Breaking News

ಗೋಕಾಕ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ‌ನಡೆಯುತ್ತಿದ್ದು,ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗರಂ

Spread the love

ಗೋಕಾಕ: ಲಾಕ್‌ಡೌನ್ ಮಧ್ಯೆಯೂ ಗೋಕಾಕ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ‌ನಡೆಯುತ್ತಿದ್ದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗರಂ ಆಗಿದ್ದಾರೆ.

ನಿನ್ನೆ ನಗರದಲ್ಲಿ ಮಾತಾನಾಡಿ ಜನರಿಗೆ ಬೇಕಾಗಿರುವ ದಿನನಿತ್ಯ ಬಳಕೆಯ ವಸ್ತುಗಳನ್ನು ಸಾಗಾಟ ಮಾಡುವವರಿಗೆ ಪೊಲೀಸರು ಹಿಡಿದು ಥಳಿಸುತ್ತಿದ್ದಾರೆ. ಮರಳು ಲಾರಿಗಳನ್ನು ಬಿಡುತ್ತಿದ್ದಾರೆ.ಲಾಕ್‌ಡೌನ್ ನಲ್ಲಿ ಮರಳಿನ ಅವಶ್ಯಕತೆ ಏನೂ? ಲೋಕೋಪಯೋಗಿ ಇಲಾಖೆ ಇದಕ್ಕೆ ಪರಮಿಷನ್ ನೀಡಿದ್ದೇಯಾ? ಎಂದು ಕಿಡಿಕಾರಿದ್ದಾರೆ.

ಕಣ್ಮುಚ್ಚಿ ಕುಳಿತಿರುವ ಲೋಕೋಪಯೋಗಿ, ಕಂದಾಯ ಇಲಾಖೆ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಡವರಿಗೊಂದು ನ್ಯಾಯ ಪ್ರಭಾವಿಗಳಿಗೊಂದು ನ್ಯಾಯವೇ? ಜನರ ಹಿತಕಾಯುವ ಜವಾಬ್ದಾರಿ ಆಡಳಿತ ಪಕ್ಷದವರಿಗಷ್ಟೇ ಇಲ್ಲ ನಮ್ಮ ಮೇಲೂ ಇದೆ ಎಂದು ಸತೀಶ ಜಾರಕಿಹೊಳಿ‌ ಗುಡುಗಿದ್ದಾರೆ.


Spread the love

About Laxminews 24x7

Check Also

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ