Breaking News
Home / ಅಂತರಾಷ್ಟ್ರೀಯ / ಟಿ 20 ಇತಿಹಾಸದಲ್ಲಿ ಇದೇ ಮೊದಲು ಇಂತಹ ದಾಖಲೆ ! ಏನು ಗೊತ್ತಾ ?

ಟಿ 20 ಇತಿಹಾಸದಲ್ಲಿ ಇದೇ ಮೊದಲು ಇಂತಹ ದಾಖಲೆ ! ಏನು ಗೊತ್ತಾ ?

Spread the love

ಟಿ 20 ಇತಿಹಾಸದಲ್ಲಿ ಇದೇ ಮೊದಲು ಇಂತಹ ದಾಖಲೆ ! ಏನು ಗೊತ್ತಾ ?

ಆಕ್ಲಾಂಡ್ : ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ನಡೆದ ಮೊದಲ ಟಿ 20 ಪಂದ್ಯದಲ್ಲಿ ಅಪರೂಪದ ದಾಖಲೆಯೊಂದು ದಾಖಲಾಗಿದೆ.

ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ ರನ್ ಗಳ ಸುರಿಮಳೆಗೈದಿದ್ದಾರೆ. ನ್ಯೂಜಿಲೆಂಡ್‌ನ ಮೂವರು ಆಟಗಾರರು ಐವತ್ತಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಜೊತೆಗೆ ಇಬ್ಬರು ಭಾರತೀಯ ಆಟಗಾರರೂ ಸಹಾ ಅರ್ಧಶತಕ ಗಳಿಸಿದ್ದಾರೆ.

ನ್ಯೂಜಿಲೆಂಡ್ ಆಟಗಾರರಾದ ಮುನ್ರೊ (59), ವಿಲಿಯಮ್ಸನ್ (51) ಮತ್ತು ರಾಸ್ ಟೇಲರ್ ( ಔಟಾಗದೆ 54) ಅರ್ಧಶತಕ ಗಳಿಸಿದರೆ, ಭಾರತದ ಪರವಾಗಿ ಕೆ.ಎಲ್. ರಾಹುಲ್ (56) ಮತ್ತು ಶ್ರೇಯಸ್ ಅಯ್ಯರ್ (58 ನಾಟ್ ಔಟಾಗದೆ) ಅರ್ಧಶತಕಗಳನ್ನು ಗಳಿಸಿದರು.

ಈ ಮೂಲಕ ಅಂತಾರಾಷ್ಟ್ರೀಯ ಟಿ 20 ಯಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಐವತ್ತು ರನ್ ಗಳಿಸುತ್ತಿರುವುದು ಇದೇ ಮೊದಲು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಐದು ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಅಂತರರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡಿ ತದನಂತರ ಗುರಿಯನ್ನು ಮುಟ್ಟಿ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದ ಘನತೆ ಭಾರತ ತಂಡದ್ದೇ ಆಗಿದೆ. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಟಿ 20 ಪಂದ್ಯದಲ್ಲಿ ನಾಲ್ಕು ಬಾರಿ 200 ರನ್ ಗಳ ಗುರಿ ಭೇಧಿಸಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಆಸೀಸ್ ಎರಡು ಬಾರಿ ಮಾತ್ರ ಆ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಲಾ ಎರಡು ಬಾರಿ ಗುರಿಯನ್ನು ಛೇಧಿಸಿವೆ.

2009 ರಲ್ಲಿ ಶ್ರೀಲಂಕಾ ವಿರುದ್ಧದ ಮೊಹಾಲಿಯ ಟಿ 20 ಯಲ್ಲಿ ಭಾರತವು ಶ್ರೀಲಂಕಾದ 207 ರನ್‌ಗಳ ಗುರಿಯನ್ನು ತಲುಪಿತ್ತು.
2013 ರಲ್ಲಿ ರಾಜ್‌ಕೋಟ್‌ನಲ್ಲಿ ಆಸೀಸ್ ವಿರುದ್ಧ ಪಂದ್ಯದಲ್ಲಿ 202 ರನ್‌ಗಳ ಗುರಿಯನ್ನು ಮುಟ್ಟಿತ್ತು.
ಕಳೆದ ವರ್ಷದ ಕೊನೆಯಲ್ಲಿ ಟೀಮ್ ಇಂಡಿಯಾ ಹೈದರಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 208 ರನ್ ಗಳಿಸುವ ಗುರಿಯನ್ನು ಹೊಂದಿತ್ತು.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ