Home / 2021 / ಏಪ್ರಿಲ್ / 06 (page 3)

Daily Archives: ಏಪ್ರಿಲ್ 6, 2021

ಜೊಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್‍ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ಕಾರವಾರ: ಜೊಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್‍ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಜೋಯಿಡಾದ ನಂದಿಗದ್ದಾ ಗ್ರಾಮದ ಗ್ರಾಮಪಂಚಾಯ್ತಿ ಅಧಿಕಾರಿ ರಾತ್ರಿ 8 ಗಂಟೆಯಾದರೂ ಕಚೇರಿ ಮುಂದೆ ಹಾರಾಡುತ್ತಿದ್ದ ರಾಷ್ಟ್ರಧ್ವಜವನ್ನು ಇಳಿಸದೆ ನಿರ್ಲಕ್ಷ್ಯದಿಂದ ತೆರಳಿದ್ದಾರೆ. ಈ ಘಟನೆ ಸ್ಥಳೀಯ ಜನರ ಗಮನಕ್ಕೆ ಬಂದಿದ್ದು ನಂತರ ಪಂಚಾಯ್ತಿ ಸಿಬ್ಬಂದಿ ರಾಷ್ಟ್ರಧ್ವಜವನ್ನು ಇಳಿಸಿದ್ದಾರೆ. ನಿಯಮದ ಪ್ರಕಾರ ಎಲ್ಲಾ ಗ್ರಾ.ಪಂಗಳಲ್ಲೂ ರಾಷ್ಟ್ರಧ್ವಜ ಬೆಳಗ್ಗೆ ಏರಿಸಿ ಸೂರ್ಯಾಸ್ತದ ವೇಳೆ ಇಳಿಸಬೇಕು. ಆದರೆ …

Read More »

ಕೊರೊನಾ ಸಂದರ್ಭದಲ್ಲಿ ಪ್ರತಿಭಟನೆ ಕೈಬಿಡುವಂತೆ ಸಾರಿಗೆ ನೌಕರರಲ್ಲಿ ಸಚಿವ ಲಕ್ಷ್ಮಣ್ ಸವದಿ ಮನವಿ

ಕಲಬುರಗಿ: ಕೊರೊನಾ ಸಂದರ್ಭದಲ್ಲಿ ಪ್ರತಿಭಟನೆ ಕೈಬಿಡುವಂತೆ ಸಾರಿಗೆ ನೌಕರರಲ್ಲಿ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಯವಿಟ್ಟು ಕೊರೊನಾ ಸಂಕಷ್ಟದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನೀತಿ ಸಂಹಿತೆಯಿಂದಾಗಿ ಬೇಡಿಕೆ ಈಡೇರಿಕೆಗೆ ಸಾಧ್ಯವಿಲ್ಲ. ಘೋಷಣೆ ಮಾಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು. ನೀತಿ ಸಂಹಿತೆ ಜಾರಿ ಇರೋದ್ರಿಂದ ಏನು ಹೇಳಲು ಆಗೋದಿಲ್ಲ. ಇಂದು ಸಾರಿಗೆ ನೌಕರರ ಜೊತೆ ಜೊತೆ …

Read More »

ಪ್ರತಿಭಟನೆಗೆ ಹೋದ್ರೆ ಸಾರಿಗೆ ಇಲಾಖೆ ಬೇರೆ ವ್ಯವಸ್ಥೆ ಮಾಡಲಿದೆ – ಬಸ್‍ಗೆ ಹಾನಿ ಮಾಡಿದ್ರೂ ಕಠಿಣ ಕ್ರಮ:ರವಿ ಕುಮಾರ್ ಸ್ಪಷ್ಟನೆ

ಬೆಂಗಳೂರು: ಸಾರಿಗೆ ನೌಕರರು ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಹೋಗಬಾರದು ಎಂದು ಮನವಿ ಮಾಡುತ್ತೇವೆ. 9 ಬೇಡಿಕೆಗಳಲ್ಲಿ ಒಂದು ಬೇಡಿಕೆ ಬಿಟ್ಟು ಎಲ್ಲಾ ಈಡೇರಿಸಿದ್ದೇವೆ ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ. ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ತುರ್ತು ಸಭೆ ಕರೆದ ಸಿಎಂ ಬಿಎಸ್ ಯಡಿಯೂರಪ್ಪ, ನಾಲ್ಕು ನಿಗಮಗಳ ಎಂಡಿಗಳ ಜೊತೆ ಕೃಷ್ಣಾದಲ್ಲಿ ಸಭೆ ನಡೆಸಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡಲಾಗಿದೆ. …

Read More »

‘ಭಾರತ ನಿಮ್ಮನ್ನು ಎಣಿಕೆ ಮಾಡುತ್ತಿದೆ’ : ಮತದಾನ ಮಾಡಲು ರಾಹುಲ್, ಪ್ರಿಯಾಂಕಾ ಮನವಿ

ನವದೆಹಲಿ,ಏ.6- ಭಾರತ ನಿಮ್ಮನ್ನು ಎಣಿಕೆ ಮಾಡುತ್ತಿದೆ ಹೀಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಎಂದು ವಿಧಾನಸಭಾ ಚುನಾವವಣೆ ನಡೆಯುತ್ತಿರುವ ರಾಜ್ಯಗಳ ಮತದಾರರಿಗೆ ರಾಹುಲ್‍ಗಾಂಧಿ ಮನವಿ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ರಾಹುಲ್ ಈ ರೀತಿಯ ಟ್ವೀಟ್ ಮಾಡಿದ್ದಾರೆ. ಇಂದು ನೀವು ಮತದಾನ ಮಾಡಿದರೆ ಮುಂದೆ ದೇಶ ಮುಂದೆ ನಿಮ್ಮನ್ನು ಎಣಿಕೆ ಮಾಡಲಿದೆ ಎಂದು ಅವರು ಮಾಡಿರುವ …

Read More »

402 PSI ಹುದ್ದೆಗಳಿಗೆ ಅರ್ಜಿ ಆಹ್ವಾನ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆ ಸಂಖ್ಯೆ 08/ನೇಮಕಾತಿ-2/2021-22, ದಿನಾಂಕ :03-03-2021 ನ್ನು ಮುಂದುವರೆಸುತ್ತಾ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ, ಮಹಿಳಾ ಮತ್ತು ಸೇವೆಯಲ್ಲಿರುವವರು) ಒಟ್ಟು 402 ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಆಹ್ವಾನ ಮಾಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 01/04/2021 ಆನ್‌ಲೈನ್ ಅರ್ಜಿ ಸೃಜಿಸಲು ಕೊನೆಯ ದಿನಾಂಕ 03/05/2021 ಆನ್‌ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ …

Read More »

ಮನೆಗೆ ಬೆಂಕಿ ಇಟ್ಟು ಏಳು ಜನರ ಕೊಂದು ಪರಾರಿಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ!

ಕೊಡಗು : ಪೊನ್ನಂಪೇಟೆ ತಾಲೂಕಿನ ನಾಕೂರು ಸಮೀಪದ ಮುಗುಚಿಕೇರಿ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ 7 ಜನರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಶವ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದೆ.   ಏಪ್ರಿಲ್ 3 ಕ್ಕೆ ಮುಗುಚಿಕೇರಿ ಗ್ರಾಮದಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆರು ಜನರನ್ನು ಕೊಲೆ ಮಾಡಿದ್ದ ಆರೋಪಿ ಎರವರ ಜೋಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಕೂರು ನರೇಶ್ ಎಂಬುವರ ಕಾಫಿ ತೋಟದಲ್ಲಿ …

Read More »

ಮದುವೆಗೂ ಮುಂಚೆ ಗರ್ಭಿಣಿ: ಪ್ರಶ್ನೆ ಮಾಡಿದವಗೆ ಪ್ರತ್ಯುತ್ತರ ನೀಡಿದ ನಟಿ

ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ನಟಿ ದಿಯಾ ಮಿರ್ಜಾ ಕೆಲವು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣದಲ್ಲಿ ಸಂತಸದ ಸುದ್ದಿ ಹಂಚಿಕೊಂಡಿದ್ದರು. ನಟಿ ದಿಯಾ ಮಿರ್ಜಾ ಫೆಬ್ರವರಿ 15 ರಂದು ಎರಡನೇ ಬಾರಿ ವಿವಾಹವಾಗಿದ್ದಾರೆ. ವಿವಾಹವಾದ ಕೆಲವೇ ದಿನಗಳ ಬಳಿಕ ತಾವು ತಾಯಿಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಂಚಿಕೊಂಡಿದ್ದಾರೆ. ಆದರೆ ದಿಯಾ ಹಾಕಿರುವ ಪೋಸ್ಟ್‌ಗೆ ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ದಿಯಾರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬ ‘ಗರ್ಭಿಣಿ ಆದ ನಂತರ ಮದುವೆ ಆಗಿದ್ದೀರಿ. …

Read More »

ಖಾಕಿಯೊಳಗೊಬ್ಬ ಸೃಜನಶೀಲ ಕಲಾವಿದ

ಕಲೆಯ ಹವ್ಯಾಸ ನಮ್ಮ ವ್ಯಕ್ತಿ . ಕೌಶಲ್ಯ ಹಾಗೂ ಜೀವನ ಪಥದಲ್ಲಿ ಎಂದಿಗೂ ಸ್ಫೂರ್ತಿ ನೆಲೆಯಾಗಿರುತ್ತದೆ ಎಂಬುದು ಸುಳ್ಳಲ್ಲ. ನಮ್ಮ ವೃತ್ತಿ ಯಾವುದೇ ಇರಲಿ ಆದರೆ, ನಮ್ಮೊಳಗಿನ ಕಲಾ ಪ್ರತಿಭೆ ಹವ್ಯಾಸವಾಗಿ ಇಂತಹ ಒಂದು ಅಪರೂಪದ ಪ್ರತಿಭೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಶ್ರೀರಾಮುಲು ಕೆ. ಎಂದರೆ ತಪ್ಪಲ್ಲ. ಕೆ.ಶ್ರೀರಾಮುಲು ಅವರುಹೆಚ್.ಸಿ. 215, ಕೆ.ಎಸ್.ಆರ್.ಪಿ. ಹತ್ತನೇ ಪಡೆಯಲ್ಲಿ ಪೋಲೀಸ್ ಹವಾಲ್ದಾರ್ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಕುಪ್ಪಸ್ವಾಮಿ ರೆಡ್ಡಿ, ತಾಯಿ ಸುಶೀಲಮ್ಮ …

Read More »

ಉರಿ ಬಿಸಿಲಿನ ನಡುವೆಯೇ ಮಸ್ಕಿಯಲ್ಲಿ ಕಾವೇರಿದೆ ಉಪಚುನಾವಣಾ ಪ್ರಚಾರ!

ಕಲಬುರಗಿ: ಮಸ್ಕಿ ವಿಧಾನಸಭೆ ಕ್ಷೇತ್ರಗದ ಉಪ ಚುನಾವಣೆಗೆ ಇನ್ನೂ ಕೇವಲ 15 ದಿನಗಳು ಮಾತ್ರ ಬಾಕಿ ಉಳಿದಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಮಸ್ಕಿಯಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ. ಮಸ್ಕಿಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಸಾಂಪ್ರಾದಾಯಿಕ ವೈರಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲಾ ರೀತಿಯ ತಂತ್ರ ನಡೆಸುತ್ತಿವೆ. ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್ ಮತ್ತು ಕಾಂಗ್ರೆಸ್ ನಿಂದ …

Read More »

ಯುವತಿಗೆ ತಾಳಿ ಕಟ್ಟಲು ಪ್ರಯತ್ನ ವಿರೋದಿಸಿದಕ್ಕೆ “ಬರ್ಬರ ಹತ್ಯೆ”…!

ತುಮಕೂರು : ತನ್ನ ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಆಕ್ರೋಶಗೊಂಡು ಯುವತಿಗೆ ಚಾಕು ಇರಿದ ಪರಿಣಾಮ ಯುವತಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡಗುಳ್ಳ ಗ್ರಾಮದ ಈರಣ್ಣ ಎಂಬಾತ ತನ್ನದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ,ದಿನಂಪ್ರತಿ ನನ್ನನ್ನು ಪ್ರೀತಿಸು ಅಂತಾ ಹಿಂದೆ ಬಿದ್ದಿದ್ದ ಆದ್ರೆ ಯುವತಿಯ ಈರಣ್ಣ ನ ಪ್ರೀತಿಯನ್ನು ನಿರಾಕರಿಸಿದ್ದಳು. ಹೀಗಾಗಿ ಯುವತಿ ಕಾಲೇಜಿಗೆ ಹೋಗುವಾಗ ಆಕೆಗೆ ತಾಳಿಯನ್ನು ಕಟ್ಟಲು ಪ್ರಯತ್ನ ಮಾಡಿದ್ದ ಆದ್ರೆ …

Read More »