Breaking News

SIR ದುರ್ಬಳಕೆ ಮಾಡಿಕೊಂಡಿಲ್ಲ – ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದ ಯತೀಂದ್ರ

Spread the love

ಬೆಂಗಳೂರು: ಎಸ್‌ಐಆರ್  ದುರ್ಬಳಕೆ ಮಾಡಿಕೊಂಡಿಲ್ಲ, ರಾಮನಗರದಲ್ಲಿ ಮಾತ್ರ ಹಾಗಾಗಿದೆ, ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಎಸ್‌ಐಆರ್ ಲೋಪದ ಬಗ್ಗೆ ವಿಪಕ್ಷಗಳ ದೂರು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯನ್ನು ಯಾವುದೇ BLOಗಳು ಮಿಸ್ ಯೂಸ್ ಮಾಡಿಕೊಂಡಿಲ್ಲ. ರಾಮನಗರದಲ್ಲಿ  ಮಾತ್ರ ಆ ರೀತಿ ಆಗಿದೆ. ಅದೂ ಕೂಡ ಎಸ್‌ಐಆರ್ ಬಗ್ಗೆ ಮಾಹಿತಿ ಕೊಡೋಕೆ ಒಂದು ಕಡೆ ಸೇರಿದ್ದಾರೆ ಅಷ್ಟೆ. ಇದಕ್ಕೆ ಎಸ್‌ಐಆರ್ ಮಿಸ್ ಯೂಸ್ ಅಂತ ವಿಪಕ್ಷಗಳು ಆರೋಪ ಮಾಡ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಯನ್ನ ಎಲೆಕ್ಷನ್ ಕಮೀಷನ್ ನಡೆಸುತ್ತಿದೆ. ಇದರಲ್ಲಿ ಯಾವುದೇ ರೀತಿ ಅವ್ಯವಹಾರ ಆಗಿಲ್ಲ. ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಸುಮ್ಮನೆ ವಿಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ಕಿಡಿಕಾರಿದ್ದಾರೆ

ಖಾತೆ ಬದಲಾವಣೆ ಅವಶ್ಯಕತೆಯಿಲ್ಲ:
ಯತೀಂದ್ರ ಖಾತೆ ಬದಲಾವಣೆ ಮಾಡುವಂತೆ ನೈಜ ಹೋರಾಟಗಾರ ವೇದಿಕೆಯಿಂದ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಕೇಸ್  ದೂರು ನನ್ನ ಮೇಲೆ ಇರೋದಲ್ಲ. ತಂದೆ-ತಾಯಿ ಮೇಲೆ ಕೇಸ್ ಹಾಕಿದ್ರು. ಈಗಾಗಲೇ ಲೋಕಾಯುಕ್ತ ತನಿಖೆ ವರದಿ ಕೊಟ್ಟಿದೆ. ಆ ವರದಿಯನ್ನ ಜನಪ್ರತಿನಿಧಿಗಳ ನ್ಯಾಯಾಲಯ ಒಪ್ಪಿದೆ. ಈಗಾಗಲೇ ತನಿಖೆ ಮುಗಿದಿದೆ. ತನಿಖೆ ಮುಗಿದಿರೋದ್ರಿಂದ ನಾವು ಹಸ್ತಕ್ಷೇಪ ಮಾಡೋದೇನಿದೆ. ಖಾತೆ ಬದಲಾವಣೆ ಮಾಡೋ ಅವಶ್ಯಕತೆ ಇಲ್ಲ. ಸಾರ್ವಜನಿಕ ವಲಯದಲ್ಲಿ ಇಂತಹ ಟೀಕೆ ಬರುತ್ತೆ. ಎದುರಿಸಬೇಕು ಎಂದಿದ್ದಾರೆ

ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಯಾವಾಗ ಕರೆಯುತ್ತಾರೆ ಆಗ ನಾಯಕರು ಹೋಗ್ತಾರೆ. ಆಗ ವಿಸ್ತರಣೆ ಆಗುತ್ತದೆ. ಈ ತಿಂಗಳೊಳಗೆ ಕ್ಯಾಬಿನೆಟ್ ವಿಸ್ತರಣೆ ಆಗಬಹುದು. ನಾನು ಹೆಚ್ಚುವರಿ ಖಾತೆ ಕೇಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ SIR ಲೋಪ – ಬಿಜೆಪಿ, ಜೆಡಿಎಸ್‌ನ ಮೈತ್ರಿ ನಾಯಕರಿಂದ ಮುಖ್ಯ ಚುನಾವಣಾಧಿಕಾರಿಗೆ ದೂರು

Spread the loveಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ  ಕೆಲವು ಲೋಪ ಕಂಡುಬಂದ ಹಿನ್ನೆಲೆ ಬಿಜೆಪಿ, ಜೆಡಿಎಸ್  ಮೈತ್ರಿ ನಾಯಕರು ಮುಖ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ