Breaking News

ಬೆಂಗಳೂರಿನಲ್ಲಿ ಛತ್ತೀಸ್‍ಗಢದ ಬಿಜೆಪಿ ಮಾಜಿ MLA ನಿಧನ

Spread the love

ರಾಯ್‍ಪುರ್: ಛತ್ತೀಸ್‍ಗಢದ ಬಿಜೆಪಿ ಮಾಜಿ ಶಾಸಕ ಯುಧ್ವೀರ್ ಸಿಂಗ್ ಜುದೇವ್ ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಯುಧ್ವೀರ್ ಸಿಂಗ್ ಜುದೇವ್(39) ಲಿವರ್ ಸಮಸ್ಯೆಯಿಂದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಯುಧ್ವೀರ್ ಸಿಂಗ್ ಜುದೇವ್ ಛತ್ತೀಸ್‍ಗಢದ ಜಶ್‍ಪುರದ ಹಿಂದಿನ ರಾಜಮನೆಯನಕ್ಕೆ ಸೇರಿದವರಾಗಿದ್ದು, 2013ರಲ್ಲಿ ನಿಧನರಾದ ಬಿಜೆಪಿಯ ಪ್ರಭಾವಿ ನಾಯಕ ದಿಲೀಪ್ ಸಿಂಗ್ ಜುದೇವ್ ಅವರ ಕಿರಿಯ ಪುತ್ರರಾಗಿದ್ದಾರೆ.

ಯುಧ್ವೀರ್ ಸಿಂಗ್‍ರವರು ಬಹಳ ದಿನಗಳಿಂದ ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೇ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅಲ್ಲಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಸೋಮವಾರ ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಸೋದರ ಸಂಬಂಧಿ ಮತ್ತು ಮಾಜಿ ಬಿಜೆಪಿ ರಾಜ್ಯಸಭಾ ಸದಸ್ಯ ರಣವಿಜಯ್ ಸಿಂಗ್ ಹೇಳಿದ್


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ