Breaking News
Home / new delhi / ೪.೮೦ ಕೋಟಿ ರೂ ಅನುದಾನದಲ್ಲಿ ಸುಣಧೋಳಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ*

೪.೮೦ ಕೋಟಿ ರೂ ಅನುದಾನದಲ್ಲಿ ಸುಣಧೋಳಿ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ*

Spread the love

 

ಮೂಡಲಗಿ: ಸುಣಧೋಳಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಕಹಾಮಾ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಅನುದಾನ ನೀಡಿ ಅಭಿವೃಧಿ ಪಡಿಸುತ್ತಿದ್ದಾರೆ. ಈಂತಹ ಶಾಸಕರು ಪಡೆದಿರುವುದು ಪುಣ್ಯ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಸ್ವಾಮೀಜಿಗಳು ಹೇಳಿದರು.
ಅವರು ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸುಣಧೋಳಿಕ್ರಾಸ್‌ದಿಂದ ಸುಣಧೋಳಿ ಗ್ರಾಮದವರಿಗೆ ಸುಮಾರು ಮೂರು ಕಿ.ಮಿ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯ ೪.೮೦ ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ ಮೂಡಲಗಿ ತಾಲುಕು ಮತ್ತು ಅರಭಾವಿ ಕ್ಷೇತ್ರದಲ್ಲಿ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದ ಅರವರು ವಿದ್ಯಾರ್ಥಿಗಳ ಅನೂಕುಲಕ್ಕಾಗಿ ಅರಭಾವಿ ಕ್ಷೇತ್ರದಲ್ಲಿ ಮೂಡಲಗಿ, ಕುಲಗೋಡ, ಖಾನಟ್ಟಿ, ಬೆಟಗೇರಿ ಗ್ರಾಮಗಳಲ್ಲಿ ಹೊಸ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿದ್ದಾರೆ ಎಂದರು
ಈ ಸಂಧರ್ಭದಲ್ಲಿ ಸುಣಧೋಳಿಯ ಸೋಗಲ ಮಠದ ಶ್ರೀ ಚಿದಾನಂದ ಶರಣರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತಸಹಾಯಕಾರದ ನಾಗಪ್ಪ ಶೇಖರಗೋಳ, ಮಲ್ಲಿಕಾರ್ಜುನ ಯಕ್ಷಂಬಿ ಮತ್ತು ಸುಣಧೋಳಿ ಗ್ರಾಮದ ಗಣ್ಯರಾದ ವಿರಭದ್ರ ವಾಲಿ, ಸದಾಶಿವ ದೇವನಗೋಳ, ಶಿವಾನಂದ ವಾಲಿ, ಭೀಮಪ್ಪ ಹುವನ್ನವರ, ಗ್ರಾ.ಪಂ ಸದಸ್ಯರಾದ ಶ್ರೀಕಾಂತ ದೇವರಮನಿ, ಗದಿಗೇಪ್ಪ ಅಮಣಿ, ಸಿದ್ಧಾರೂಢ ಪಾಶಿ, ಮುಖಂಡರಾದ ಈಶ್ವರ ಅಮಣಿ, ಅಮೀತ ಹಿರೇಮಠ, ಸುರೇಶ ಮಹಾಲಿಮಗಪೂರ, ಬಸವರಾಜ ಗೌಡ್ರ, ಸಿದ್ಲಿಂಗಪ್ಪ ಅಜ್ಜಪ್ಪನವರ, ಬಸವರಾಜ ಪಾಶಿ, ಸಿದ್ದಾರೂಢ ಕಮತಿ, ಸಿದ್ದಾರೂಡ ದೇವನಗೋಳ, ಉದ್ದಪ್ಪ ಮಾದರ, ಸುರೇಶ ಕಂಕಣವಾಡಿ, ಸಿದ್ದಾರೂಢ ಕಮತಿ, ರವೀಂದ್ರ ಹಟ್ಟಿಹೋಳಿ, ರಾಮಣ್ಣ ಬೇಣ್ಣಿ, ನವೀನ ಕಮತಿ, ಶಂಕರ ಪಾಟೀಲ, ಬಾಳಪ್ಪ ಕಮತಿ, ಮುತ್ತೆಪ್ಪ ಜಿಡ್ಡಿಮನಿ, ಪರಶುರಾಮ ಭಜಂತ್ರಿ, ಜಗದೀಶ ಕಮತಿ, ಭೀಮಪ್ಪ ಕಮತಿ, ಶಶಿಕಾಂತ ಬೆಣ್ಣಿ, ಪ್ರಮೋದ ನುಗ್ಗಾನಟ್ಟಿ, ಇಮಾಮ ಮೋಮಿನ, ಬಾಲಚಂದ್ರ ಪಾಟೀಲ, ರೇವಪ್ಪ ನಾಯಿಕ ಮತ್ತಿತರು ಇದ್ದರು.


Spread the love

About Laxminews 24x7

Check Also

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Spread the love ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ