ಗುಂಡುಮುಣುಗು ಕರೆ: ಮಣ್ಣು,ಮರಳು ವಷ೯ದಿಂದ ಲೂಟಿ-ಪೊಲೀಸರ ದಾಳಿ ಜೆಸಿಬಿ ವಶಕ್ಕೆಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು. ಕುರಿಹಟ್ಟಿ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಬಗೆಯುತ್ತಿದ್ದ ಜೆಸಿಬಿಯನ್ನು ಹಾಗು ಓವ೯ ಆರೋಪಿಯನ್ನು ಬಂಧಿಸಿ. ಹೊಸಹಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆಂದು ಖಾನಾಹೊಸಹಳ್ಳಿಯ ಪ್ರತ್ಯಕ್ಷದಶಿ೯ಗಳು ತಿಳಿಸಿದ್ದರೆ.ಕೆರಗಳಲ್ಲಿ ಅಕ್ರಮವಾಗಿ ಹಗಲಿನಲ್ಲಿ ಮಣ್ಣು ರಾತ್ರಿ ಮರಳು ಅಗೆಯಲು ಈ ಜೆಸಿಬಿ ಬಳಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
.ಕಳೆದ ವಷ೯ದಿಂದ ಗುಂಡುಮುಣುಗು.ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುತ್ತ ಮುತ್ತಲ ಗ್ರಾಮಗಳ ಕೆರೆ ಹಳ್ಳಗಳಲ್ಲಿ ಹಾಡುಹಗಲೆ ಪ್ರತಿದಿನ ಹತ್ತಾರು ಟಿಪ್ಪರ್ ಮಣ್ಣು ಇಟ್ಟಂಗಿ ಎಂಡೆಗಾಗಿ ಮಣ್ಣು ಸಾಗಿಸಲಾಗುತ್ತಿದೆ ಹಾಗೂ ರಾತ್ರಿಹೊತ್ತಲ್ಲಿ ಮರಳು ಸಾಗಿಸಲಾಗುತ್ತಿದೆ.ಎಂದು ಕುರಿಹಟ್ಟಿ ಗ್ರಾಮಪಂಚಾಯ್ತಿ ಸದಸ್ಯ ಓಬಣ್ಣ ದೂರಿದ್ದಾರೆ.ಪ್ರತಿದಿನ ಹತ್ತಾರು ಲೋಡ್ ಗಳಂತೆ ಸುಮಾರು ಒಂದೂ ವರೆ ವಷ೯ದಿಂದ ಅಕ್ರಮ ಮರಳು ಹಾಗೂ ಮಣ್ಣು ಸಾಗಾಣಿಕೆ ಮಾಡಲಾಗುತ್ತಿದೆ.ಸಕಾ೯ರಕ್ಕೆ ಕೋಟಿಗಟ್ಟಲೆ ಹಣ ನಷ್ಠ ಮಾಡಲಾಗಿದೆ ಎಂದು ಗ್ರಾ ಪಂ ಸದಸ್ಯ ಕುರಿಹಟ್ಟಿ ಓಬಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾನಾಹೊಸಹಳ್ಳಿ ಪೊಲೀಸರು ಪ್ರಭಾವಿಗಳು ಸೇರಿ ಈ ಅಕ್ರಮಗಳನ್ನು ನಡೆಸುತ್ತಿದ್ದಾರೆ.
ಅಕ್ರಮಗಳನ್ನು ಹಿಡಿದುಕೊಟ್ಟರೆ ಆರೋಪಿಗಳಿಂದ ಹಣಪಡೆದು ಪೊಲೀಸರು ಅಕ್ರಮಕೋರರನ್ನು ಬಿಡುತ್ತಿದ್ದಾರೆ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.ಮಾಧ್ಯಮದವರು ಸ್ಥಳಕ್ಕೆ ಬಂದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕುರಿಹಟ್ಟಿ ಗ್ರಾಪಂ ಸದಸ್ಯ ಓಬಣ್ಣ ಕೋರಿದ್ದಾರೆ