ಬೆಳಗಾವಿ ನಗರದಲ್ಲಿರುವ “ಬಳ್ಳಾರಿ ನಾಲೆ”ಯು ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಅಕ್ಕ ಪಕ್ಕದ ಸಾರ್ವಜನಿಕರ ಮನೆಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ನಾಲೆಗೆ ವ್ಯವಸ್ಥಿತವಾದ ಒಡ್ಡು ನಿರ್ಮಾಣ ಮಾಡಿ ನಗರದ ಹೊರವಲಯಕ್ಕೆ ಹರಿಯುವಂತೆ ಮಾಡಬೇಕಾಗಿರುವುದರಿಂದ, ಇಂದು ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಕೊನ್ವಾಳ್ ಗಲ್ಲಿ, ಓಲ್ಡ್ ಪಿಬಿ ರೋಡ್, ಅಲರವಾಡ್ ಬ್ರಿಡ್ಜ್ ಹಾಗೂ ನಗರದ ಮುಂತಾದ ಕಡೆಗಳಲ್ಲಿ ನಾಲೆ ಹರಿಯುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಾಯಿತು. ಮಳೆಗಾಲಕ್ಕೆ ಮುಂಚಿತವಾಗಿ ಒಡ್ಡು ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಸಂಪೂರ್ಣವಾಗಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾ ಶ್ರೀ ರಮೇಶ್ ಜಾರಕಿಹೊಳಿ, ಶ್ರೀ ಅಭಯ್ ಪಾಟೀಲ್, ಶ್ರೀ ಅನಿಲ್ ಬೆನಕೆ, ಶ್ರೀ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಗುಳ್ಳಪ್ಪ ಹೊಸಮನಿ, ಶ್ರೀ ಕಿರಣ್ ಜಾದವ್, ಶ್ರೀ ರಾಹುಲ್ ಮುಚ್ಚಂಡಿ, ಜಿಲ್ಲಾಧಿಕಾರಿಗಳಾದ ಶ್ರೀ ಎಸ್ ಬಿ ಬೊಮ್ಮನಹಳ್ಳಿ, ಪೋಲಿಸ್ ಕಮಿಷನರ್ ಲೋಕೇಶ್ ಕುಮಾರ್, ಶ್ರೀ ಜಗದೀಶ್, ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.