Daily Archives: ಏಪ್ರಿಲ್ 12, 2021

ಜಾರಕಿಹೊಳಿ ಸಿಡಿ ಪ್ರಕರಣ: ಸಿಡಿ ಲೇಡಿ ಹೇಳಿಕೆ ಯುಟರ್ನ್, ಏನಿದರ ಸತ್ಯಾಸತ್ಯತೆ?

ಬೆಂಗಳೂರು, ಏಪ್ರಿಲ್ 12: ಕೊರೋನಾ ಎರಡನೇ ಅಲೆ ಹಾಗೂ ಸಾರಿಗೆ ನೌಕರರ ಮುಷ್ಕರದ ಗದ್ದಲದೊಳಗೆ ಕಣ್ಮರೆಯಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೋಮವಾರ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಸಿಡಿ ಸಂತ್ರಸ್ತ ಯುವತಿ “ಸಿಡಿ ಪ್ರಕರಣದ ವಾಸ್ತವವನ್ನು ಎಸ್‌ಐಟಿ ಅಧಿಕಾರಿಗಳ ಮುಂದೆ ಬಿಚ್ಚಿಡಲು ಕೇಳಿಕೊಂಡಿದ್ದಾಳೆ ಎಂಬ ವಿಷಯ ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ. ಸಿಡಿ ಲೇಡಿ ನಿಜವಾಗಿಯೂ ಉಲ್ಟಾ ಹೊಡೆದಿದ್ದಾಳಾ ? ಅಥವಾ ಮುಂದೆ ಯು ಟರ್ನ್ ಹೊಡೆಯಲಿದ್ದಾಳಾ ? ಒಂದು …

Read More »

ಕೊರೊನಾ ಕೂಪವಾಯ್ತು ಬೆಂಗಳೂರು : ಇಂದು ಮತ್ತೆ ಕೊರೊನಾ ಬ್ಲಾಸ್ಟ್ Corona

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಿದೆ. ನಗರದ ಗಲ್ಲಿ ಗಲ್ಲಿಯಲ್ಲೂ ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಒಂದೇ ದಿನ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಮೆಟ್ರೋ ಮಂದಿಗೆ ಆಘಾತ ನೀಡಿದ್ದರೇ ಇಂದು ಮತ್ತೆ ಕೊರೊನಾ ಬ್ಲಾಸ್ಟ್ ಆಗುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಇಂದು 6574 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮುಖ್ಯವಾಗಿ ಬೆಂಗಳೂರು ದಕ್ಷಿಣ ವಿಭಾಗದಲ್ಲೇ ಅತಿ ಹೆಚ್ಚು …

Read More »

ಹಬ್ಬಕ್ಕೆ ಬರಲು ಆಗುತ್ತಿಲ್ಲ: ಪೂನಾದಲ್ಲಿ ಸಿಲುಕಿದ ಕಾರ್ಮಿಕರಿಂದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ

ಯಾದಗಿರಿ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಆತಂಕ ತಲೆದೋರಿದ್ದು ದಿನೇ ದಿನೇ ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಕಾರ್ಮಿಕರು ವಾಪಸ್ ಬರುತ್ತಿದ್ದಾರೆ. ರಾಜ್ಯದ ಸಾರಿಗೆ ನೌಕರರ ಮುಷ್ಕರದ ಬಿಸಿ ಈಗ ಮಹಾರಾಷ್ಟ್ರದಲ್ಲಿ ನೆಲೆಸಿರುವ ರಾಜ್ಯದ ಕಾರ್ಮಿಕರಿಗೆ ತಟ್ಟಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಾಗಿರುವ ಕೊರೋನಾ ಆತಂಕ ಹಾಗೂ ಯುಗಾದಿ ಹಬ್ಬಕ್ಕೆ ವಾಪಸ್ ಊರಿಗೆ ತೆರಬೇಕೆಂದಿರುವ ಜನರಿಗೆ ಈಗ ರಾಜ್ಯದ ಸಾರಿಗೆ ಮುಷ್ಕರ ಸಂಕಷ್ಟ ತಂದಿದ. ಊರಿಗೆ ಬರಲು ಕಾರ್ಮಿಕರು ಪರದಾಡುವಂತಾಗಿದೆ. ಮಹಾರಾಷ್ಟ್ರದ ಪೂನಾ, ಮುಂಬೈ …

Read More »

ಮಾಸ್ಕ್, ಸಾಮಾಜಿಕ ಅಂತರ ಇಲ್ಲದ ಮೇಕೆ ಸಂತೆ

ಕೊರಟಗೆರೆ: ಯುಗಾದಿ ಹಬ್ಬದ ವರ್ಷದ ತೊಡಕಿಗೆ ಈಗಲೇ ಕುರಿ ಮೇಕೆಗಳನ್ನುಕೊಂಡುಕೊಳ್ಳಲು ಜನರು ಮುಂದಾಗಿದ್ದರಿಂದ, ಮಾರುಕಟ್ಟೆಗಳಲ್ಲಿ ಜನದಟ್ಟನೆ ಕಂಡು ಬಂತು. ಮಂಗಳವಾರ ಯುಗಾದಿ ಹಬ್ಬ. ಹಬ್ಬದ ಮರುದಿನ ವರ್ಷದ ತೊಡಕು. ಮಂಗಳವಾರ ಹಬ್ಬ ಇರುವುದರಿಂದ ಅಂದು ಮೇಕೆ-ಕುರಿ ಮಾರುಕಟ್ಟೆಇರುವುದಿಲ್ಲ. ಹಾಗಾಗಿ ಜನರು ಮೊದಲೇ ಖರೀದಿಗೆ ಮುಂದಾದರು. ಹಬ್ಬದ ಮರುದಿನ ವರ್ಷ ತೊಡಕು ಭರ್ಜರಿಯಾಗಿ ನಡೆಯುತ್ತದೆ. ಬಾಡೂಟದ ಘಮಲು ಮೂಗು, ಮನಸನ್ನು ಸೆಳೆಯುತ್ತದೆ. ಅಕ್ಕಿರಾಂಪುರ ಮೇಕೆ ಕುರಿತಂತೆ ರಾಜ್ಯದಲ್ಲಿಯೇ ಹೆಸರಾಗಿದ್ದು, ನಾನಾ ಮೂಲೆಗಳಿಂದ …

Read More »

ಕೋವಿಡ್ ಹೆಚ್ಚಳ ಹಿನ್ನೆಲೆ : ಸರ್ವಪಕ್ಷ ಸಭೆ ಕರೆದ ಸಿಎಂ ಯಡಿಯೂರಪ್ಪ

ಬೀದರ್ : ದಿನೇ ದಿನೇ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಏಪ್ರಿಲ್ 18, 19ರಂದು ಎಲ್ಲಾ ಪಕ್ಷದ ಹಿರಿಯರ ಜೊತೆ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆ ನಡೆಸುವುದಾಗಿ ಸೋಮವಾರ ಸಿಎಂ ಯಡಿಯೂರಪ್ಪ ತಿಳಿಸಿದ್ರು. ಬಸವ ಕಲ್ಯಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಸರ್ವ ಪಕ್ಷಗಳ ಹಿರಿಯರ ಜೊತೆ ಸಭೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ. ಸಭೆಯಲ್ಲಿ ಕಠಿಣ …

Read More »

ಬೆಂಗಳೂರು : ಕುಡುಕ ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಂದ ಪತ್ನಿ..!

ಬೆಂಗಳೂರು, ಏ.12- ಪತ್ನಿಯೇ ಪತಿಯ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿರುವ ಘಟನೆ ಜೆ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಬಿಬಿಎಂಪಿ ಕಸದ ಆಟೋ ಚಾಲಕ ಮೋಹನ್ (41) ಕೊಲೆಯಾದವರು. ಘಟನೆ ಸಂಬಂಧ ಪತ್ನಿ ಪದ್ಮಾ (36) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರಾಗಿ ಪದ್ಮಾ ಕೆಲಸ ಮಾಡುತ್ತಿದ್ದು , 16 ವರ್ಷದ ಹಿಂದೆ ಮೋಹನ್ ಅವರನ್ನು ವಿವಾಹವಾಗಿದ್ದು, …

Read More »

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿ ಪಟವಾಗುತ್ತೆ : ಯಡಿಯೂರಪ್ಪ

ಬಸವಕಲ್ಯಾಣ : ಬಸವಕಲ್ಯಾಣದಲ್ಲೇ ಐತಿಹಾಸಿಕ ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭಗೊಳಲ್ಲಿದೆ. ಮಾಜಿ ಸಚಿವ ಬಸವರಾಜ ಸೆಡಂ ಅವರಿಗೆ ಅನುಭವ ಮಂಟಪ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ ಎಂದು ಸೋಮವಾರ ಬಸವಕಲ್ಯಾಣದಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದೇ 17 ರಂದು ನಡೆಯಲಿರುವ ಉಪಚುನಾಣೆಯ ಪ್ರಚಾರಕ್ಕೆ ತೆರಳಿರುವ ಯಡಿಯೂರಪ್ಪ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡರು. ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿಯೂ ಗೆಲವು ಸಾಧಿಸುತ್ತದೆ ಎಂಬ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಮಲ್ಲಿಕಾರ್ಜುನ ಖರ್ಗೆ …

Read More »

”ಉತ್ತರ ಕರ್ನಾಟಕಕ್ಕೆ ಪ್ರಮುಖ ಇಲಾಖೆಗಳ ಕಚೇರಿ ಸ್ಥಳಾಂತರಕ್ಕೆ ಕಾನೂನಾತ್ಮಕ ಹೋರಾಟ”

ಬೆಂಗಳೂರು, ಎ. 11: ಉತ್ತರ ಕರ್ನಾಟಕದ ಜನತೆಯ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಪ್ರಮುಖ ಇಲಾಖೆಯ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಬೇಕು. ಈ ಕುರಿತಂತೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ದಿ ಸಂಘದ ಅಧ್ಯಕ್ಷ ಯಾಸೀರ್ ಜವಳಿ, ನ್ಯಾಯವಾದಿ ಶೇಖ್ ಸೌದ್ ತಿಳಿಸಿದ್ದಾರೆ. ರವಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿಯೇ ರಾಜ್ಯ ಸರಕಾರ ಗೆಜೆಟ್ ಹೊರಡಿಸಿ ಅನೇಕ ಪ್ರಮುಖ ಇಲಾಖೆ ಕಚೇರಿಗಳನ್ನು …

Read More »

ಬಸವಕಲ್ಯಾಣದಲ್ಲಿ ಸಿಎಂ ಕಾರಿಗೆ ಕಾರ್ಯಕರ್ತರಿಂದ ಮುತ್ತಿಗೆಗೆ ಯತ್ನ

ಬೀದರ್ : ಉಪ ಚುನಾವಣೆ ಪ್ರಚಾರ ಹಿನ್ನೆಲೆ ಬಸವಕಲ್ಯಾಣ ನಗರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪ ಅವರ ಕಾರನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹಾಗೂ ಕಾರ್ಯಕರ್ತರು ತಡೆದು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು. ಈ ವೇಳೆ ಮುತ್ತಿಗೆ ತಡೆಯಲು ಪೊಲೀಸರು ಹರಸಾಹಸ ಪಟ್ಟರು. ನಗರಕ್ಕೆ ಸಿ.ಎಂ ಆಗಮಿಸುತ್ತಿದಂತೆ ಮಲ್ಲಿಕಾರ್ಜುನ ಖೂಬಾ ನಿವಾಸದ ಮುಂದೆ ಜಮಾಯಿಸಿದ ನೂರಾರು ಕಾರ್ಯಕರ್ತರು ಸಿ‌ಎಂ ಸಂಚರಿಸುತ್ತಿದ್ದ ವಾಹನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಸಿ.ಎಂ …

Read More »

ಬೀದಿಗಿಳಿದ ಸಾರಿಗೆ ಕುಟುಂಬಸ್ಥರು ಬೆಳಗಾವಿಯಲ್ಲಿ ಪ್ರತಿಭಟನೆ

6ನೇ ವೇತನ ಆಯೋಗ ಜಾರಿ ಮಾಡುವಂತೆ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ.ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸದ ಸರ್ಕಾರದ ನಡೆಗೆ ನೌಕರರ ಕುಟುಂಬಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಕ್ಕಳು, ಮಹಿಳೆಯರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ಮಕ್ಕಳು ಕೈಯಲ್ಲಿ ತಟ್ಟೆ ಹಿಡಿದು ಬಾರಿಸುತ್ತಾ ವಿನೂನತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಆರನೇ ವೇತನ ಅಸಯೋಗ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿದ್ದಾರೆ‌. ಸಾರಿಗೆ ನೌಕರರು …

Read More »