ಯಮಕನಮರಡಿ: ಲಾಕ್‌ಡೌನ್ ನಿಮಿತ್ಯ ಯಮಕನಮರಡಿ ಕ್ಷೇತ್ರದ ಹುದಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಇಂದು ಶಾಸಕ ಸತೀಶ ಜಾರಕಿಹೊಳಿ ಪರೀಶಿಲನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.
ಕೋರೊನಾ ರೋಗ ಹರಡದಂತೆ ಹುದಲಿ ಗ್ರಾಮ ಪಂಚಾಯತಿ ಜನರಲ್ಲಿ ಯಾವ ರೀತಿ ಜಾಗ್ರತೆ ಮೂಡಿಸುತ್ತಿದೆ ಎಂದು ಮಾಹಿತಿ ಪಡೆದುಕೊಂಡ ಶಾಸಕರು ಗ್ರಾಮಸ್ಥರಲ್ಲಿ ಮನೆಯಿಂದ ಯಾರೂ ವಿನಾಕಾರಣ ಹೊರಗಡೆ ಬಾರದಂತೆ ಮನವಿ ಮಾಡಿಕೊಂಡರು.
ಹುದಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುದಲಿ, ಕಲಕಾಂಭ, ಮುಚ್ಚಂಡಿ, ಅಷ್ಟೆ, ತುಮ್ಮರಗುದ್ದಿ, ಧರನಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಕೊರೋನಾ ನಿಮಿತ್ಯ ಜಾರಿಯಲ್ಲಿರುವ ಲಾಕ್ ಡೌನ್ ಕ್ರಮಗಳನ್ನು ಪರಿಶೀಲಿಸಿ ಮತ್ತು ಜಾಗೃತಿ ಮೂಡಿಸಿದರು.
ಕೊರೋನಾದಿಂದಾಗಿ ಹೋಮ್ ಕ್ವಾರಂಟೈನ್ ನಲ್ಲಿರುವ ಜನರ ಬಗ್ಗೆ ಮಾಹಿತಿ ಪಡೆದರು.ಪೊಲೀಸರಿಗೆ ಮಾಸ್ಕ್ ವಿತರಿಸಿ ಜನರಿಗೆ ಅಗತ್ಯ ವಸ್ತುಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.
ಇದೆ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು.