ಹುಕ್ಕೇರಿ : ಸತಿ – ಪತಿಯರಲ್ಲಿ ಸಾಮರಸ್ಯ ಕೂಡಿರಲಿ – ಯರನಾಳ ಬ್ರಹ್ಮಾನಂದ ಅಜ್ಜನವರು.
ಸತಿ ಪತಿಯರು ಸಾಮರಸ್ಯದಿಂದ ಬಾಳಿದರೆ ಕುಟುಂಬದಲ್ಲಿ ಸೌಖ್ಯ ಕಾಣಬಹುದು ಎಂದು ಹುಕ್ಕೇರಿ ತಾಲೂಕಿನ ಯರನಾಳ ಕಾಳಿಕಾ ಮಠದ ಬ್ರಹ್ಮಾನಂದ ಅಜ್ಜನವರು ಹೇಳಿದರು.
ಹುಕ್ಕೇರಿ ತಾಲೂಕಿನ ಯರನಾಳ ಕಾಳಿಕಾ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಕಾರಿಮಠದ ಗುರುಸಿದ್ದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಶಿವಾನುಭವ ಗೋಷ್ಟಿ ಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಬ್ರಹ್ಮಾನಂದ ಅಜ್ಜನವರು ಕುಟುಂಬದಲ್ಲಿ ಸುಖ ಶಾಂತಿ ಲಭಿಸಿ ಸಂಸ್ಕಾರಯುತ ಜೀವನ ಸಾಗಿಸಲು ಸತಿ ಪತಿಯರಲ್ಲಿ ಸಾಮರಸ್ಯ ಅವಶ್ಯಕತೆ ಇದೆ ತಾಯಿ, ತಂಗಿ , ಅಕ್ಕ, ಹೆಂಡತಿ ಎಲ್ಲರಿಗೂ ಗೌರವ ಕೊಡಬೇಕು ಅಂದಾಗ ನಮ್ಮ ದೇಶದ ಹಿರಿಮೆ ಜಗತ್ತಿಗೆ ಹರಡುತ್ತದೆ ಎಂದರು
ವೇದಿಕೆ ಮೇಲೆ ಕೃಪಾನಂದ ಸ್ವಾಮಿಗಳು,ಬೆಳವಿ ಸಿದ್ಧಾರೂಡ ಮಠದ ಮೃತ್ಯುಂಜಯ ಸ್ವಾಮಿಗಳು,ಅಜೀತ ಗುರುಗಳು, ಬಡಕುಂದ್ರಿ ಹೋಳೆಮ್ಮಾ ದೇವಿ ಮುಖ್ಯ ಅರ್ಚಕ ಎಚ್ ಎಲ್ ಪೂಜೇರಿ, ತವಗ ಮಠದ ಅಜ್ಜನವರು, ಡಾ, ಪಿ ಶಿವರಾಂ ಉಪಸ್ಥಿತರಿದ್ದರು.
ನಂತರ ಬ್ರಹ್ಮಾನಂದ ಅಜ್ಜನವರಿಗೆ ವಿವಿಧ ಶ್ರೀಗಳಿಂದ ಗೌರವ ಸಮರ್ಪಿಸಲಾಯಿತು.
ಚಿಕ್ಕೋಡಿ ಸೂನ್ಯ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿ ಮಾನಸಿಕ ಅ ಸಮತೋಲನ, ಕೌಟುಂಬಿಕ ಸಮಸ್ಯೆಗಳಿಂದ ಬಳಲುವ ಜನರಿಗೆ ಯರನಾಳ ಬ್ರಹ್ಮಾನಂದ ಅಜ್ಜನವರು ಕಲ್ಪವೃಕ್ಷ ವಾಗಿ ಪರಿಹಾರ ನೀಡುತ್ತಾರೆ ಕಾರಣ ಕರ್ನಾಟಕ, ಗೋವಾ , ಮಹಾರಾಷ್ಟ್ರ ರಾಜ್ಯದಿಂದ ಅಪಾರ ಜನ ಭಕ್ತರು ಆಗಮಿಸಿ ಗುರುಗಳ ಆಶಿರ್ವಾದ ಪಡೆದುಕೋಳ್ಳುತ್ತಾರೆ ಎಂದರು
ಆದಿಕೇಶ್ವರ ವಿದ್ಯಾ ಸಂಸ್ಥೆಯ ಪಾಚಾರ್ಯ ಮತ್ತು ಉಪನ್ಯಾಸಕರಿಗೆ ಹಾಗೂ ಮುಕುಂದ ಮಠದ ಮತ್ತು ಶಂಕರಯ್ಯಾ ಮಠದ ರವರಿಗೆ ಸತ್ಕರಿಸಿ ಅಭಿನಂದಿಸಲಾಯಿತು.
ನಂತರ ಕಾಳಿಕಾ ದೇವಿಯ ರಥೋತ್ಸವ ಪಲ್ಲಕ್ಕಿ ಉತ್ಸವಗಳು ಜರುಗಿದವು.
ಈ ಸಂದರ್ಭದಲ್ಲಿ ಬಸವರಾಜ ತಳವಾರ, ಆನಂದ ವಸ್ತ್ರದ, ಗೋಪಾಲ ಮಠದ, ಹರಿಕೃಷ್ಣಾ, ಅಭಿನವ, ರಮೇಶ ಹುಂಜಿ, ಶಂಕರ ತಿಪ್ಪನಾಯ್ಕ, ಮಹಾದೇವ ಭಿಮಾನಾಯ್ಕ ಹಾಗೂ ಶ್ರೀ ಮಠದ ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .
Laxmi News 24×7