ಬೆಂಗಳೂರು: ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬೇಟೆಗಾರರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗ್ಗೆ 6:30 ಕೋಲಾರಗೆ ಹೋಗುವಾಗ ಮೆಸೇಜ್ ಬಂತು. ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ರಿಪೋರ್ಟ್ ಕೊಡಿ ಅಂತ ಹಿರಿಯ ಅಧಿಕಾರಿಗಳಿಗೆ ಕೇಳಿದ್ದೆ. ಮೀಸಲು ಅರಣ್ಯ ಪ್ರದೇಶ ಅದು. ನಾಡ ಬಂದೂಕುಧಾರಿಗಳು ಯಾವುದೇ ಬಂದೂಕಿಗೆ ಲೈಸೆನ್ಸ್ ಇಲ್ಲ. ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದಾರೆ. ನಾಲ್ಕು ಬ್ಯಾಗ್ ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ. ನಮ್ಮ ಅಧಿಕಾರಿಗಳು ಗಸ್ತು ಹೋಗುವಾಗ ಗೊತ್ತಾಗಿದೆ. ಬೆಳಗ್ಗೆ 5 ಗಂಟೆಗೆ ಆಗಿರುವ ಘಟನೆ ಎಂದು ಸಚಿವರು ತಿಳಿಸಿದ್ದಾರೆ.
ಸಿಎಂ ಅವ್ರು ತನಿಖೆ ಮಾಡ್ತೀವಿ ಅಂತ ಹೇಳಿದ್ದಾರೆ. ಅಲ್ಲಿನ ಜನ ಆರೋಪ ಮಾಡ್ತಿದ್ದಾರೆ. ತನಿಖೆಯ ನಂತರ ತಪ್ಪಿದ್ದರೆ ನಮ್ಮ ಅಧಿಕಾರಿಗಳ ವಿರುದ್ಧ ಕ್ರಮ ಆಗಲಿದೆ. ನಮ್ಮ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಾಡಿದ್ದರೆ ಕ್ರಮ. ಯಾರೋ ಹೇಳಿದ್ರು ಅಂತ ಕ್ರಮ ಆಗಲ್ಲ. ನಮ್ಮಲ್ಲಿ ಶೂಟ್ ಮಾಡುವ ಅಧಿಕಾರ ಇದೆ. ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲಾ ಗೊತ್ತಾಗಲಿದೆ. ಎಲ್ಲಾ ತನಿಖೆ ಆಗಲಿದೆ. ತನಿಖೆ ಆದ ನಂತರ ಗೊತ್ತಾಗಲಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ನಮ್ಮ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಶೂಟ್ ಮಾಡಿದ್ರೆ ಕ್ರಮ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯರ ಆರೋಪಗಳ ಬಗ್ಗೆ ತನಿಖೆ ಬಳಿಕವೇ ಸ್ಪಷ್ಟತೆ ಸಿಗೋದು. ಜಿಲ್ಲಾ ಉಸ್ತುವಾರಿ ಸಚಿವರು ಪುಟ್ಟರಂಗಶೆಟ್ಟಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ತನಿಖಾ ವರದಿ ಬರೋವರೆಗೆ ಯಾವುದೇ ಕ್ರಮ ಸಿಬ್ಬಂದಿ ಮೇಲೆ ತಗೋಳೋದಿಲ್ಲ ಎಂದು ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಮಾತನಾಡಿ, ಮೊದಲು 1.3 ಕೋಟಿ ಮತದಾರರಿದ್ದರು. ಎಸ್‌ಐಆರ್ ಶುರುವಾದ ಮೇಲೆ 51 ಲಕ್ಷಕ್ಕೆ ಮತದಾರರ ಸಂಖ್ಯೆ ಬಂದಿದೆ. ಜನಸಂಖ್ಯೆ ಜಾಸ್ತಿ ಇದ್ರು ಅಂತಾ ಐದು ಪಾಲಿಕೆಯನ್ನ ಶಿವಕುಮಾರ್ ಮಾಡಿದ್ರು. ಈಗ ಮತದಾರರ ಸಂಖ್ಯೆ ಕಡಿಮೆಯಾಗ್ತಿದೆ. ಐದು ಪಾಲಿಕೆಯೇ ಬೇಕಾ, ಕಡಿಮೆ ಮಾಡಬೇಕಾ ಅನ್ನೋದನ್ನ ಶಿವಕುಮಾರ್ ಅವರೇ ನಿರ್ಧಾರ ಮಾಡ್ತಾರೆ. ಈಗಿರೋ ಮತದಾರರ ಸಂಖ್ಯೆಯ ಅನುಗುಣ ನೋಡಿದ್ರೆ 10 ಲಕ್ಷ ಮತರದಾರು ಒಂದು ಪಾಲಿಕೆಗೆ ಬರ್ತಾರೆ. ಸಣ್ಣ ಜನಸಂಖ್ಯೆಗೆ ಒಂದೊಂದು ಪಾಲಿಕೆ ಉಳಿಸೋದನ್ನ ಅಥವಾ ಅದನ್ನ ಕಡಿಮೆ ಮಾಡೋದರ ಬಗ್ಗೆ ಸಿಎಂ ಅವರೇ ನಿರ್ಧಾರ ಮಾಡ್ತಾರೆ ಎಂದು ಹೇಳಿದ್ದಾರೆ.
Laxmi News 24×7