Breaking News

ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಪಿಆರ್‌ಗಳ ಪಾತ್ರ ಪ್ರಮುಖ: ಡಾ. ಕರ್ನಲ್‌ ಎಂ ದಯಾನಂದ

Spread the love

ಬೆಳಗಾವಿ: ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಹಲವಾರು ಸಮಸ್ಯೆಗಳು, ಒತ್ತಡಗಳು, ಅಸಮಾಧಾನಗಳು, ಬೇಡಿಕೆಗಳಿರುತ್ತವೆ. ಆದರೆ ಅವುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ನಿಸ್ಸಿಮರು. ಅವರು ಆಸ್ಪತ್ರೆಯಲ್ಲಿದ್ದರೂ, ಇಲ್ಲದಿದ್ದರೂ ಕೆಲಸದ ಮಹತ್ವ ಒಂದೇ ಆಗಿರುತ್ತದೆ. ಆಸ್ಪತ್ರೆಗಳ ಬಗ್ಗೆ ಜನರ ಮನೋಭಾವ ಸ್ವಲ್ಪ ನಕಾರಾತ್ಮಕವಾಗಿದ್ದು, ಹಣ ಹೆಚ್ಚು ಖರ್ಚಾಗುತ್ತದೆ ಎಂಬ ಭಾವನೆ.  ಅದನ್ನು ಹೋಗಲಾಡಿಸಿ ಜನರಿಗೆ ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್‌ ಎಂ ದಯಾನಂದ ಅವರು ಹೇಳಿದರು.

ವಿಶ್ವ ಜನಸಂಪರ್ಕ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವದು ಸುಲಭವಲ್ಲ. ಆದರೆ ಜನಸಂಪರ್ಕ ಅಧಿಕಾರಿಗಳು ಸದಾಕಾಲ ಲಭ್ಯವಿದ್ದು, ರೋಗಿ, ವೈದ್ಯರು ಹಾಗೂ ಆಡಳಿತದೊಂದಿಗೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವದು ನಿರಂತರ ಪ್ರೇರಣೆಯಾಗಿದೆ. ಆಸ್ಪತ್ರೆ ನಡೆಸುವುದು ಸುಲಭವಲ್ಲ. ಹಲವಾರು ನಿಯಮಗಳು, ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ವಿಶೇಷ ಆರ್ಥಿಕ ಸಹಾಯ ಇಲ್ಲದಿದ್ದರೂ ಗುಣಮಟ್ಟದ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆಸ್ಪತ್ರೆಯ ಕ್ಲಿನಿಕಲ್‌ ಡೈರೆಕ್ಟರ ಡಾ ಮಾಧವ ಪ್ರಭು ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳು ಭಯಭೀತರಾಗಿರುತ್ತಾರೆ. ಜನಸಂಪರ್ಕ ಅಧಿಕಾರಿಗಳು ಸ್ನೇಹಪರವಾಗಿದ್ದು, ರೋಗಿಗಳಿ ಧೈರ್ಯ ನೀಡಿ ಸಾಂತ್ವನ ಹೇಳುವ ಕಾರ್ಯನಿರ್ಹವಣೆ ಅತ್ಯದ್ಭುತವಾಗಿದೆ. ದಿನವಿಡೀ ರೋಗಿಗಳಿಗೆ ಸಲಹೆ ನೀಡುತ್ತಾ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಿರುವದು ತುಂಬಾ ಶ್ಲಾಘನೀಯ. ಕೆಲವು ಸಂದರ್ಭಗಳಲ್ಲಿ ವಿವಾದಗಳು, ಗೊಂದಲಗಳು ಉಂಟಾದರೂ ಕೂಡ ಸಮರ್ಥವಾಗಿ ನಿಭಾಯಿಸಲಾಗುತ್ತದೆ. ವೈದ್ಯರು ಮಾತ್ರ ಎಲ್ಲವನ್ನೂ ನಿರ್ವಹಿಸಲು ಸಾಧ್ಯವಿಲ್ಲ. ರೋಗಿಗಳನ್ನು ಸಮಾಧಾನಪಡಿಸಿ, ಅವರಿಗೆ ನಂಬಿಕೆ ನೀಡುವುದು ಜನಸಂಪರ್ಕ ಅಧಿಕಾರಿಗಳ ಪ್ರಮುಖ ಪಾತ್ರ. ಭವಿಷ್ಯದಲ್ಲಿ ಮೆಡಿಕಲ್ ಟೂರಿಸಂ ಸೇರಿದಂತೆ ಹಲವಾರು ಹೊಸ ಅವಕಾಶಗಳು ಬರುತ್ತವೆ ಎಂದು ಹೇಳಿದರು.

ಆಸ್ಪತ್ರೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎನ್‌ ಲೋಕೇಶ ಅವರು ಪ್ರಾಸ್ತಾವಿಕವಾಗಿ ಮಾತನಾ̧ಡಿ, ಸಂಸ್ಥೆಗಳು ಮತ್ತು ಜನಸಾಮಾನ್ಯರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ,  ವಿಶ್ವಾಸ ಮತ್ತು ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡುವ ಕಾರ್ಯದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಜನರಿಗೆ ಅರಿವು ಮೂಡಿಸಿ, ಸಂಬಂಧಗಳನ್ನು ಬೆಸೆಯುವದರೊಂದಿಗೆ ಒಳ್ಳೆಯ ಪ್ರತಿಷ್ಠೆಯನ್ನು ಉಳಿಸುವ ಕಾರ್ಯ. ಮಾಧ್ಯಮ ಸಂಪರ್ಕ, ಸಂಕೀರ್ಣ ಪರಿಸ್ಥಿತಿ, ಕಾರ್ಯಕ್ರಮ ನಿರ್ವಹಣೆ, ಸಾಮಾಜಿಕ ಮಾಧ್ಯಮ ತಂತ್ರಗಳು ಮತ್ತು ವಿಷಯ ಸೃಷ್ಟಿ ಸೇರಿದಂತೆ ಹಲವು ಚಟುವಟಿಕೆಗಳನ್ನು ನಿಭಾಯಿಸುತ್ತಾರೆ. ಪರಿಣಾಮಕಾರಿ ಸಂವಹನದ ಮೂಲಕ ರೋಗಿ ಮತ್ತು ವೈದ್ಯರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಶಿವಾನಂದ ಖಾನಾಪೂರ ಹಾಗೂ ಸುನೀಲ ಶಿಂದೆ ಮಾತನಾಡಿದರು. ಸಮಾರಂಭದಲ್ಲಿ ಆಡಳಿತಾಧಿಕಾರಿಗಳಾದ ಡಾ. ರಾಜಶೇಖರ ಸೋಮನಟ್ಟಿ, ಡಾ. ಬಸವರಾಜ ಬಿಜ್ಜರಗಿ, ಹಿರಿಯ ಜನಸಂರ್ಕ ಅಧಿಕಾರಿ ವೀರಾ ಭವಾನೆ, ವಿನೋದ ದೇಶನೂರ ಉಪಸ್ಥಿತರಿದ್ದರು. ಜನಸಂಪರ್ಕಾಧಿಕಾರಿ ಬಸವರಾಜ ಸೊಂಟನವರ ಸ್ವಾಗತಿಸಿ, ನಿರೂಪಿಸಿದರು. ಸವಿತಾ ಕಲ್ಮಠ ವಂದಿಸಿದರು.


Spread the love

About Laxminews 24x7

Check Also

ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿರವಾಗಿದೆ: ಆರ್‌. ಅಶೋಕ್‌

Spread the loveಬೆಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವಿಪಕ್ಷ ನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ