Breaking News
Home / 2021 / ಜುಲೈ / 10 (page 3)

Daily Archives: ಜುಲೈ 10, 2021

ಜಯಂತ ಕಾಯ್ಕಿಣಿ, ಆರತಿಗೆ ‘ಕಸಾಪ ದತ್ತಿ ಪ್ರಶಸ್ತಿ’

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಮನೋಹರ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ಗೆ ಸಾಹಿತಿ ಜಯಂತ ಕಾಯ್ಕಿಣಿ ಹಾಗೂ ‘ಎ. ಪಂಕಜ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿ ಎಚ್‌.ಎನ್. ಆರತಿ ಆಯ್ಕೆಯಾಗಿದ್ದಾರೆ. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಶುಕ್ರವಾರ ಈ ಆಯ್ಕೆಗಳು ನಡೆದಿವೆ. ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿವೆ ಎಂದು ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಕೋವಿಡ್: ಬಾಗಲಕೋಟೆಯಲ್ಲಿ ಶೂನ್ಯ ಪ್ರಕರಣ; ರಾಜ್ಯದಲ್ಲಿಂದು 3045 ಸೋಂಕಿತರು ಗುಣಮುಖ

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ ( ದಿನಾಂಕ:08.07.2021,00:00 ರಿಂದ 23:59 ರವರೆಗೆ) ಯಲ್ಲಿ 2290 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ ಹಾಗೂ 68 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜುಲೈ 09) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ 3045 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರ …

Read More »

ವಿಜಯಪುರ ಕಲ್ಲು ಗಣಿಗಾರಿಕೆ ಸ್ಫೋಟಕ ಪ್ರಕರಣ ತನಿಖೆ ನಡೆಯುತ್ತಿದೆ : ನಿರಾಣಿ

ವಿಜಯಪುರ : ಗುರುವಾರ ಸಂಜೆ ವಿಜಯಪುರ ನಗರದ ಹೊರ ವಲಯದಲ್ಲಿನ ಕಲ್ಲು ಗಣಿಗಾರಿಕೆ ಯಲ್ಲಿ‌ ನಡೆದ ಸ್ಫೋಟದ ದುರಂತದ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಹೊರ ಬರಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಗಣಿ- ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಶುಕ್ರವಾರ ದುರಂತ ನಡೆದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ‌ ಮಾತನಾಡಿದ ಅವರು, ಅಲಿಯಾಬಾದ್, ಐನಾಪುರ …

Read More »

ಪ್ರಿಯಕರನ ಮನೆಯಲ್ಲೇ ವಿವಾಹಿತ ಯುವತಿ ಸಾವು : ಯುವತಿ ಪೋಷಕರಿಂದ ಪ್ರಿಯಕರನ ಮನೆಗೆ ಬೆಂಕಿ

ಬಾಗಲಕೋಟೆ: ವಿವಾಹಿತ ಯುವತಿಯ ಸಾವಿಗೆ ಆಕೆಯ ಪ್ರಿಯಕರನೇ ಕಾರಣ ಎಂದು ಆರೋಪಿಸಿದ ಯುವತಿಯ ಪೋಷಕರು ಪ್ರಿಯಕರನ ಮನೆಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರ ಗ್ರಾಮದಲ್ಲಿ ನಡೆದಿದೆ. ಕೆಲೂರ ಗ್ರಾಮದ ವಿವಾಹಿತ ಯುವತಿ ಬಸಮ್ಮ ಪ್ರಿಯಕರನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಇದನ್ನು ಕಂಡು ಆಕ್ರೋಷಗೊಂಡ ಯುವತಿಯ ಪೋಷಕರು ಯುವತಿಯ ಸಾವಿಗೆ ಪ್ರೀಯಕರ ರಂಜೀತ್ ಕಾರಣ ಎಂದು ಪ್ರಿಯಕರನ ಮನೆಗೆ ಬೆಂಕಿಹಚ್ಚಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ರಂಜೀತ್ …

Read More »

ಎಚ್ಡಿಕೆ-ಸುಮಲತಾ ವಾಕ್ ಸಮರ ತಮಾಷೆಯಾಗಿದೆ ,ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ: ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಸವದಿ

ವಿಜಯಪುರ: ಮಂಡ್ಯ ಅಕ್ರಮ ಗಣಿಗಾರಿಕೆ ಹಾಗೂ ಕೆ ಆರ್ ಎಸ್ ಜಲಾಶಯದ ವಿಷಯದಲ್ಲಿ ಮಾಜಿ ಸಿ.ಎಂ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ಮಧ್ತೆ ನಡೆಯುತ್ತಿರುವ ವಾಕ್ಸಮರ ಜೋರಾಗಿದೆ. ಇಬ್ಬರ ಹೇಳಿಕಗಳು ಜನರಿಗೆ ನೋಡಲು, ಕೇಳಲು ತಮಾಷೆಯಾಗಿದ್ದರೂ ಕೇಳಲು ನಮಗೆ ಸಮಯವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಇಬ್ಬರನ್ನೂ ಕುಟುಕಿದ್ದಾರೆ. ಶುಕ್ರವಾರ ಸಂಜೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೃಷ್ಣರಾಜ ಸಾಗರ ಜಲಾಶಯದ ಕುರಿತು ಮುಖ್ಯ ಅಭಿಯಂತರರಿಂದ ಸರ್ಕಾರ ಸ್ಪಷ್ಟಿಕರಣ …

Read More »

ಯೋಗೀಶ್ ಗೌಡ ಕೊಲೆ ಪ್ರಕರಣ : ವಿನಯ್ ಆಪ್ತ ಸೊಮು ನ್ಯಾಮಗೌಡ ನ್ಯಾಯಾಂಗ ಬಂಧನ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಿಬಿಐ ವಶಕ್ಕೆ ಪಡೆದಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿ ಸೋಮು ನ್ಯಾಮಗೌಡ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಈಗಾಗಲೇ ಹಲವು ಬಾರಿ ಸೋಮು ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಗುರುವಾರ ಬೆಳಗ್ಗೆ ಗದಗದಲ್ಲಿ ನ್ಯಾಮಗೌಡ ಅವರನ್ನು ವಶಕ್ಕೆ ತೆಗೆದುಕೊಂಡು ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆ ಗೆ ಒಳಪಡಿಸಲಾಗಿತ್ತು. ಶುಕ್ರವಾರ …

Read More »

ಇದೇ 25ರಂದು ಕೆ-ಸೆಟ್ ಪರೀಕ್ಷೆ

 ಕೊರೊನಾ ಹಿನ್ನೆಲೆ ಮುಂದೂಡಲಾಗಿದ್ದ ಕೆ-ಸೆಟ್( ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ)ಯನ್ನು ಇದೇ ತಿಂಗಳ 25ರಂದು ನಡೆಯಲಿದೆ. ಮರುದಿನ ನಿಗದಿ ಮಾಡಿ ಮೈಸೂರು ವಿವಿ ಪ್ರಕಣೆಯಲ್ಲಿ ತಿಳಿಸಿದೆ. ಈ ಹಿಂದೆ ಏಪ್ರಿಲ್ 11ರಂದು ಕೆ-ಸೆಟ್ ಪರೀಕ್ಷೆಯನ್ನು ನಿಗದಿ ಮಾಡಲಾಗಿದ್ದು. ಕೋವಿಡ್ 2ನೇ ಅಲೆಯಿಂದಾಗಿ ಪರೀಕ್ಷೆಯನ್ನು ಮುಂದೂಡಿ ವಿಶ್ವವಿದ್ಯಾಲಯವು ಆದೇಶ ಹೊರಡಿಸಿತ್ತು. ಇದೀಗ ಜುಲೈ 25ರಂದು ಪರೀಕ್ಷೆ ನಡೆಯಲಿದೆ ಎಂದು ಮೈಸೂರು ವಿವಿ ತಿಳಿಸಿದೆ.

Read More »