Breaking News
Home / Uncategorized / ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ.

ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ.

Spread the love

ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ. ಈ ಮಧ್ಯೆ ಟ್ರಂಪ್, ಬೈಡನ್ ಹಾಗೂ ಡೆಮಾಕ್ರಟಿಕ್ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಚಲನ ಸೃಷ್ಟಿಮಾಡಿದೆ.

ಜಗದ ಪಾಲಿನ ದೊಡ್ಡಣ್ಣ, ಪವರ್ ಫುಲ್ ರಾಷ್ಟ್ರ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದೆ. ಈಗಾಗ್ಲೇ ಮತದಾನ ಮುಗಿಸಿ, ಮೊದಲ ಸುತ್ತಿನ ಫಲಿತಾಂಶವನ್ನೂ ಪಡೆದಿರುವ ಅಮೆರಿಕದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 5-6 ರಾಜ್ಯಗಳ ಫಲಿತಾಂಶದಲ್ಲಿ ವಿಳಂಬವಾಗಿರುವುದೇ ಇದಕ್ಕೆ ಕಾರಣ.

ವೈಟ್​ಹೌಸ್​ಗೆ ಹೋಗಲು ‘ಮಿಷಿಗನ್’ ಗೆಲ್ಲಲೇಬೇಕು!
ಅಮೆರಿಕದಲ್ಲಿ ಚುನಾವಣಾ ಸಮೀಕ್ಷೆಗಳು ಮಕಾಡೆ ಮಲಗಿವೆ.

ಈಬಾರಿ ಜೋ ಬಿಡೆನ್ ಭಾರಿ ಅಂತರದಲ್ಲಿ ಅಧಿಕಾರ ಹಿಡಿಯಲಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಊಹೆ ಹುಸಿಯಾಗಿದೆ. ಈ ಬಾರಿ ಟ್ರಂಪ್ ಹೀನಾಯವಾಗಿ ಸೋಲ್ತಾರೆ ಎನ್ನುತ್ತಿರುವ ನಡುವೆಯೇ ಪುಟಿದೆದ್ದಿರುವ ಹಾಲಿ ಅಧ್ಯಕ್ಷ ಟ್ರಂಪ್ ಬಿಡೆನ್ ಪಡೆಗೆ ಶಾಕ್ ನೀಡಿದ್ದಾರೆ. ತಮ್ಮ ಎದುರಾಳಿ ಬಿಡೆನ್ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಟ್ರಂಪ್, ಈಗಾಗಲೇ ಗೆಲುವಿಗೆ ಸನಿಹದಲ್ಲಿದ್ದಾರೆ. ಅಲ್ಲದೆ ಅಧ್ಯಕ್ಷರ ಹಣೆಬರಹ ನಿರ್ಧರಿಸುವ ಪೆನ್ಸಿಲ್ವೇನಿಯಾ, ಜಾರ್ಜಿಯಾ ಮತ್ತು ನಾರ್ತ್ ಕೊರೊಲೀನಾ ರಾಜ್ಯಗಳಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನುಳಿದಂತೆ ಮಿಷಿಗನ್, ವಿಸ್ಕಾನ್ಸಿನ್ ಹಾಗೂ ನೆವಾಡಾ ರಾಜ್ಯಗಳಲ್ಲೂ ಟ್ರಂಪ್ ಬಿಡೆನ್​ಗೆ ಠಕ್ಕರ್ ಕೊಡುತ್ತಿದ್ದಾರೆ.

ಟ್ರಂಪ್ ಗೆಲ್ತಾರಾ..? ಬಿಡೆನ್ ಸೋಲ್ತಾರಾ?
ಹೌದು ಈ ಟ್ರಿಲಿಯನ್ ಡಾಲರ್ ಪ್ರಶ್ನೆ ಇಡೀ ಜಗತ್ತನ್ನೇ ಕಾಡುತ್ತಿದೆ. ಆದರೆ ಈವರೆಗೂ ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಏಕೆಂದರೆ ನೆವಾಡಾ ರಾಜ್ಯದಲ್ಲಿ ಮತ ಎಣಿಕೆ ವಿಳಂಬವಾಗಿದ್ದರೆ, ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಬ್ಯಾಲಟ್​ಗಳೇ ಇನ್ನು ಬಂದಿಲ್ಲ. ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಮತ ಎಣಿಕೆ ಅರ್ಧಕ್ಕೆ ನಿಂತಿದ್ದು, ಯಾರು ಅಧ್ಯಕ್ಷರಾಗುತ್ತಾರೆ ಎಂಬುದನ್ನ ಇನ್ನೂ ಫೈನಲ್ ಮಾಡಲು ಆಗಿಲ್ಲ. ಹೀಗಾಗಿ ವೈಟ್​ಹೌಸ್​ಗೆ ಅಧಿಪತಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಫಲಿತಾಂಶದ ನಡುವೆ ಟ್ರಂಪ್ ಹೊಸ ಬಾಂಬ್!
ಅಂದಹಾಗೆ ಫಲಿತಾಂಶ ಇನ್ನೂ ಸಂಪೂರ್ಣವಾಗಿ ಹೊರಬಿದ್ದಿಲ್ಲ. ಆದರೂ ಟ್ರಂಪ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಅದೇನೆಂದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು. ಮೋಸದ ಮತದಾನ ನಿಲ್ಲಿಸಲು ಅಮೆರಿಕದ ಸುಪ್ರೀಂಕೋರ್ಟ್‌ಗೆ ಹೋಗಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ಹೋರಾಟದ ಬಗ್ಗೆ ಮಾಹಿತಿ ನೀಡಿದ್ರು. ಹಲವು ರಾಜ್ಯಗಳಲ್ಲಿ ಗೆದ್ದಿದ್ದೇವೆ ಹಾಗೂ ಅದನ್ನ ಘೋಷಿಸಲು ಹೊರಟಿದ್ದೇವೆ. ಆದರೆ ನಂತರ ಇದ್ದಕ್ಕಿದ್ದಂತೆ ವಂಚನೆ ಸಂಭವಿಸಿ 5 ಲಕ್ಷ ಮತಗಳು ಮಾಯಗಿವೆ ಎಂದಿದ್ದಾರೆ ಟ್ರಂಪ್.

ಒಟ್ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಇಂದು ಸಂಜೆಯವರೆಗೂ ಅಮೆರಿಕ ಅಧ್ಯಕ್ಷರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣ ಸಿಗುವ ಲಕ್ಷಣಗಳಿಲ್ಲ. ಆದರೆ ಜೋ ಬಿಡೆನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಭಾರಿ ಪೈಪೋಟಿ ಇದೆ. ಅಮೆರಿಕ ಮತದಾರರು ಕೂಡ ಇದೇ ಕ್ಷಣಕ್ಕಾಗಿ ಕಾದು ಕುಳಿತಿದ್ದಾರೆ. ಮತ್ತೊಂದು ಬದಿಯಲ್ಲಿ ತಾವು ಸೋತರೆ ಹೋರಾಟಕ್ಕೆ ಮುಂದಾಗುವುದಾಗಿ ಟ್ರಂಪ್ ಹೇಳಿರುವುದು, ಕಿಚ್ಚು ಹೊತ್ತಿಸಿದೆ.


Spread the love

About Laxminews 24x7

Check Also

ಡಿಸಿಎಂ ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಮೇ.27ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Spread the love ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಗೆ ಸರ್ಕಾರದ ಸಮ್ಮತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ