Home / 2021 / ಜುಲೈ / 14 (page 3)

Daily Archives: ಜುಲೈ 14, 2021

ಬೆಳಗಾವಿ: ಅಗ್ನಿಶಾಮಕ ದಳದವರಿಗೆ ಮುಖ್ಯಮಂತ್ರಿ ಪದಕ ಪ್ರದಾನ

ಬೆಳಗಾವಿ: 2015ರಿಂದ 2020ರ ಅವಧಿಯಲ್ಲಿ ಶ್ಲಾಘನೀಯ ಕಾರ್ಯನಿರ್ವಹಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಯ ಸಿಬ್ಬಂದಿಗೆ ಮುಖ್ಯಮಂತ್ರಿಯವರ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಮಂಗಳವಾರ ಪ್ರದಾನ ಮಾಡಿದರು. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲಿನಲ್ಲಿ ಸಮಾರಂಭದಲ್ಲಿ, ಇಲ್ಲಿನ ಅಗ್ನಿಶಾಮಕ ಠಾಣೆಯ ಪ್ರಕಾಶ್ ಶಿಂಧೆ, ರಾಜ್ಯ ವಿಪತ್ತು ಸ್ಪಂದನಾ ಪಡೆ ‘ಸಿ’ ಕಂಪನಿಯ ಅಜಿತ ದುಂಡಪ್ಪ ಹಾಗೂ ಕಿರಣ ಕುರಬೇಟ ಪದಕಕ್ಕೆ …

Read More »

ಗ್ರಾಮದೇವರಿಗೆ ಕೈಮುಗಿದ.. ಬಳಿಕ ಗಣೇಶ ವಿಗ್ರಹವನ್ನೇ ಕದ್ದ

ಧಾರವಾಡ: ದೇವರಿಗೆ ಕೈ ಮುಗಿಯಲು ಬಂದ ವ್ಯಕ್ತಿ ದೇವರ ಮೂರ್ತಿಯನ್ನೆ ದರೋಡೆ ಮಾಡಿ ಪರಾರಿಯಾದ ವಿಕ್ಷಿಪ್ತ ಘಟನೆಯೊಂದು ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗ್ರಾಮದೇವಿಯ ದೇವಸ್ಥಾನದಲ್ಲಿ ಗ್ರಾಮಸ್ಥರು ಬೆಳ್ಳಿ ಲೇಪಿತ ಗಣೇಶನ ಪ್ರದರ್ಶಿತ ಮೂರ್ತಿಯನ್ನ ಪ್ರತಿಷ್ಟಾಪಿಸಿದ್ದರು. ಈ ವಿಗ್ರಹದ ಮೇಲೆ ಕಳ್ಳನೊಬ್ಬನ ಕಣ್ಣು ಬಿದ್ದಿದ್ದು ಆ ವಿಗ್ರಹ ಶುದ್ಧ ಬೆಳ್ಳಿಯ ಮೂರ್ತಿಯೆಂದು ನಂಬಿ ದರೋಡೆ ಮಾಡಲು ಸಂಚು ರೂಪಿಸಿದ್ದಾನೆ. ತಡರಾತ್ರಿ ಭಕ್ತರ ಸೋಗಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಕಳ್ಳ …

Read More »

ಹುಬ್ಬಳ್ಳಿ ರೌಡಿಶೀಟರ್​​ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಲಾಭುರಾಮ್ ರೌಡಿಶೀಟರ್​​ಗಳಿಗೆ ವಾರ್ನ್

ಹುಬ್ಬಳ್ಳಿ: ರೌಡಿಶೀಟರ್​​ಗಳ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಲಾಭುರಾಮ್ ರೌಡಿಶೀಟರ್​​ಗಳಿಗೆ ವಾರ್ನ್ ಮಾಡಿದ್ದಾರೆ. ಛೋಟಾ ಮುಂಬೈ ಎಂದೇ ಕರೆಯಲಾಗುವ ಅವಳಿ ನಗರದಲ್ಲಿ ಲಾಕ್​ಡೌನ್​ ಓಪನ್​ ಆದಾಗಿನಿಂದ ಹತ್ಯೆ ಪ್ರಕರಣಗಳು ಜಾಸ್ತಿಯಾಗಿದೆ ಎನ್ನಲಾಗಿದೆ. ಹೀಗಾಗಿ, ಹುಬ್ಬಳ್ಳಿ-ಧಾರವಾಡ ನಗರದ ರೌಡಿಗಳ ಮನೆಗೆ ಕಮಿಷನರ್ ವಾರ್ನ್ ಮಾಡಿದ್ದಾರೆ. ಈ ಹಿನ್ನೆಲೆ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಹು-ಧಾ ನಗರದ 570ಕ್ಕೂ ಹೆಚ್ಚು ಜನ …

Read More »

ಈ ವರ್ಷವೂ ಪಠ್ಯಕ್ರಮ ಕಡಿತ : ಕಲಿಕಾ ಅಂತರ ಇನ್ನಷ್ಟು ಹೆಚ್ಚು ಸಾಧ್ಯತೆ

ಕೊರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿ ಆರಂಭ ವಿಳಂಬವಾಗುತ್ತಿರುವುದರಿಂದ ಪ್ರಸಕ್ತ ಸಾಲಿಗೂ ಶೇ.30ರಷ್ಟು ಪಠ್ಯ ಕಡಿತಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. 2020-21ನೇ ಸಾಲಿನಲ್ಲಿ ಕೊರೊನಾದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆಯದೇ ಇರುವ ಹಿನ್ನೆಲೆಯಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೇ.30ರಷ್ಟು ಪಠ್ಯ ಕಡಿತ ಮಾಡಿ, ಉಳಿದ ಶೇ.70ರಷ್ಟು ಪಠ್ಯದಂತೆ ತರಗತಿಗಳನ್ನು ಆನ್‌ಲೈನ್‌, ಆಫ್ಲೈನ್‌ ವ್ಯವಸ್ಥೆ ಮೂಲಕ ನಡೆಸಲಾಗಿತ್ತು ಮತ್ತು ಸದ್ಯ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಶೇ.70ರಷ್ಟು ಪಠ್ಯದಂತೆಯೇ …

Read More »

ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದಾನೆ.

ಬೆಳಗಾವಿ: ನಾಗಾಲ್ಯಾಂಡ್​ನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಅಪಘಾತವಾಗಿ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರ ಇಂದು (ಜುಲೈ 13) ಸ್ವಗ್ರಾಮಕ್ಕೆ ಆಗಮಿಸಿದೆ. ತಂದೆಯ ಪಾರ್ಥಿವ ಶರೀರವನ್ನು ಯೊಧನ ಮಗ ಸೇನೆಯ ಸಮವಸ್ತ್ರ ಧರಿಸಿ ಸ್ವಾಗತಿಸಿದ್ದಾನೆ. ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಾಪುರ ಗ್ರಾಮದ ಮಂಜುನಾಥ ಗೌಡನ್ನವರ ಮೃತ ಯೋಧ. ಗ್ರಾಮಕ್ಕೆ ಪಾರ್ಥಿವ ಶರೀರ ಬರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಪಾರ್ಥಿವ ಶರೀರ ಬರುವ ದಾರಿಯಲ್ಲಿ ಹೂವನ್ನು ಹಾಕಿ, ಕೈಯಲ್ಲಿ ದೇಶದ ಭಾವುಟ …

Read More »

ಅಂಬರೀಷ್ ಅವರ ಅಂತಿಮ ಸಂಸ್ಕಾರದ ಸಲುವಾಗಿ ವೆಚ್ಚ ಮಾಡಿರುವ ಹಣ ಎಷ್ಟು ಎಂಬುದು ಸರ್ಕಾರದ ಬಳಿ ಮಾಹಿತಿ ಇಲ್ಲ: ಭೀಮಪ್ಪ ಗಡಾದ

ಬೆಳಗಾವಿ : ಮಾಜಿ ಸಚಿವ ದಿ. ಅಂಬರೀಷ್ ಅವರ ಅಂತಿಮ ಸಂಸ್ಕಾರದ ಸಲುವಾಗಿ ವೆಚ್ಚ ಮಾಡಿರುವ ಹಣ ಎಷ್ಟು ಎಂಬುದು ಸರ್ಕಾರದ ಬಳಿ ಮಾಹಿತಿ ಇಲ್ಲ. ಈ ಮಾಹಿತಿ ಯಾರ ಬಳಿ ಇದೆ ಎಂಬುದೂ ಮುಖ್ಯ ಕಾರ್ಯದರ್ಶಿಯವರ ಕಚೇರಿಯವರಿಗೆ ಗೊತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ. ಅಂಬರೀಷ್ ಅವರ ವೈದ್ಯಕೀಯ ಉಪಚಾರಕ್ಕಾಗಿ ಸರ್ಕಾರದಿಂದ ವೆಚ್ಚ ಮಾಡಿದ ಹಣ, ಹಾಗೂ ಅಂತಿಮ ಸಂಸ್ಕಾರಕ್ಕೆ ವೆಚ್ಚ ಮಾಡಿರುವುದು ಹಾಗೂ …

Read More »

ಕನ್ನಡದಲ್ಲಿ ಬ್ಯಾಂಕ್ ಪರೀಕ್ಷೆ : ಕೇಂದ್ರದಿಂದ ಸಮಿತಿ ರಚನೆ

ಬೆಂಗಳೂರು : ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಕ್ಲರ್ಕ್ ನೇಮಕ ಪರೀಕ್ಷೆಯನ್ನು ಸದ್ಯಕ್ಕೆ ಕೈಬಿಟ್ಟಿರುವ ಕೇಂದ್ರ ಸರ್ಕಾರ ಕನ್ನಡಿಗರ ಹೋರಾಟಕ್ಕೆ ಮಣಿದಿದ್ದು, ಗ್ರಾಮೀಣ ಬ್ಯಾಂಕುಗಳಲ್ಲಿನ ಹುದ್ದೆಗಳ ನೇಮಕಕ್ಕೆ ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪರೀಕ್ಷೆಗೆ ತಡೆ ನೀಡಲಾಗಿದೆ. 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲರಿಕಲ್ ಕೇಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಕೇವಲ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ …

Read More »

ನಟ ವಿಜಯ್ ಗೆ 1 ಲಕ್ಷ ರೂ. ದಂಡ!

ಐಷಾರಾಮಿ ರೋಲ್ಸ್ ರಾಯ್ಸ್ ಗೋಸ್ಟ್ ಕಾರಿಗೆ 6.95ರಿಂದ 7.95 ಕೋಟಿ ರೂ.ಗೆ ವಿಧಿಸಿರುವ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು ಎಂದು ಕೋರಿದ್ದ ತಮಿಳು ನಟ ವಿಜಯ್ ಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯಮ್ ನೇತೃತ್ವದ ಪೀಠ, 2012ರಲ್ಲಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದೂ ಅಲ್ಲದೇ 1 ಲಕ್ಷ ರೂ. ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸೂಚಿಸಿದೆ. ಇತ್ತೀಚೆಗಷ್ಟೇ …

Read More »

ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ

ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ. ಚಿಕ್ಕೋಡಿ ಗ್ರೇಡ್ 2 ತಹಸಿಲ್ದಾರ ಜಮಾದಾರ ಎನ್ನುವಾತ ಮಾನಗೇಡಿ ಕೃತ್ಯ ಮಾಡಿದಾತ. ತಾಲೂಕಿನ ಮಹಿಳೆಯೊಬ್ಬಳ ಪತಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ತನಗೆ ವಿಧವಾ ಮಾಸಾಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದಾಳೆ. ಆಕೆಯ ಪುತ್ರ ಈ ಸಂಬಂಧ ಹಲವು ಬಾರಿ ತಹಸಿಲ್ದಾರ ಕಚೇರಿಗೆ ಬಂದಿದ್ದಾನೆ. ಆದರೆ ಕೆಲಸ ಮಾಡಿಕಕೊಡದ ಜಮಾದಾರ, ತಾಯಿಯನ್ನು ಕಚೇರಿಗೆ …

Read More »

ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ : ಈ ತಿಂಗಳ ಅಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ!

ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಮಾಸಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.   ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸ್ಥಿರತೆ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಮಾಸಾಂತ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದ್ದು, ಈ ತಿಂಗಳ ಅಂತ್ಯಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.   ಪ್ರತಿ ಬ್ಯಾರೆಲ್ …

Read More »