Breaking News

ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ

Spread the love

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ ಎಂದು ಶಾಸಕ ರಾಜೂ ಗೌಡ ಹೇಳಿದ್ದಾರೆ.

 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನ ಬಿಎಸ್‍ವೈ ಅವರು ಕಾರ್ಯಕಾರಿಣಿ ಸಭೆಯಲ್ಲಿ ವಿರೋಧ ಪಕ್ಷದವರನ್ನು ಯಾರು ನಿರ್ಲಕ್ಷಿಸ ಬಾರದು. ಒಳ್ಳೆಯ ರೀತಿ ಕೆಲಸವನ್ನು ಮಾಡಬೇಕು. ಮೋದಿ, ಮೋದಿ ಎನ್ನಲು ಹೋಗಬೇಡಿ ನಿಮ್ಮ ಕೆಲಸವನ್ನು ಮಾಡಿ ಎಂದರು ಹೇಳಿದ್ದಾರೆ ಎಂದಿದ್ದಾರೆ.

ನಾವೇಲ್ಲರು ಬಿಜೆಪಿಯಲ್ಲಿಯೇ ಇರುತ್ತೇವೆ. ಮತ್ತೆ ಬಿಜೆಪಿಯಿಂದಲೇ ಗೆದ್ದು ಮಂತ್ರಿಯಾಗುತ್ತೇವೆ. ಕಾಂಗ್ರೆಸ್‍ನಿಂದ ಕೆಲವು ಶಾಸಕರಿಗೆ ಕರೆ ಬಂದಿದೆ. ಯಾವ ಶಾಸಕರು ಎಂದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತಲು ನಾನು ಶತ ಪ್ರಯತ್ನ ಮಾಡುತ್ತಿದ್ದೇನೆ. ನಾನು ಸಕ್ಸಸ್ ಆಗುತ್ತೇನೆ ಎನ್ನುವ ನಂಬಿಕೆ ನನಗೆ ಇದೆ ಎಂದು ನಕ್ಕಿದ್ದಾರೆ.

ಸಾಕಷ್ಟು ಜನ ಕಾಂಗ್ರೆಸ್‍ನವರೇ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ನಾವು ಇದ್ದವರಿಗೆ ಅಧಿಕಾರ ಕೊಡಲು ಸಾಧ್ಯವಾಗುತ್ತಿಲ್ಲ ಮತ್ತೇ ಯಾಕೆ ಕರೆ ತರುತ್ತೀರ ಎಂದು ಬೊಮ್ಮಾಯಿ ಅವರು ಮತ್ತು ಬಿಎಸ್‍ವೈ ಅವರಿಗೆ ಹೇಳಿದ್ದೇವೆ. ನಮ್ಮವರು ಯಾರು ಪಕ್ಷ ಬಿಟ್ಟು ಹೋಗಲು ತಯಾರಿಲ್ಲ ಎಂದು ನುಡಿದಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ