Breaking News

ಎರಡು ದಿನಗಳ ಉಚಿತ ಶ್ರವಣ ಪರೀಕ್ಷಾ ಶಿಬಿರ

Spread the love

ಬೆಳಗಾವಿ: ಯುಗಾದಿ ಹಬ್ಬದ ಅಂಗವಾಗಿ ವಿಶ್ವ ಸ್ಪೀಚ್ ಆ್ಯಂಡ್ ಹಿಯರಿಂಗ್ ಎಯ್ಡ್ ಸೆಂಟರ್ ವತಿಯಿಂದ ಮಾ.15 ಮತ್ತು 16ರಂದು ಬೆಳಗ್ಗೆ 10.30ರಿಂದ ಸಂಜೆ 6.30ರ ವರೆಗೆ ನಗರದ ಛತ್ರಪತಿ ಶಿವಾಜಿ ರಸ್ತೆಯಲ್ಲಿರುವ ರೇಡಿಯೋ ಕಾಂಪ್ಲೆಕ್ಸ್‌ದಲ್ಲಿ ಉಚಿತ ಶ್ರವಣ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಎಲ್ಲ ವಯೋಮಾನದವರಿಗೂ ಉಚಿತವಾಗಿ ಕಿವಿ ಕೇಳುವಿಕೆ (ಶ್ರವಣ) ಪರೀಕ್ಷೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಶ್ರವಣ ಸಮಸ್ಯೆಗಳು ಕಂಡು ಬರುತ್ತಿದೆ. ಮಕ್ಕಳಿಂದ ವಯೋವೃದ್ಧರ ತನಕ ಕಡಿಮೆ ಅಥವಾ ಹೆಚ್ಚು ಪ್ರಮಾಣದಲ್ಲಿ ಕೇಳಿಸದಿರುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಅತ್ಯಾಧುನಿಕ ಯಂತ್ರೋಪಕರಣ ಸಹಾಯದಿಂದ ಪರೀಕ್ಷೆ ನಡೆಸಿ, ದೋಷ ಕಂಡುಬಂದರೆ ಅಂಥವರಿಗೆ ಕಡಿಮೆ ದರದಲ್ಲಿ ಶ್ರವಣ ಯಂತ್ರ ನೀಡಲಾಗುತ್ತದೆ.
ಇದರಲ್ಲಿ ಕಿವಿಯ ಒಳಗೆ ಅಳವಡಿಸುವ ಶ್ರವಣ ಯಂತ್ರ ಕಿವಿಯ ಹಿಂದೆ ಅಳವಡಿಸುವ (ಆಛಿಜ್ಞಿ ಠಿಛಿ ಉಚ್ಟ) ಶ್ರವಣ ಯಂತ್ರ, ರಿಚಾರ್ಜ್ ಮಾಡಬಹುದಾದ ಶ್ರವಣ ಯಂತ್ರ ಹೀಗೆ ವಿವಿಧ ರೀತಿಯ ಶ್ರವಣ ಯಂತ್ರಗಳು ಲಭ್ಯವಿರುತ್ತವೆ. ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ