ಬಡಿದು ಮರ ಹೊತ್ತಿ ಉರಿಯುವುದು ಕಂಡು ಜನ ಆತಂಕಕ್ಕೊಳಗಾಗಿದ್ದರು. ರಾಯಚೂರು ನಗರದಲ್ಲೂ ಸುಮಾರು ಹೊತ್ತು ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟ ಬಿಸಿಲನಾಡು ಜನರಿಗೆ ಒಂದೆಡೆ ಮಳೆ ತಂಪೆರೆದರೆ ಇನ್ನೊಂದಡೆ ಸಿಡಿಲು ಬಡಿದು ಅನಾಹುತ ಸಂಭವಿಸಿದೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ