ನವದೆಹಲಿ, ಜನವರಿ 16: ಸರ್ಕಾರಿ ತೈಲ ಕಂಪನಿಗಳು ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 84.70 ರೂ. ಮತ್ತು ಡೀಸೆಲ್ ಲೀಟರ್‌ಗೆ 74.88 ರೂ. ನಿಗದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪ್ರತಿದಿನ ಬದಲಾಗುತ್ತವೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ …
Read More »Monthly Archives: ಜನವರಿ 2021
ಐಆರ್‌ಬಿ ಆಡಳಿತ ಭವನ ಉದ್ಘಾಟನೆಗೆ ಕ್ಷಣಗಣನೆ
ವಿಜಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸಂಜೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿರುವ ವರ್ಚ್ಯುವೆಲ್ ವೇದಿಕೆ ಮೂಲಕ, ವಿಜಯಪುರ ಸಮೀಪದ ಅರಕೇರಿಯಲ್ಲಿ ನಿರ್ಮಿಸಲಾಗಿರುವ ಇಂಡಿಯನ್ ರಿಸರ್ವ್ ಬಟಾಲಿಯನ್ನ (ಐಆರ್‌ಬಿ) ಆಡಳಿತ ಭವನದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಐಆರ್‌ಬಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. 2010ರಲ್ಲಿ ಆರಂಭವಾದ ರಾಜ್ಯದ ಎರಡನೇ ಐಆರ್ ಬಿ ಸೆಂಟರ್ ಇದಾಗಿದ್ದು, 100 ಎಕರೆ …
Read More »ಬಿಜೆಪಿಯ ಡಾ.ಶರ್ಮಾ, ಟಿಎಂಸಿಯ ಆರ್.ಚಟರ್ಜಿ ಲಸಿಕೆ ಪಡೆದ ಮೊದಲ ರಾಜಕಾರಣಿಗಳು
ನವದೆಹಲಿ: ಉತ್ತರ ಪ್ರದೇಶದ ಬಿಜೆಪಿ ಸಂಸದ ಡಾ.ಮಹೇಶ್ ಶರ್ಮಾ ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ರವೀಂದ್ರನಾಥ್ ಚಟರ್ಜಿ ಅವರು ಕೋವಿಡ್ ಲಸಿಕೆ ಪಡೆದ ಮೊದಲ ರಾಜಕಾರಣಿಗಳಾಗಿದ್ದಾರೆ. ತರಬೇತಿ ಪಡೆದ ವೈದ್ಯರೂ ಆಗಿರುವ ಡಾ.ಶರ್ಮಾ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ನೋಯ್ಡಾ ಸೆಕ್ಟರ್ 27ರ ಆಸ್ಪತ್ರೆಯೊಂದರಲ್ಲಿ ಲಸಿಕೆ ಹಾಕಿಸಿಕೊಂಡರು. ಬಳಿಕ ಅರ್ಧ ಗಂಟೆ ಅವರ ಆಸ್ಪತ್ರೆ ವೈದ್ಯರ ನಿಗಾದಲ್ಲಿ ಇದ್ದರು ಎಂದು ವರದಿಯಾಗಿದೆ. ‘ಒಬ್ಬ ವೈದ್ಯನಾಗಿ ಕೊರೊನಾ ವೈರಸ್ …
Read More »ಬಿಜೆಪಿ ಜನಸೇವಕ ಸಮಾವೇಶದ ವಿರುದ್ಧ ನ್ಯಾಯಾಲಯಕ್ಕೆ ಹೋಗುವೆ’
ಬೆಳಗಾವಿ: ಕೋವಿಡ್-19 ನಡುವೆಯೂ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಆಯೋಜಿಸಿರುವ ‘ಜನಸೇವಕ ಸಮಾವೇಶ ಸಮಾರೋಪ’ ರದ್ದುಪಡಿಸಬೇಕು ಎಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಮತ್ತು ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ‘ಸಮಾವೇಶ ರದ್ದುಪಡಿಸಬೇಕು ಅಥವಾ ಕೋವಿಡ್ ಮಾರ್ಗಸೂಚಿ ಹಿಂಪಡೆಯಬೇಕು ಎಂದು ಆಗ್ರಹಿಸಿ ಈಚೆಗೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ. …
Read More »ಕೊರೊನಾ ಲಸಿಕೆ ವಿತರಣೆಗೆ ಸಜ್ಜಾದ ಆಸ್ಪತ್ರೆಯ ಸಿಬ್ಬಂದಿ ರಂಗೋಲಿ ಹಾಕಿ ಜನರನ್ನು ಸ್ವಾಗತಿಸಿದ್ದಾರೆ.
ಪುಣೆ: ಕೊರೊನಾ ಲಸಿಕೆ ವಿತರಣೆಗೆ ಸಜ್ಜಾದ ಆಸ್ಪತ್ರೆಯ ಸಿಬ್ಬಂದಿ ರಂಗೋಲಿ ಹಾಕಿ ಜನರನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿ ಲಸಿಕೆಗಾಗಿ ಬರುವ ಜನರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಭಾರತವು ಅತೀ ದೊಡ್ಡ ಲಸಿಕಾ ದಿನವನ್ನು ಆಚರಿಸಲು ಮುಂದಾಗುತ್ತಿದ್ದಂತೆ ಪುಣೆಯ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ಮುಂಭಾಗ ನೀಲಿ ಮತ್ತು ಬಿಳಿ ಬಣ್ಣದ ಹೂವಿನ ರಂಗೋಲಿ ಬಿಡಿಸಿ ಮಧ್ಯದಲ್ಲಿ ಸ್ವಾಗತ ಎಂದು ಬರೆದು ಲಸಿಕೆ ಹಾಕಿಸಿಕೊಳ್ಳಲು ಬರುವ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. …
Read More »ರಾಮ ಮಂದಿರ ನಿರ್ಮಾಣಕ್ಕೆ ಆನಂದ್ ಸಿಂಗ್ ಕುಟುಂಬದಿಂದ ದೇಣಿಗೆ ಸಂಗ್ರಹ
ಬಳ್ಳಾರಿ: ರಾಮ ಮಂದಿರ ನಿರ್ಮಾಣಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಕುಟುಂಬದವರು ದೇಣಿಗೆ ಸಂಗ್ರಹ ಕಾರ್ಯವನ್ನು ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಸರ್ವರೂ ಸಮರ್ಪಣಾ ಭಾವದಿಂದ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂದು ಆನಂದ್ ಸಿಂಗ್ ಮನವಿ ಮಾಡಿದ್ದಾರೆ. ಇಂದು ಬೆಳಗ್ಗಿನಿಂದಲೇ ಸಚಿವರು ಸೇರಿದಂತೆ ಅವರ ಸಂಪೂರ್ಣ ಕುಟುಂಬ ಸದಸ್ಯರು ಈ ಜಾಥಾದಲ್ಲಿ ಪಾಲ್ಗೊಂಡು ನಿಧಿ ಸಂಗ್ರಹಣೆ ಮಾಡಿದ್ದಾರೆ. ನಗರದೆಲ್ಲೆಡೆ ದೇಣಿಗೆ ಸಂಗ್ರಹಿಸಿದ ಬಳಿಕ …
Read More »ಪೊಲೀಸರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಪೊಲೀಸರಿಗೆ ಸಮಯದ ಮಿತಿಯೆಂಬುದೇ ಇರುವುದಿಲ್ಲ: ಅಮಿತ್ ಶಾ
ಶಿವಮೊಗ್ಗ: ಪೊಲೀಸರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಪೊಲೀಸರಿಗೆ ಸಮಯದ ಮಿತಿಯೆಂಬುದೇ ಇರುವುದಿಲ್ಲ. ಸರ್ಕಾರಿ ಉದ್ಯೋಗಿಗಳ ಪೈಕಿ ಪೊಲೀಸರ ಕೆಲಸ ಕಠಿಣವಾದದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಬುಳ್ಳಾಪುರದಲ್ಲಿ 97ನೇ ಆರ್ ಎಎಫ್ ಬೆಟಾಲಿಯನ್ ತರಬೇತಿ ಘಟಕ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಅಮಿತ್ ಶಾ, ಸಿಆರ್ ಪಿ ಎಫ್ ನಮ್ಮ ಶಕ್ತಿ. ದೇಶದ ಮೂಲೆ ಮೂಲೆಗೂ ಸಿಆರ್ ಪಿ ಎಫ್ ಹೋಗುತ್ತದೆ …
Read More »ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದ BSY
ಬೆಂಗಳೂರು: ಎರಡು ದಿನಗಳ ಕಾರ್ಯಕ್ರಮ ಮೇರೆಗೆ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಆತ್ಮೀಯವಾಗಿ ಬರಮಾಡಿಕೊಂಡರು. ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಮಿತ್ ಶಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು, ಈ ವೇಳೆ ಕೇಂದ್ರ ಸಚಿವ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ ಹಾಗೂ ಸಿ.ಟಿ ರವಿ ಮತ್ತಿತರು ಸಿಎಂಗೆ ಸಾಥ್ …
Read More »ವಿಜಯೇಂದ್ರನ ಶಿಷ್ಯರು ಶಾಸಕರ ನಕಲಿ ಸಿಡಿ ಮಾಡ್ತಾರೆ: ಯತ್ನಾಳ್
ವಿಜಯಪುರ: ಸಿಎಂ ಪುತ್ರ ಬಿ.ವೈ.ವಿಜಯೇಂದ್ರನ ಶಿಷ್ಯರು ಕೆಲ ಶಾಸಕರ ನಕಲಿ ಸಿಡಿ ಮಾಡುವ ಕೆಲಸ ಮಾಡ್ತಾರೆ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. , ಕೇವಲ ಮಂತ್ರಿ ಆಗಲು ಯತ್ನಾಳ್ ಟೀಕೆ ಮಾಡುತ್ತಿದ್ದಾನೆ ಅನ್ನೋ ತಪ್ಪು ಸಂದೇಶ ರವಾನಿಸುವ ಕೆಲಸವನ್ನ ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ ಮಾಡುತ್ತಿದ್ದಾರೆ. ನಾನು ಎಂದೂ ಯಾರ ಬಳಿಯೂ ಮಂತ್ರಿ ಮಾಡಿ ಎಂದು ಬಯೋಡೇಟಾ ಹಿಡಿದು ಹೋದವನು ನಾನಲ್ಲ. …
Read More »ಆಪರೇಷನ್ ಕಮಲ, ಹಣದ ಪ್ರಭಾದಿಂದ ಬಿಎಸ್‍ವೈ ಸಿಎಂ ಆಗಿದ್ದಾರೆ: ಸಿದ್ದರಾಮಯ್ಯ
ಆಪರೇಷನ್ ಕಮಲ, ಹಣದ ಪ್ರಭಾದಿಂದ ಬಿಎಸ್‍ವೈ ಸಿಎಂ ಆಗಿದ್ದಾರೆ: ಸಿದ್ದರಾಮಯ್ಯ ಬೆಂಗಳೂರು: ಯಡಿಯೂರಪ್ಪ ಅವರು ಜನರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿ ಆಗಿಲ್ಲ. ಆಪೆರೇಷನ್ ಕಮಲ, ಹಣದ ಪ್ರಭಾವದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಆಪರೇಷನ್ ಕಮಲದ ಜನಕರಾಗಿದ್ದಾರೆ. ಬಿಎಸ್‍ವೈ ಸುಳ್ಳು ಹೇಳಿ, ಎಂಎಲ್‍ಎಗಳನ್ನು ಕೊಂಡುಕೊಂಡು, 9 ಕೋಟಿ ಹಣವನ್ನು ಖರ್ಚು ಮಾಡಿ ಮುಖ್ಯಮಂತ್ರಿ ಆಗಿದ್ದಾರೆ. ಸ್ವತಃ ಅವರ ಪಕ್ಷದವರೇ ಹಣ …
Read More »