Breaking News

ನರೇಂದ್ರ ಮೋದಿಗೆ ಸಂದೇಶ ನೀಡಿದಂತೆ ದೀಪ ಬೆಳಗಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡೋಣ: ಚಿವ ರಮೇಶ ಜಾರಕಿಹೊಳಿ

Spread the love

ಬೆಳಗಾವಿ: ಕೊರೊನಾ ಸೋಂಕು ನಿರ್ಮೂಲನೆಗೆ ಹೆಜ್ಜೆ ಹಾಕುತ್ತಿರುವ ನಾವು ಏ.5ರಂದು ಪ್ರಧಾನಿ ನರೇಂದ್ರ ಮೋದಿಗೆ ಸಂದೇಶ ನೀಡಿದಂತೆ ದೀಪ ಬೆಳಗಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡೋಣವೆಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು,ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಂಡಿವೆ. ಈ ನಿಟ್ಟಿನಲ್ಲಿ ಜನರು ನಿಯಮಗಳನ್ನು ಪಾಲಿಸಬೇಕು ಎಂದರು.

ಭಾರತವನ್ನು ಕೊರೊನಾ ಸೋಂಕು ಮುಕ್ತ ಮಾಡುವ ನಮ್ಮ ಸಂಕಲ್ಪ ಶಕ್ತಿಯ ಬೆಳಕನ್ನು ವಿಶ್ವಕ್ಕೆ ತೋರಿಸಬೇಕಾಗಿದೆ. ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕಾಗಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಭಾನುವಾರ ಏ. 5 ರ ರಾತ್ರಿ 9 ಗಂಟೆಗೆ ಕನಿಷ್ಠ 9 ನಿಮಿಷ ಗಳ ಕಾಲ ನಮ್ಮ ಮನೆಗಳ ವಿದ್ಯುತ್ ದೀಪಗಳನ್ನು ಆರಿಸಿ, ಮೇಣದ ಬತ್ತಿಗಳ ದೀಪಗಳನ್ನು ಪ್ರಜ್ವಲಿಸೋಣ ಎಂದು ತಿಳಿಸಿದ್ದಾರೆ.

 

ಕೊರೊನಾ ಸೋಂಕು ಹೊಡೆದೊಡಿಸಲು ಸಾಮಾಜಿಕ ಅಂತರವೇ ರಾಮಬಾಣವಾಗಿದೆ. ಇದರಿಂದ ದೀಪ ಹಚ್ಚುವ ನೆಪದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮರೆಯಬೇಡಿ ಎಂದಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ