Breaking News
Home / 2021 / ಜುಲೈ / 14 (page 2)

Daily Archives: ಜುಲೈ 14, 2021

ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು.

ಕೊಪ್ಪಳ: ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು. ನಿಜ! ಸಾಧಿಸುವ ಛಲ ಇದ್ರೆ ಪಡೆಯುವ ಹುಚ್ಚು ಇರಬೇಕು ಅಂತಾರೆ. ಅದರಂತೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ತಾನು ಕಲಿತ ಚಿತ್ರಕಲೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.   ಹೌದು! ಕಲೆಯೆನ್ನುವುದೇ ಹಾಗೆ ಒಂದು ಸಲ ಅದರ ಹುಚ್ಚು ಹಿಡಿದ್ರೆ, ಬರಿ ಬಣ್ಣ ಹಾಗೂ ಪೆನ್ಸಿಲ್​, ಪೇಂಟಿಂಗ್ ಬ್ರಷ್​ಗಳ ಮಧ್ಯೆ ಕಲಾವಿದರು ತಮ್ಮ ಕಾಲವನ್ನು ಕಳೆಯುತ್ತಾರೆ. ಕೊಪ್ಪಳದ …

Read More »

‘ಒಂದಾಗಿದ್ವಿ, ಒಂದಾಗಿರೋಣ’: ಒಟ್ಟಿಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ತೆರೆಬೀಳುವ ಸಾಧ್ಯತೆ ಇದೆ. ನಿನ್ನೆಯಿಂದ ಭಾರಿ ಸದ್ದು ಮಾಡಿದ್ದ ವಂಚನೆ ಪ್ರಕರಣಕ್ಕೆ ದರ್ಶನ್ ಮತ್ತು ಉಮಾಪತಿ ಇಬ್ಬರು ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈ ಪ್ರಕರಣದಿಂದ ದರ್ಶನ್ ಮತ್ತು ಉಮಾಪತಿ ನಡುವಿನ ಸ್ನೇಹ ಸಂಬಂಧ ಮುರಿದು ಬಿತ್ತು ಎನ್ನುವ ಅನುಮಾನ ಎಲ್ಲರಲ್ಲೂ ಕಾಡಿತ್ತು. ಆದರೀಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಒಂದಾಗಿದ್ವಿ, ಒಂದಾಗಿರೋಣ ಎಂಡಿದ್ದಾರೆ. ಮೈಸೂರಿನಿಂದ …

Read More »

ಬರಹಗಾರ ಟಿಕೆ ದಯಾನಂದ್‌ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದ ಟಾಲಿವುಡ್

ಕನ್ನಡ ಚಿತ್ರರಂಗವನ್ನು ಪರಭಾಷಿಕರು ಬಹಳ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಕನ್ನಡದ ಸಿನಿಮಾಗಳು, ಕತೆಗಳ ಆಯ್ಕೆ ಕುರಿತು ಹೆಚ್ಚು ಗಮನ ಕೊಡುತ್ತಿದ್ದಾರೆ. ಕರ್ನಾಟಕದಾಚೆ ಕನ್ನಡ ತಂತ್ರಜ್ಞರು ಮಿಂಚುತ್ತಿರುವ ಸಮಯ ಇದು. ಇದೀಗ, ಕನ್ನಡದ ಖ್ಯಾತ ಬರಹಗಾರ ಟಿಕೆ ದಯಾನಂದ್ ಅವರಿಗೆ ಟಾಲಿವುಡ್‌ನಿಂದ ಅವಕಾಶ ಹುಡುಕಿಕೊಂಡು ಬಂದಿದೆ. ಬೆಲ್ ಬಾಟಮ್, ಆಕ್ಟ್ 1978 ಅಂತಹ ಚಿತ್ರಗಳಿಗೆ ಕಥೆ-ಸಂಭಾಷಣೆ ರಚಿಸಿರುವ ಟಿಕೆ ದಯಾನಂದ್ ಕೆಲಸ ಮೆಚ್ಚಿಕೊಂಡ ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ ರೆಡ್ ಕಾರ್ಪೆಟ್ ಹಾಕಿ …

Read More »

‘ಲವ್ 360’ಗಾಗಿ ಮೇಘಾ ಶೆಟ್ಟಿಯನ್ನು ಸಂಪರ್ಕಿಸಿದ ನಿರ್ದೇಶಕ ಶಶಾಂಕ್

ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ “ಲವ್ 360” ನಲ್ಲಿ ನವ ನಾಯಕ ಪ್ರವೀಣ್ ಅವರನ್ನು ತೆರೆಗೆ ತರಲಿದ್ದಾರೆ. ಈ ಚಿತ್ರಕ್ಕಾಗಿ ನಾಯಕಿಯ ಆಯ್ಕೆ ಅಂತಿಮಗೊಳಿಸಲು ನಿರ್ದೇಶಕರು ಹುಡುಕಾಟದಲ್ಲಿದ್ದಾರೆ. ಮತ್ತು, ಇತ್ತೀಚಿನ ಮಾಹಿತಿಯಂತೆ ಈ ಪಾತ್ರಕ್ಕಾಗಿ ಜನಪ್ರಿಯ ಕಿರುತೆರೆ ನಟಿ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ. ಮೇಘಾ ತನ್ನ ಚೊಚ್ಚಲ ಟಿವಿ ಧಾರಾವಾಹಿ “ಜೊತೆ ಜೊತೆಯಲಿ”ಮೂಲಕ ಖ್ಯಾತರಾಗಿದ್ದಾರೆ. ಇದೀಗ ಅವರು ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್” ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. …

Read More »

ತೆರೆಮೇಲೆ ಸೌರವ್ ಗಂಗೂಲಿ ಜೀವನಚರಿತ್ರೆ: ದಾದಾ ಪಾತ್ರದಲ್ಲಿ ಸ್ಟಾರ್ ನಟ

ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ, ದಾದಾ ಎಂದೇ ಖ್ಯಾತಿಗಳಿಸಿರುವ ಸೌರವ್ ಗಂಗೂಲಿ ಜೀವನಚರಿತ್ರೆ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ತನ್ನ ಜೀವನವನ್ನು ಸಿನಿಮಾ ಮಾಡಲು ದಾದಾ ಗಂಗೂಲಿ ಅನುಮತಿ ನೀಡಿದ್ದಾರೆ. ಈಗಾಗಲೇ ಸಾಕಷ್ಟು ಕ್ರಿಕೆಟ್ ಆಟಗಾರರ ಜೀವನ ತೆರೆಮೇಲೆ ಬಂದಿದೆ ಮತ್ತು ಬರಲು ಸಿದ್ಧವಾಗುತ್ತಿದೆ. ಇದೀಗ ಗಂಗೂಲಿ ಬಯೋಪಿಕ್ ಕೂಡ ಸೇರಿಕೊಂಡಿದ್ದಾರೆ. ಇತ್ತೀಚಿಗೆ ಮತ್ತೋರ್ವ ಖ್ಯಾತ ಆಟಗಾರ ಸುರೇಶ್ ರೈನಾ ಬಯೋಪಿಕ್ ಸುದ್ದಿಯಲ್ಲಿತ್ತು. ಅಲ್ಲದೆ ತನ್ನ ಬಯೋಪಿಕ್ ಸೌತ್ …

Read More »

ಟೂರಿಸ್ಟ್​ ವ್ಯಾನ್​ ಸುತ್ತುವರೆದ ದೈತ್ಯಾಕಾರದ 3 ಹುಲಿಗಳು

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಂದಿಷ್ಟು ಕ್ಯೂಟ್​ ವಿಡಿಯೋಗಳಾಗಿದ್ದರೆ ಇನ್ನು ಕೆಲವು ಬೆಚ್ಚಿಬೀಳಿಸುವ ಕಥೆಯನ್ನು ಹೇಳುತ್ತವೆ. ಕೆಲವು ಭಯಾನಕ ಸನ್ನಿವೇಶಗಳೂ ಸಹ ಭಾರೀ ಚರ್ಚೆಯಾಗುತ್ತವೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ(Viral Video) ಕೂಡಾ ಅಂಥದ್ದೇ! ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಭಯವಾಗುತ್ತದೆ. ಕೆಲವರು ಇಂಥಹ ಭಯಾನಕ ದೃಶ್ಯವನ್ನು ಇನ್ನೂ ನೋಡಿಲ್ಲ ಎಂದು ಹೇಳಿದ್ದರೆ ಇನ್ನೊರ್ವರು, ನಾನಲ್ಲಿದ್ದಿದ್ದರೆ ಹೃದಯ ಬಡಿತವೇ ನಿಂತೋಗ್ಬಿಟ್ತಿತ್ತೇನೋ.. ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಭಾರೀ ಸುದ್ದಿಯಲ್ಲಿರುವುದಂತೂ …

Read More »

ರಾಜ್ಯದಲ್ಲಿ ಮುಂದಿನ ವಾರ ಮತ್ತೊಂದು ಸುತ್ತಿನ ಅನ್​ಲಾಕ್​: ನೈಟ್​ ಕರ್ಫ್ಯೂನಿಂದ ವಿನಾಯ್ತಿ, ಪಬ್​ಗಳು ಪುನಾರಂಭ ಸಾಧ್ಯತೆ

ಕೊರೊನಾ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್​ಲಾಕ್​ 4.0 ಜಾರಿಗೆ ಚಿಂತನೆ ನಡೆಸಿದೆ. ಜುಲೈ 19ರಿಂದ ಅನ್​ಲಾಕ್​ 4.0 ಜಾರಿಗೆ ಬರಲಿದ್ದು ಈ ಮೂಲಕ ಸದ್ಯ ಚಾಲ್ತಿಯಲ್ಲಿರುವ ನೈಟ್​ ಕರ್ಫ್ಯೂಗೂ ಸರ್ಕಾರ ಇತಿಶ್ರೀ ಹೇಳುವ ಸಾಧ್ಯತೆ ಇದೆ. ಅನ್​ಲಾಕ್​​ 3.0ದಲ್ಲಿ ರಾಜ್ಯ ಸರ್ಕಾರ ವೀಕೆಂಡ್​ ಕರ್ಫ್ಯೂವನ್ನ ತೆರವುಗೊಳಿಸಿತ್ತು. ಹೀಗಾಗಿ ಸದ್ಯ ಜಾರಿಯಲ್ಲಿರುವ ನೈಟ್​ ಕರ್ಫ್ಯೂ ಕೂಡ ಮುಂದಿನ ವಾರದಿಂದ ತೆರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕ …

Read More »

ದಕ್ಷ ಅಧಿಕಾರಿ ಅಣ್ಣಾಮಲೈ ಹಾದಿಯಲ್ಲಿ ರವಿ.ಡಿ.ಚನ್ನಣ್ಣನವರ್ ?

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಿಷ್ಠೆ, ಪ್ರಮಾಣಿಕ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ ನಡೆ ತೀವ್ರ ಕೂತುಹಲ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಚೆನ್ನಣ್ಣನವರನ್ನು ಈಚೆಗೆ ರಾಜ್ಯ ಸರ್ಕಾರ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಿದೆ. ಪ್ರಸ್ತುತ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮಠಯಾತ್ರೆ ಕೈಗೊಂಡಿರುವ ಅವರು, ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ, ಕಾಗಿನೆಲೆ ಪೀಠಕ್ಕೆ …

Read More »

ಮಹಾರಾಷ್ಟ್ರ ಕಡೆಯಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ಪ್ರವೇಶ

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಆ ರಾಜ್ಯಗಳಿಂದ ಬರುವ ವಾಹನಗಳನ್ನು ತಡೆದು‌ ಕೋವಿಡ್ ನೆಗೆಟಿವ್ ಪ್ರಮಾಣಪತ್ರ (ಆರ್‌ಟಿಪಿಸಿಆರ್) ಕೇಳಲಾಗುತ್ತಿದೆ. ಇರುವವರಿಗೆ ಮಾತ್ರವೇ ಪ್ರವೇಶ ನೀಡಲಾಗುತ್ತಿದೆ. ಇಲ್ಲವಾದಲ್ಲಿ ವಾಪಸ್ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಕಾಗವಾಡ ಹಾಗೂ ಕೊಗನೋಳ್ಳಿ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ನಸುಕಿನಲ್ಲಿ ಕೆಲವು ಖಾಸಗಿ ಬಸ್‌ಗಳನ್ನು ವಾಪಸ್ ಕಳುಹಿಸಲಾಗಿದೆ. ಅವರ ಬಳಿ …

Read More »

‘ಪೊಲೀಸ್ ಪೇದೆಯ ಎಸ್​ಪಿ ಮಾಡ್ತೀನಿ ಹುಷಾರ್’ -SP ವೇದಮೂರ್ತಿಗೆ ಆರ್​.ಶಂಕರ್ ಎಚ್ಚರಿಕೆ

ಯಾದಗಿರಿ: ಜಿಲ್ಲಾ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್, ಎಸ್​ಪಿ ವೇದಮೂರ್ತಿಗೆ ಕ್ಲಾಸ್​​ ತೆಗೆದುಕೊಂಡ ಪ್ರಸಂಗ ನಡೆಯಿತು. ಜಿಲ್ಲೆಯ ದೋರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಆರ್ ಶಂಕರ್, ಜನರ ಬಳಿ ತೆರಳಿ ಅವರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಸಚಿವರಿಂದ ದೂರ ನಿಲ್ಲುತ್ತಿದ್ದ ಎಸ್ಪಿ ವೇದಮೂರ್ತಿಯನ್ನು ಕರೆದು ಪಕ್ಕದಲ್ಲಿ ನಿಂತು ಜನರ ಸಮಸ್ಯೆ ಆಲಿಸುವಂತೆ ಹೇಳಿದ್ದಾರೆ.   ಹೀಗಿದ್ದರೂ ಮತ್ತೆ ಸಚಿವರಿಂದ ಅಂತರ ಕಾಯ್ದುಕೊಂಡು ದೂರದಲ್ಲಿ ವೇದಮೂರ್ತಿ …

Read More »