Breaking News

Monthly Archives: ಜನವರಿ 2021

ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯಿಂದ ಯಡವಟ್ಟು; ಪೋಸ್ಟ್ ಡಿಲೀಟ್ ಮಾಡಿದರೂ ವೈರಲ್ ಆಯ್ತು ಚಿತ್ರ

ವಿಜಯಪುರ: ಈ ಪ್ರಕರಣ ಯುವ ರಾಜಕಾರಣಿಗಳು ಮತ್ತು ಪೊಲೀಸರಿಗೆ ಒಂದು ಪಾಠ. ಯಾರು ಏನೆಲ್ಲ ಮಾಡಬಾರದು ಎಂಬುದಕ್ಕೆ ಹೇಳಿ ಮಾಡಿಸಿದಂತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ತನ್ನ ಬೆಂಬಲಿಗರೊಂದಿಗೆ ಅತೀ ಹುರುಪಿನಿಂದ ಮಾಡಿದ ಯಡವಟ್ಟು ಈಗ ಪೊಲೀಸ್ ಠಾಣೆಯ ಮಹಿಳಾ ಪಿಎಸ್​ಐ ಮತ್ತು ಪೊಲೀಸ್ ಕಾನ್ಸ್​ಟೆಬಲ್ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಇದಕ್ಕೂ ಮಿಗಿಲಾಗಿ ತಮ್ಮ ಕೃತ್ಯವನ್ನು ಫೇಸ್ ಬುಕ್ ಮೂಲಕ ಜಗಜ್ಜಾಹಿರು ಮಾಡಿ ನಂತರ ಪೋಸ್ಟ್ ನ್ನು ಡಿಲೀಟ್ ಮಾಡಿದರೂ …

Read More »

25 ಕೋಟಿ ರೂ ಗಳಿಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶಂಕು ಸ್ಥಾಪನೆ

ಬೆಳಗಾವಿ: ಎಸ್.ಎಫ್.ಸಿ ವಿಶೇಷ ಅನುದಾನದಡಿಯಲ್ಲಿ ಅಂದಾಜು ಮೊತ್ತ 25 ಕೋಟಿ ರೂ ಗಳಿಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶಂಕು ಸ್ಥಾಪನೆ ನೆರವೇರಿಸಿದರು. ಗೋಕಾಕ್ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ಕಾಮಗಾರಿಗಳು, ವಿದ್ಯುತ್ ಕಾಮಗಾರಿಗಳು, ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳು,ನೀರು ಸರಬರಾಜು ಕಾಮಗಾರಿಗಳೂ ಸೇರಿದಂತೆ ಎಸ್.ಎಫ್.ಸಿ ವಿಶೇಷ ಅನುದಾನದಡಿಯ ಕಾಮಗಾರಿಗಳಿಗೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಈ …

Read More »

ಪಕ್ಷ ಸಂಘಟನೆ: ಜನವರಿ 6 ರಿಂದ ‘ಕೈ’ ನಾಯಕರ ಸಭೆ

ಬೆಂಗಳೂರು: ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಜೊತೆಗೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಪಂಚಾಯಿತಿ, ವಾರ್ಡ್‌, ಬೂತ್‌ ಸಮಿತಿಗಳ ರಚನೆ ಕುರಿತು ಸ್ಥಳೀಯಮಟ್ಟದಲ್ಲಿ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಲು ರಾಜ್ಯದ ನಾಲ್ಕು ವಿಭಾಗಗಳಲ್ಲಿ (ಮೈಸೂರು, ಬೆಂಗಳೂರು, ಬೆಳಗಾವಿ, ಕಲಬುರ್ಗಿ) ಜ. 6ರಿಂದ ಸಭೆಗಳನ್ನು ಆಯೋಜಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ. ಜ 6ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿರುವ ಸಾಗರ ಆಡಿಟೋರಿಯಂನಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಮೈಸೂರು ವಿಭಾಗ, …

Read More »

ಚುನಾವಣಾ ಘರ್ಷಣೆ: ತಾಯಿ ಜತೆಗೆ ಜೈಲಿನಲ್ಲಿದ್ದ ಮಗು ಸಾವು

ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಜೈನಾಪುರ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ನಂತರ ನಡೆದ ಘರ್ಷಣೆಗೆ ಸಂಬಂಧಿಸಿ ಬಂಧಿತ ತಾಯಿಯೊಂದಿಗೆ ಜೈಲು ಸೇರಿದ್ದ ಮೂರು ವರ್ಷದ ಮಗು ಮೃತಪಟ್ಟಿದೆ. ‘ಮಗಳು ಭಾರತಿ ಆರೋಗ್ಯ ಸರಿ ಇರಲಿಲ್ಲ. ಜೈಲಿಗೆ ಕರೆದೊಯ್ಯಬೇಡಿ ಎಂದು ಪೊಲೀಸರಿಗೆ ಕೇಳಿಕೊಂಡೆವು. ನಮ್ಮ ತವರು ಮನೆಗೆ ಬಿಟ್ಟು ಬರುವುದಾಗಿ ಹೇಳಿ ಕರೆತಂದು ಜೈಲಿಗೆ ಹಾಕಿದರು. ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇದ್ದಾಗಲೇ ಮಗುವಿನ ಆರೋಗ್ಯ ತೀವ್ರ ಹದಗೆಟ್ಟಿತ್ತು. ಆಸ್ಪತ್ರೆಗೆ ತಂದಾಗ ಸತ್ತಿದೆ …

Read More »

ಬೆಂಗಳೂರಿಗರೇ ಎಚ್ಚರ..! ನಗರದಲ್ಲಿ ‘ತೀವ್ರ ಚಳಿ’ಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೇ, ಹೀಗೆ ಆಗ್ಬಹುದು.!

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ನಗರದಲ್ಲಿ ಡಿಸೆಂಬರ್ 24ರ ನಂತ್ರ ತೀವ್ರ ಉಸಿರಾಟದ ತೊಂದೆರೆಯಂತ ಕಾಯಿಲೆ ಕೂಡ ಹೆಚ್ಚಾಗಿದೆಯಂತೆ. ಇದರಿಂದಾಗಿ ತೀವ್ರ ಉಸಿರಾಟದ ತೊಂದೆರೆಗೆ ಒಳಾಗುತ್ತಿರುವ ರಾಜಧಾನಿಯ ಅನೇಕರು ಐಸಿಯುಗೆ ದಾಖಲಾಗುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಚಳಿಯ ಬಗ್ಗೆ ಅಸಡ್ಡೆ ಮಾಡಬೇಡಿ. ಎಚ್ಚರಿಗೆ ವಹಿಸೋದು ಮರೆಯಬೇಡಿ. ಹೌದು. ಈ ಬಗ್ಗೆ ನಗರದ ಮಣಿಪಾಲ್ ಹಾಸ್ಪತ್ರೆಯ ತೀವ್ರ ನಿಗಾ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಸುನೀಲ್ …

Read More »

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಸುಗ್ರೀವಾಜ್ಞೆ ಮೂಲಕ ಜಾರಿ : ರಾಜ್ಯ ಬಿಜೆಪಿ ಘಟಕದಿಂದ ಮಾಹಿತಿ

ಬೆಂಗಳೂರು : ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಕಾಯ್ದೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದ್ದು, ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಘಟಕ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನುಗಳನ್ನು ಕೂಡ ಜಾರಿಗೆ ತರಲಿದ್ದೇವೆ …

Read More »

ಡಿ.ವಿ.ಸದಾನಂದಗೌಡ ಆಸ್ಪತ್ರೆಗೆ

ಚಿತ್ರದುರ್ಗ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅನಾರೋಗ್ಯಕ್ಕೀಡಾಗಿದ್ದು, ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಗರ್ ಲೋ ಆದ ಕಾರಣ ಡಿ.ವಿ.ಸದಾನಂದಗೌಡ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲು ನಿರ್ಧರಿಸಲಾಗಿದೆ. ಆಂಬುಲೆನ್ಸ್ ನಲ್ಲಿ ಝಿರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ

Read More »

ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲೋದು ನಮ್ಮ ಗುರಿ : ಬಿಎಸ್ವೈ

ಶಿವಮೊಗ್ಗ, ಜ.3- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಪಡೆಯುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿನ ಬಿಜೆಪಿ ಅಭೂತಪೂರ್ವ ಯಶಸ್ಸು ಸದ್ಯದಲ್ಲೇ ನಡೆಯುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಮುಂದುವರಿಯಬೇಕೆಂದು ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಫಲಿತಾಂಶ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉಲ್ಲಾಸ, ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದರು. ಹಠ, ಛಲ …

Read More »

ರೈತರು ಪ್ರತಿಭಟನೆ ನಡೆಸುತ್ತಿದ್ದ ಮೈದಾನಕ್ಕೆ ನುಗ್ಗಿದ ಮಳೆ ನೀರು

ನವದೆಹಲಿ,ಜ.3-ವಿವಾದಿತ ಮೂರು ಕೃಷಿ ನೀತಿಗಳನ್ನು ವಿರೋಸಿ ಕಳೆದ ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತರು ತಂಗಿರುವ ಬುರಾರಿ ಮೈದಾನಕ್ಕೆ ಮಳೆನೀರು ನುಗ್ಗಿದ್ದು, ಸಂಕಷ್ಟ ಎದುರಾಗಿದೆ. ರೈತರು ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸಬೇಕು, ಕೃಷಿ ವಿರೋಯಾದ ಮೂರು ತಿದ್ದುಪಡಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಕಳೆದ ನವೆಂಬರ್‍ನಿಂದಲೂ ದೆಹಲಿಯನ್ನು ಸಂಪರ್ಕಿಸುವ ಹೆದ್ದಾರಿಗಳನ್ನು ತಡೆದು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆಯನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ನಡೆಸಿದ 6 ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಪಂಜಾಬ್, ಹರಿಯಾಣ ಗಡಿಭಾಗದ …

Read More »

ಪ್ರಧಾನಿ ಮೋದಿಗೆ ಡಾಕ್ಟರೇಟ್ ಕೊಟ್ಟಿದೆ. ಡೊನಾಲ್ಡ್​ ಟ್ರಂಪ್ ಅಮೆರಿಕದಲ್ಲಿ ಸೋಲೋದಕ್ಕೆ ಓಟ್ ಕೊಡಿಸಿದರಲ್ಲ ಅದಕ್ಕೇ ಮೋದಿಗೆ ಅವಾರ್ಡ್ ಕೊಟ್ಟಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. ರಾಮಲಿಂಗಾ ರೆಡ್ಡಿ

ಬೆಂಗಳೂರು (ಜನವರಿ 03); ಬಿಜೆಪಿ ಈ ಹಿಂದೆ ‘ಮನು’ವಾದವನ್ನು  ಅನುಸರಣೆ ಮಾಡುತ್ತಿತ್ತು. ಆದರೆ, ಇದಿಗ ಬಿಜೆಪಿ ನಾಯಕರು ‘ಮನಿ’ವಾದವನ್ನು ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯದ ಎಲ್ಲಾ ಬಿಜೆಪಿ ನಾಯಕರೂ ಡೋಂಗಿಗಳೇ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಅಮೆರಿಕ ಮೂಲದ ಸಂಸ್ಥೆಯೊಂದು ಡಾಕ್ಟರೇಟ್​ ಗೌರವ ಘೋಷಿಸಿತ್ತು. ಈ ಕುರಿತು ಅಪಹಾಸ್ಯ …

Read More »