Breaking News
Home / 2021 / ಏಪ್ರಿಲ್ / 06 (page 2)

Daily Archives: ಏಪ್ರಿಲ್ 6, 2021

ಬೆಳಗಾವಿ ಉಪಚುನಾವಣೆ ಅಖಾಡಕ್ಕೆ ಸಿಎಂ ಯಡಿಯೂರಪ್ಪ: ಮಂಗಲಾ ಅಂಗಡಿ ಪರ ಮತಯಾಚನೆ

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಪ್ರಮುಖ ಪಕ್ಷಗಳ ನಾಯಕರು ಕ್ಷೇತ್ರಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ್ ಅಂಗಡಿ ಪರ ಮುಖ್ಯಮಂತ್ರು ಬಿ.ಎಸ್.ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಸಿಎಂ ಯಡಿಯೂರಪ್ಪ ಇಂದು ಕೆಂಪೇಗೌಡ ಏರ್ ಪೋರ್ಟ್ ಮೂಲಕ ಹುಬ್ಬಳಿಗೆ ಪ್ರಯಾಣ ಬೆಳೆಸಿದರು. ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಬೆಳಗಾವಿಗೆ ಪ್ರಯಾಣ ಮಾಡಲಿದ್ದು, ಇಂದು …

Read More »

ಕುಮಾರಸ್ವಾಮಿಗೆ ಕರಿಯ ಎಂದ ಜಮೀರ್ ವಿರುದ್ಧ ಜೆಡಿಎಸ್ ದೂರು

ಬೆಂಗಳೂರು: ಮಾರ್ಚ್‌ 30ರಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಬಣ್ಣದ ಕುರಿತು ‘ಕಾಲಾ ಕುಮಾರಸ್ವಾಮಿ’ ಎಂಬ ಪದ ಬಳಕೆ ಮಾಡಿರುವ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಯುವ ಘಟಕ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಿದೆ. ಬೆಂಗಳೂರು ಮಹಾನಗರ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ …

Read More »

ರಮೇಶ್ ಜಾರಕಿಹೊಳಿ ನೋಡಲು ಗೋಕಾಕ ಗೆ ಬಂದ S.I.T.ಅಧಿಕಾರಿ

ಗೋಕಾಕ್​ (ಏ. 6):  ಕೊರೋನಾ ಹಿನ್ನಲೆ ಉಸಿರಾಟದ ಸಮಸ್ಯೆಯಿಂದಾಗಿ ಐಸಿಯುನಲ್ಲಿ ದಾಖಲಾಗಿರುವ  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂರನೇ ದಿನದ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ದಾಖಲಾದ ಹಿನ್ನಲೆ ಎಸ್​ಐಟಿ ವಿಚಾರಣೆಗೆ ರಮೇಶ್​ ಜಾರಕಿಹೊಳಿ ಗೈರಾಗಿದ್ದರು. ಈ ಹಿನ್ನಲೆ ಇಂದು ಎಸ್​ಐಟಿ ತಂಡ ಆಸ್ಪತ್ರೆಗೆ ಭೇಟಿ ನೀಡಿ ರಮೇಶ್​ ಜಾರಕಿಹೊಳಿ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ರಮೇಶ್​ ಜಾರಕಿಹೊಳಿ ಅವರು ಎಸ್​ಐಟಿ ತನಿಖೆಯಿಂದ ತಪ್ಪಿಸಿಕೊಳ್ಳಲು ಕೊರೋನಾ ಸುಳ್ಳು ನೆಪ ಹೇಳುತ್ತಿದ್ದಾರೆ …

Read More »

ಚಿತ್ರದುರ್ಗದಲ್ಲಿ ಅಂಬುಲೆನ್ಸ್‌ನಲ್ಲಿ ಆಕ್ಸಿಜನ್ ಸಿಗದೆ ಕೋವಿಡ್ ರೋಗಿ ಸಾವು

ಚಿತ್ರದುರ್ಗ: ಒಂದ್ಕಡೆ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ ಆಗ್ತಿದ್ರೆ ಇತ್ತ ಚಿತ್ರದುರ್ಗದಲ್ಲಿ ಅಂಬುಲೆನ್ಸ್‌ನಲ್ಲಿ ಆಮ್ಲಜನಕ ಸಿಗದೇ ಕೋವಿಡ್ ರೋಗಿ ಮೃತಪಟ್ಟಿರುವ ದುರಂತ ನಡೆದಿದೆ. ಅಂಬುಲೆನ್ಸ್‌ನಲ್ಲಿ ಸಕಾಲಕ್ಕೆ ಆಕ್ಸಿಜನ್ ಸಿಗದೇ 65 ವರ್ಷದ ವೃದ್ಧೆಯೊಬ್ಬರು ಪ್ರಾಣಬಿಟ್ಟಿದ್ದಾರೆ. ಹಿರಿಯೂರು ನಗರದ ವೇದಾವತಿ ಬಡಾವಣೆಯ ಕೋವಿಡ್ ಸೊಂಕಿತ ವೃದ್ಧೆಯನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಿಂದ ದಾವಣಗೆರೆಗೆ ಅಂಬುಲೆನ್ಸ್ ಮೂಲಕ ಕರೆದೊಯ್ಯುವಾಗ ಮಾರ್ಗಮಧ್ಯೆ ವೃದ್ದೆ ಮೃತಪಟ್ಟಿದ್ದಾರೆ. ಆಕ್ಸಿಜನ್ ಸಿಲಿಂಡರ್ ಬೇಕು ಐದು ಸಾವಿರ ರೂಪಾಯಿ ಕೊಡ್ಬೇಕು …

Read More »

ರಾತ್ರಿ 10 ರಿಂದ ಬೆಳಗ್ಗೆ 5 ವರೆಗೆ ದೆಹಲಿಯಲ್ಲಿ ನೈಟ್ ಕರ್ಫ್ಯೂ!

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಇದೀಗ ನೈಟ್ ಕರ್ಫ್ಯೂ ಹಾಕಲು ಮುಂದಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕೊರೊನಾ ನಾಲ್ಕನೇ ಅಲೆ ಬೀಸಲು ಆರಂಭಿಸಿದೆ. ಆದರೆ ಲಾಕ್‍ಡೌನ್ ಹೇರಲು ನಾವು ಸಿದ್ಧರಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ದೆಹಲಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವುದರಿಂದಾಗಿ ಲಾಕ್‍ಡೌನ್ ಬದಲಾಗಿ ನೈಟ್‍ ಕರ್ಫ್ಯೂ ಹಾಕಲು ದೆಹಲಿ ಸರ್ಕಾರ …

Read More »

ಚಿತ್ರಮಂದಿರಗಳು ಬಂದ್, ಶೂಟಿಂಗ್‌ಗೆ ಹೊಸ ಮಾರ್ಗಸೂಚಿ

ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಶುರುವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ಹಂತದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಭಾರತ ಯಶಸ್ಸು ಕಂಡಿತ್ತು ಎಂದು ಹೇಳಲಾಗಿತ್ತು. ಇದೀಗ, ಮತ್ತೆ ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿವೆ. ಸದ್ಯ ಮಹಾರಾಷ್ಟ್ರದಲ್ಲಿ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಸುಳಿವು ಸಿಕ್ಕಿದೆ. ಇದರ ಮೊದಲ ಹಂತ ಎಂಬಂತೆ ಚಿತ್ರಮಂದಿರಗಳು, ರಂಗಮಂದಿರಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಶೂಟಿಂಗ್ ಮಾಡಲು ಷರತ್ತು ವಿಧಿಸಲಾಗಿದೆ.   …

Read More »

ಎಸ್‌ಎಸ್‌ಎಲ್ ಸಿ, ಪಿಯು ಪರೀಕ್ಷೆ ಸಿದ್ದತೆ ಪರಿಶೀಲನಾ ಸಭೆ: ಸಚಿವ ಸುರೇಶ್ ಕುಮಾರ್ ಭಾಗಿ

ಧಾರವಾಡ: ಕೋವಿಡ್ ಹಾವಳಿ‌ ಮಧ್ಯೆಯೂ ಕಳೆದ ವರ್ಷ ಎಸ್‌ಎಸ್‌ಎಲ್ ಸಿ, ಪಿಯು ಪರೀಕ್ಷೆ ನಡೆಸಿದಂತೆ ಈ ವರ್ಷ ನಿಗದಿಯಾಗಿರುವ ಪರೀಕ್ಷೆಗಳ ಯಶಸ್ವಿಯಾಗಿ ನಡೆಸಲು ಧಾರವಾಡದ ಡಯಟ್ ಸಭಾಂಗಣದಲ್ಲಿ ಇಂದು ಸಭೆ ನಡೆಸಲಾಗುತ್ತಿದೆ. ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಬೆಳಗಾವಿ ವಿಭಾಗದ ಶೈಕ್ಷಣಿಕ ಜಿಲ್ಲೆಗಳ ಎಸ್‌ಎಸ್‌ಎಲ್ ಸಿ, ಪಿಯುಸಿ ಪರೀಕ್ಷಾ ಪೂರ್ವಸಿದ್ಧತಾ ಪರಿಶೀಲನೆ ಸಭೆ ನಡೆಸಿದರು. ಸಂಜೆವರೆಗೂ ಎಲ್ಲಾ ಒಂಭತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿನ ಪರೀಕ್ಷಾ ಸಿದ್ದತೆ ಕುರಿತು …

Read More »

ಖಾಸಗಿ ವಾಹನಗಳು ವಸೂಲಿಗಿಳಿದರೆ ಕಾನೂನು ಕ್ರಮ : ಸಾರಿಗೆ ಆಯುಕ್ತರ ಎಚ್ಚರಿಕೆ

ಬೆಂಗಳೂರು,ಏ.6-ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ವಾಹನಗಳು ಎಲ್ಲಾ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಿದ್ದೇವೆ. ಒಂದು ವೇಳೆ ಯಾರಾದರೂ ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ದರ ವಸೂಲಿ ಮಾಡಲು ಮುಂದಾದರೆ ಅಂಥವರ ಮೇಲೂ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ನಾಳೆ ಸಾರಿಗೆ ನೌಕರರು ಮುಷ್ಕರ ನಡೆಸಿ ಬಸ್‍ಗಳು ಕಾರ್ಯಾರಂಭ ಮಾಡದಿದ್ದರೆ, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಪರ್ಯಾಯ ಕ್ರಮ ಕೈಗೊಂಡಿದ್ದೇವೆ ಎಂದರು. …

Read More »

ನಾಳೆ ಮುಷ್ಕರ ನಡೆಸುವ ಸಾರಿಗೆ ನೌಕರರಿಗೆ ಎಸ್ಮಾ ಜಾರಿ; ಪರ್ಯಾಯ ವ್ಯವಸ್ಥೆಗೂ ಸಿದ್ಧತೆ: ಎಚ್ಚರಿಕೆ ನೀಡಿದ ಸರ್ಕಾರ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಏ.7 ರಂದು ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರಿಗೆ ಸರ್ಕಾರ ಎಸ್ಮಾ ಎಚ್ಚರಿಕೆ ನೀಡಿದೆ. ಆರನೇ ವೇತನ ಆಯೋಗ ಜಾರಿ ಸಾಧ್ಯವಿಲ್ಲ, ಸಾರಿಗೆ ನೌಕರರೊಂದಿಗೆ ಮತ್ತೆ ಮಾತುಕತೆಯ ಪ್ರಶ್ನೆಯೂ ಇಲ್ಲ, ಮುಷ್ಕರಕ್ಕೆ ಮುಂದಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ,ಎಸ್ಮಾ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಷ್ಕರಕ್ಕೆ ಮುಂದಾಗಿರುವ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಮುಷ್ಕರಕ್ಕೆ ಕರೆ …

Read More »

ಮತಗಟ್ಟೆಯಲ್ಲಿ ಅಭಿಮಾನಿಯ ಫೋನ್ ಕಿತ್ತುಕೊಂಡು ಟ್ರೋಲ್ ಗೆ ಗುರಿಯಾದ ತಮಿಳು ಸ್ಟಾರ್ ಅಜಿತ್!ವಿಡಿಯೋ

ಚೆನ್ನೈ: ಮತಗಟ್ಟೆ ಬಳಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಮಾಸ್ಕ್ ಧರಿಸದ ಅಭಿಮಾನಿಯೊಬ್ಬರ ಫೋನ್ ನ್ನು ಕಾಲಿವುಡ್ ಸೂಪರ್ ಸ್ಟಾರ್ ಅಜಿತ್ ಕಸಿದುಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಚೆನ್ನೈ ಪಕ್ಕದಲ್ಲಿರುವ ತಿರುವಣ್ ಮಿಯೂರ್ ನ ಮತಗಟ್ಟೆಯೊಂದರ ಬಳಿ ಇಂದು ಬೆಳಗ್ಗೆ ಪತ್ನಿ ಶಾಲಿನಿ ಜೊತೆಗೆ ಮತದಾನ ಮಾಡಲು ವಿಜಯ್ ಬಂದಾಗ ಈ ಘಟನೆ ನಡೆದಿದೆ. ವಿಡಿಯೋ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ. ಅಜಿತ್ ಅವರ ಒಪ್ಪಿಗೆ …

Read More »