ಕಲಬುರಗಿ: ರಾಜ್ಯದಲ್ಲಿ ಹುಸಿ ಬಾಂಬ್ ಬೆದರಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಯಾದಗಿರಿ ಹಾಗೂ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ನಿರ್ಭಯ ಪ್ರಕರಣದಲ್ಲಿದ್ದ ಆರೋಪಿಗಳ ರೀತಿಯಲ್ಲ, ಈ ಪೋಕ್ಸೋ ಆರೋಪಿಗಳನ್ನು ಬಿಡಿ ಎಂದು ಕಲಬುರಗಿ ಕೋರ್ಟ್‌ಗೆ ಬಂದ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ 2 ರಿಂದ 3 ಬಾರಿ ಬಾಂಬ್ ಬೆದರಿಕೆ ಬಂದಿದೆ. ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ತಮಿಳುನಾಡು ಮೂಲದ ಉದಯ್ ಸೇತುಪತಿ ಎಂಬಾತನಿಂದ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಅದರಲ್ಲಿ ನಾಲ್ಕು ಆರ್‌ಡಿಎಕ್ಸ್ ಐಇಡಿಎಸ್ ಇಟ್ಟು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದು, ಮಧ್ಯಾಹ್ನ ಎರಡು ಗಂಟೆಗೆ ಬ್ಲಾಸ್ಟ್ ಮಾಡುವುದಾಗಿ ಉಲ್ಲೇಖಿಸಿದ್ದಾನೆ. ಜೊತೆಗೆ ಪೋಕ್ಸೋ ಪ್ರಕರಣದ ಆರೋಪಿಗಳಾದ ಆರ್.ಜೆ ಶರಣ್ ಜಯರಾಮ್, ಜಲ್ಲಿಕಟ್ಟು ಜ್ಯೂಲಿಯನ್ನ ಬಿಡಬೇಕು. ನಿರ್ಭಯ ರೇಪ್ ಕೇಸ್ ಪ್ರಕರಣದಂತಹ ಆರೋಪಿಗಳು ಇವರಲ್ಲ. ಹಾಗಾಗಿ ಬಿಡುಗಡೆ ಮಾಡಬೇಕು ಎಂದು ಮೇಲ್‌ನಲ್ಲಿ ಆಗ್ರಹಿಸಿದ್ದಾನೆ.
ಬಾಂಬ್ ಬೆದರಿಕೆ ಮೇಲ್ ಕಂಡು ಸಿಬ್ಬಂದಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ತಕ್ಷಣ ಸ್ಟೇಷನ್ ಬಜಾರ್ ಪೊಲೀಸರು ಸೇರಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಪರಿಶೀಲನೆ ನಡೆಯುತ್ತಿದೆ.
ಇನ್ನೂ ಯಾದಗಿರಿ ಜಿಲ್ಲಾ ಕೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆಯ ಮೇಲ್ ಬಂದಿದೆ. ನಗರದ ಹೊರಭಾಗವಿರುವ ಈ ಕೋರ್ಟ್‌ಗೆ ಅನಾಮಧೇಯ ವ್ಯಕ್ತಿಯೋರ್ವ ಮೇಲ್ ಕಳುಹಿಸಿದ್ದಾನೆ. ಬೆದರಿಕೆ ಹಿನ್ನೆಲೆ ಸಿಬ್ಬಂದಿ ವರ್ಗ, ವಕೀಲರು ಹಾಗೂ ಕಕ್ಷಿದಾರರು ಕೋರ್ಟ್ನಿಂದ ಹೊರಬಂದಿದ್ದಾರೆ. ಸದ್ಯ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಕೋರ್ಟ್ ಆವರಣ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸುತ್ತಿದೆ.
Laxmi News 24×7