Breaking News
Home / 2021 / ಜುಲೈ / 16 (page 3)

Daily Archives: ಜುಲೈ 16, 2021

ಭಾರತದಲ್ಲಿ ಕಳೆದ 24ಗಂಟೆಯಲ್ಲಿ 38,949 ಕೋವಿಡ್ ಪ್ರಕರಣ ಪತ್ತೆ, 542 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಕಳೆದ 24ಗಂಟೆಯಲ್ಲಿ 39,949 ಕೋವಿಡ್ ಪ್ರಕರಣ ವರದಿಯಾಗಿದೆ. ಅಲ್ಲದೇ 542 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ (ಜುಲೈ 16) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.   ದೇಶದಲ್ಲಿ ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ 4,30,422ಕ್ಕೆ ಏರಿಕೆಯಾಗಿದೆ. ಕಳೆದ 24ಗಂಟೆಯಲ್ಲಿ 542 ಮಂದಿ ಸಾವನ್ನಪ್ಪಿದ್ದು, 40,026 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ …

Read More »

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಧಾರವಾಡ ನಗರದ ಲಕಮನಹಳ್ಳಿ ಬಡಾವಣೆಯಲ್ಲಿ ಸುಮಾರು 10 ಎಕರೆ ಅನಧಿಕೃತ ಲೇಔಟ್‌ಗಳ ತೆರವು

ಧಾರವಾಡ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಧಾರವಾಡ ನಗರದ ಲಕಮನಹಳ್ಳಿ ಬಡಾವಣೆಯಲ್ಲಿ ಸುಮಾರು 10 ಎಕರೆ ಅನಧಿಕೃತ ಲೇಔಟ್‌ಗಳನ್ನು ತೆರವುಗೊಳಿಸಲಾಯಿತು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತ್ರತ್ವದಲ್ಲಿ ನಡೆದ ಈ ಕಾರ್ಯಾಚರಣೆ ವೇಳೆ ಲೇಔಟ್ನ ಕಲ್ಲುಗಳನ್ನು, ವಿದ್ಯುತ್‌ಕಂಬಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು. ಒಂದು ವಾರದ ಹಿಂದೆ ಇದೇ ಲೇಔಟ್ ತೆರವುಗೊಳಿಸಿದ್ದರೂ ಸಹ ಪ್ಲಾಟ್ ಕಲ್ಲುಗಳನ್ನು ಹಾಕಲಾಗಿತ್ತು. ಹೀಗಾಗಿ ಇದಿಗ ಮತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಈ ಬಗ್ಗೆ ಟಿವಿ-9 ಡಿಜಿಟಲ್ …

Read More »

ವಿಶೇಷ ವಿಮಾನದಲ್ಲಿ ದಿಢೀರ್ ದೆಹಲಿಗೆ ಸಿಎಂ ಯಡಿಯೂರಪ್ಪ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಭೇಟಿ -ಚರ್ಚೆ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಸಂಝೆ 6.30 ರಿಂದ ರಾತ್ರಿ 8 ಗಂಟೆಯ ಒಳಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮೇಕೆದಾಟು ಜಲಾಶಯ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಿದ್ದಾರೆ. ಈಗಾಗಲೇ ಅಧಿಕಾರಿಗಳು ದೆಹಲಿಗೆ ತೆರಳಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸಿಎಮ ಚರ್ಚಿಸಲಿದ್ದಾರೆ. ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ, ಡಿಸಿಎಂ ಗೋವಿಂದ …

Read More »

ಈ ವರ್ಷ ಜಿ.ಪಂ., ತಾ.ಪಂ. ಚುನಾವಣೆ ಇಲ್ಲ

ಬೆಂಗಳೂರು: ಕೊರೊನಾ 3ನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಜಿ.ಪಂ. ಮತ್ತು ತಾ. ಪಂ. ಚುನಾವಣೆಗಳನ್ನು ಈ ವರ್ಷಾಂತ್ಯದ ವರೆಗೆ ನಡೆಸದಿರಲು ಸರಕಾರ ನಿರ್ಧರಿಸಿದೆ. ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿ.ಪಂ., ತಾ.ಪಂ. ಚುನಾವಣೆ ನಡೆಯದಿದ್ದರೂ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಲು ಸರಕಾರ ಮುಂದಾಗಿದೆ. ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಚುನಾವಣೆಗೆ ಅವಕಾಶ ನೀಡಲು ಸಚಿವ ಸಂಪುಟ …

Read More »

ಎಸಿಬಿ ದಾಳಿ: 9 ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲು

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮೇಲೆ ಸಮರ ಸಾರಿದ್ದ ಎಸಿಬಿ ಅಧಿಕಾರಿಗಳು ಇಂದು ಒಟ್ಟು 9 ಸರ್ಕಾರಿ ನೌಕರರಿಗೆ ಸೇರಿದ 43 ಸ್ಥಳಗಳಲ್ಲಿ ಒಟ್ಟು 310 ಅಧಿಕಾರಿಗಳಿಂದ 43 ತಂಡಗಳಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಬೆಳಕಿಗೆ ಬಂದಿದೆ. ದಾಳಿಯಲ್ಲಿ ಸಿಕ್ಕ ಆಸ್ತಿ-ಪಾಸ್ತಿ, ಚಿನ್ನ ಹಣದ ಅಂಕಿ ಅಂಶಗಳು ಹೀಗಿವೆ.. 1. ಜಿ ಶ್ರೀಧರ್- ಕಾರ್ಯ ಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಡಿಸಿ ಕಚೇರಿ ಮಂಗಳೂರು. …

Read More »

ಎಸಿಬಿ ದಾಳಿ; ಸರ್ಕಾರಿ ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ನೋಟು, ಚಿನ್ನಾಭರಣ ಪತ್ತೆ

ಬೀದರ್​​: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇರೆಗೆ ಇಂದು ಎಸಿಬಿ ಅಧಿಕಾರಿಗಳು ಜಿಲ್ಲೆಯ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಿರಿಯ ಅಭಿಯಂತರ ಸುರೇಶ್ ಮೋರೆ ಮನೆ ಹಾಗೂ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ. ಸುರೇಶ್ ಮೋರೆ ಮೂಲತಃ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದ ನಿವಾಸಿಯಾಗಿದ್ದಾರೆ. ಹೀಗಾಗಿ …

Read More »

ಕನ್ನಡ ನಿರ್ಲಕ್ಷ್ಯಸಿದ ಸಚಿವರ ವಿರುದ್ದ ಕನ್ನಡಾಭಿಮಾನಿಗಳ ಆಕ್ರೋಶ

ಚಿಕ್ಕೋಡಿ: ಕರ್ನಾಟಕದ ಸಚಿವೆಯಾಗಿದ್ದರೂ, ತಮ್ಮ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮರಾಠಿ ಪ್ರೇಮವನ್ನು ಮತ್ತೆ ಮುಂದುವರೆಸಿದ್ದಾರೆ. ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಏತ ನೀರಾವರಿ ಉದ್ಘಾಟನೆ ಸಂದರ್ಭದಲ್ಲಿ ಸಂಪೂರ್ಣವಾಗಿ ಮರಾಠಿ ಭಾಷೆಯಲ್ಲಿ ಬ್ಯಾನರ್ ಅಳವಡಿಸಿದ್ದ ಸಮಾರಂಭದಲ್ಲಿ ಶಶಿಕಲಾ ಜೊಲ್ಲೆ ಅವರು ಭಾಗಿಯಾಗುವುದರ ಜೊತೆಗೆ ಮರಾಠಿ ಭಾಷೆಯ ಪ್ರೇಮವನ್ನು ಎತ್ತಿ ತೋರಿಸಿದ್ದಾರೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಮಂಜೂರಾದ 1 ಕೋಟಿ 49 ಲಕ್ಷ ರೂ. ಮೊತ್ತದಲ್ಲಿ …

Read More »

ಬೆಳಗಾವಿಯ ಹೊರ ವಲಯದಲ್ಲಿ ಕಂಟೇನರ್​ಗೆ ಲಾರಿ ಡಿಕ್ಕಿ

ಬೆಳಗಾವಿ: ಕಂಟೇನರ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯ ಹೊರ ವಲಯದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಳಿಯ ವಂಟಮೂರಿ ಘಾಟ್‍ನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಶಿಗ್ಗಾಂವಿ ಕಡೆಯಿಂದ ಮಹಾರಾಷ್ಟ್ರಕ್ಕೆ ಮೆಕ್ಕೆಜೋಳದ ಹಿಟ್ಟನ್ನು ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್, ರಾಷ್ಟ್ರೀಯ ಹೆದ್ದಾರಿ-4ರ ಸುತಗಟ್ಟಿ ಇಳಿಜಾರು ಪ್ರದೇಶದಲ್ಲಿ ಡಿವೈಡರ್ ಹಾರಿ ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ …

Read More »

ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ವರನಹೊಂಡ ಎಂಬಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ನೀಲಮ್ಮ (60) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆಗೆ ಆಗಮಿಸುತ್ತಿದ್ದ ಟಾಟಾ …

Read More »

ಸುಮಲತಾ ಹೋರಾಟಕ್ಕೆ ರೈತ ಸಂಘದಿಂದ ಸಂಪೂರ್ಣ ಬೆಂಬಲ: ಚಾಮರಸ ಮಾಲಿಪಾಟೀಲ್

ರಾಯಚೂರು: ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಹೋರಾಟಕ್ಕೆ ರಾಜ್ಯ ರೈತ ಸಂಘದಿಂದ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಚಾಮರಸ ಮಾಲಿಪಾಟೀಲ್‍ರವರು, ರಾಜ್ಯದ ಹಲವೆಡೆ ಅಕ್ರಮ ಕಲ್ಲುಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಮಂಡ್ಯ ಜಿಲ್ಲೆಯ ಬೇಬಿಬೆಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅದೂ ಕೆಆರ್‍ಎಸ್ ನಿಂದ 5-6 ಕಿ.ಮೀನಲ್ಲಿ ಗಣಿಗಾರಿಕೆ ನಡೆಯುತ್ತಿದೆ. 20 ಕಿ.ಮೀ ಒಳಗೆ …

Read More »