Breaking News
Home / ಜಿಲ್ಲೆ / ಡಾ.ರಾಜ್‍ಕುಮಾರ್ ಅವರ ಮಕ್ಕಳೊಂದಿಗೆ ಸಮಯ ಕಳೆದದ್ದೆ ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಬಾಲಿವುಡ್‍ನ ಬಿಗ್ ಬಿ ಅಮಿತಾಬ್‍ಬಚ್ಚನ್ ಅವರು ಹೇಳಿದ್ದಾರೆ.

ಡಾ.ರಾಜ್‍ಕುಮಾರ್ ಅವರ ಮಕ್ಕಳೊಂದಿಗೆ ಸಮಯ ಕಳೆದದ್ದೆ ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಬಾಲಿವುಡ್‍ನ ಬಿಗ್ ಬಿ ಅಮಿತಾಬ್‍ಬಚ್ಚನ್ ಅವರು ಹೇಳಿದ್ದಾರೆ.

Spread the love

ಮುಂಬೈ,  ಚಿತ್ರರಂಗದ ಮಹಾನ್ ಸ್ತಂಭಗಳಾದ ಡಾ.ರಾಜ್‍ಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ಶಿವಾಜಿ ಗಣೇಶನ್‍ರಂತಹ ಸ್ಟಾರ್‍ಗಳು ಹಾಗೂ ಅವರ ಮಕ್ಕಳೊಂದಿಗೆ ಸಮಯ ಕಳೆದದ್ದೆ ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಬಾಲಿವುಡ್‍ನ ಬಿಗ್ ಬಿ ಅಮಿತಾಬ್‍ಬಚ್ಚನ್ ಅವರು ಹೇಳಿದ್ದಾರೆ.

ಕಲ್ಯಾಣ್ ಜ್ಯೂವಲರ್ಸ್‍ನ ಜಾಹೀರಾತಿನಲ್ಲಿ ಕತ್ರೀನಾಕೈಫ್‍ರ ವಿವಾಹದ ಸಂದರ್ಭದಲ್ಲಿ ಮಹಾನ್ ಸ್ಟಾರ್ ಮಕ್ಕಳಾದ ಶಿವರಾಜ್‍ಕುಮಾರ್, ನಾಗಾರ್ಜುನ್, ಶಿವಾಜಿ ಪ್ರಭುರೊಂದಿಗೆ ತೆಗೆಸಿಕೊಂಡ ಫೋಟೋವನ್ನು ಬಿಗ್ ಬಿಯ ಅಭಿಮಾನಿಗಳು ಇನ್‍ಸ್ಟಾಗ್ರಾಮ್‍ಗೆ ಹಾಕಿರುವುದನ್ನು ನೋಡಿ ಭಾವುಕರಾದರು. ಭಾರತೀಯ ಚಿತ್ರರಂಗದ ಉನ್ನತೀಕರಣಕ್ಕೆ ಡಾ.ರಾಜ್‍ಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ಶಿವಾಜಿ ಗಣೇಶನ್‍ರವರು ಬಹಳಷ್ಟು ಶ್ರಮಿಸಿದ್ದಾರೆ, ಇಂದು ಅವರ ಮಕ್ಕಳಾದ ಶಿವರಾಜ್‍ಕುಮಾರ್, ಅಕ್ಕಿನೇನಿ ನಾಗಾರ್ಜುನ್,


ಶಿವಾಜಿ ಪ್ರಭು ಅವರು ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಚಿತ್ರರಂಗದಲ್ಲಿ ನಾನು ಹಾಗೂ ಜಯಾ ಬಚ್ಚನ್ ಅವರು ಮೇರು ಪರ್ವತಕ್ಕೆ ತಲುಪಲು ರಾಜ್‍ಕುಮಾರ್, ನಾಗೇಶ್ವರರಾವ್, ಶಿವಾಜಿಗಣೇಶನ್‍ರಂತಹ ಶ್ರೇಷ್ಠ ಕಲಾವಿದರ ಮಾರ್ಗದರ್ಶನವೇ ಕಾರಣವಾಗಿದೆ. ಅಂತಹ ಸ್ಟಾರ್‍ಗಳನ್ನು ಭೇಟಿ ಮಾಡಿದ ಸಂದರ್ಭವೇ ಅತ್ಯಮೋಘ, ಅಂತಹ ಸ್ಟಾರ್‍ಗಳ ಮಕ್ಕಳ ಚಿತ್ರದಲ್ಲಿ ನಟಿಸಬೇಕೆಂಬ ಬಯಕೆ ನನ್ನಲ್ಲಿದೆ ಎಂದು ಅಮಿತಾಭ್‍ಬಚ್ಚನ್ ತಮ್ಮ ಮನದ ಇಂಗಿತವನ್ನು ಹೊರಹಾಕಿದರು.

ನಾಗೇಶ್ವರರಾವ್‍ರ ಪುತ್ರ ಅಕ್ಕಿನೇನಿ ನಾಗಾರ್ಜುನ್‍ರೊಂದಿಗೆ ಅಗ್ನಿವರ್ಷ್ ಹಾಗೂ ಕುದಾಗವಾ ಚಿತ್ರದಲ್ಲಿ ಅಮಿತಾಭ್‍ಬಚ್ಚನ್ ಸ್ಕ್ರೀನ್ ಹಂಚಿಕೊಂಡಿದ್ದಾರೆ,


Spread the love

About Laxminews 24x7

Check Also

ಪೊಲೀಸ್ ಫೋನ್ ಇನ್ ಕಾರ್ಯಕ್ರಮ; 6ನೇ ಕಾರ್ಯಕ್ರಮದಲ್ಲೂ ಸಮಸ್ಯೆಗಳ ಮಹಾಪೂರ

Spread the loveಬೆಳಗಾವಿ : ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಆರಂಭಿಸಿರುವ ಫೋನ್ ಇನ್ ಕಾರ್ಯಕ್ರಮದ 6ನೇ ಕಾರ್ಯಕ್ರಮದಲ್ಲೂ ಅಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ