ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಎಲ್ಲಾ ದೇವಾಲಯಗಳು ಬಂದ್ ಆಗಿವೆ. ಆದರೆ ರಾಯಚೂರಿನಲ್ಲಿ ರಾಮನವಮಿಗೆ ಮಾತ್ರ ಲಾಕ್‍ಡೌನ್ ಬಿಸಿ ತಟ್ಟಲಿಲ್ಲ. ಬೆಳಗ್ಗೆಯಿಂದ ರಾಮ ಭಕ್ತರು ನಿರಂತರವಾಗಿ ದರ್ಶನ ಪಡೆದಿದ್ದಾರೆ.
ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಮಂದಿರಲ್ಲಿ ಭಕ್ತರು ಯಾವ ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆ ಮುಗಿಬಿದ್ದು ದರ್ಶನ ಪಡೆದಿದ್ದಾರೆ. ಮಂದಿರದ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದರೂ ಪಕ್ಕದ ಚಿಕ್ಕ ದ್ವಾರದಿಂದ ಭಕ್ತರ ಪ್ರವೇಶಕ್ಕೆ ಅರ್ಚಕರು ಅನುವು ಮಾಡಿಕೊಟ್ಟಿದ್ದಾರೆ
ಸರ್ಕಾರಿ ಆದೇಶ ಉಲ್ಲಂಘಿಸಿ ರಾಮಭಕ್ತರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಾಲಯ ಆಡಳಿತ ಮಂಡಳಿ ಸಹ ಲಾಕ್ ಉಲ್ಲಂಘಿಸಿ ಭಕ್ತರ ಪ್ರವೇಶಕ್ಕೆ ಅವಕಾಶ ಕೊಟ್ಟಿದೆ.