Breaking News

‘ಮರೆಯದ ಮಾಣಿಕ್ಯ’ ಪ್ರಶಸ್ತಿ ಪ್ರದಾನ

Spread the love

ಗೋಕಾಕ: ಬೆಂಗಳೂರು ಮೂಲದ ಆಶಾಕಿರಣ ಕಲಾ ಟ್ರಸ್ಟ್‌.ರಿ ಗೋಕಾಕ ಸಂಸ್ಥೆಯಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಮರೆಯದ ಮಾಣಿಕ್ಯ’ ಪ್ರಶಸ್ತಿ ಪ್ರದಾನವನ್ನು ಶನಿವಾರ ಇಲ್ಲಿನ ಜೆಎಸ್‌ಎಸ್ ಪದವಿ ಪೂರ್ವ ಸಭಾಭವನದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.

 

ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಗೋಕಾಕದ ವೈದ್ಯ ಅಶೋಕ ಜಿರಗ್ಯಾಳ ಮತ್ತು ಶಿವರಾಜ ಗೌಡ, ರಂಗಭೂಮಿ ಕಲಾವಿದ ರೇವಣಸಿದ್ದ ಕಣಕಿಕೋಡಿ, ಕೊಪ್ಪಳ ಜಿಲ್ಲಾ ಕಾರಾಗೃಹ ಅಧೀಕ್ಷಕ ಅಂಬರೀಶ ಪೂಜಾರಿ, ಜಾನಪದ ಕಲಾವಿದ ಸಾಹಿತಿ ಜಯಾನಂದ ಮಾದರ, ಮಂಜುಳಾ ಮದನಭಾವಿ, ಮೋಹನ ದೇವನಹಳ್ಳಿ, ಹುಬ್ಬಳ್ಳಿಯ ಶೋಭಾ ತೋಟದ, ಗಾಯಕ ಲಕ್ಷ್ಮೀಪತಿ ವಿಜಯಪುರ, ಡಾ.ಶಕ್ತಿ ಪಾಟೀಲ, ಶಿಕ್ಷಕಿ ವಿಷಯಾ ಜೇವೂರ, ಸಮಾಜ ಸೇವೆಯಲ್ಲಿ ಸೋಮಶೇಖರ ಮಗದುಮ, ಪರಮ ಗುಬ್ಬಿ, ಆಶಾಲತಾ ಎಚ್ ಗೌರಿ, ಮಹಾಂತೇಶ ಗಜೇಂದ್ರಗಡ, ಹೂಲಿಯೂರದುರ್ಗದ ಲಕ್ಷ್ಮೀ ನಾರಾಯಣ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜಕೀಯ ಮುಖಂಡ ಅಶೋಕ ಪೂಜಾರಿ, ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಕಡಕೋಳ, ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷೆ ರಜನಿ ಜಿರಗ್ಯಾಳ, ಅಖಿಲ ಭಾರತ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ತಾಂವಶಿ, ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ಘಟಕ ಅಧ್ಯಕ್ಷೆ ಭಾರತಿ ಮದಭಾಂವಿ ಹಾಗೂ ಟ್ರಸ್ಟ್‌ನ ಅಧ್ಯಕ್ಷೆ ಮಾಲತಿಶ್ರೀ ಮೈಸೂರು ಗೌರವಿಸಿ, ಪ್ರೋತ್ಸಾಹಿಸಿದರು.


Spread the love

About Laxminews 24x7

Check Also

ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಹತ್ಯೆ

Spread the loveಬೆಳಗಾವಿ: ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ