ಬೆಂಗಳೂರು: ʻಬೆಂಗಳೂರು ಅಭಿವೃದ್ಧಿʼ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೋರಮಂಗಲದ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆಯ ಹಿಂದಿನ ಅಸಲಿ ಕಾರಣಗಳನ್ನ ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ.
ಯಾರ ಮನವೊಲಿಕೆಗೂ ಬಗ್ಗದ ರಾಮಲಿಂಗಾರೆಡ್ಡಿ, ʻನನ್ನ ನಿರ್ಧಾರ ಅಚಲ, ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲʼ ಎಂದು ಹಠ ಹಿಡಿದಿರುವುದು ಡಿಕೆಶಿ ಪಾಲಿಗೆ ಆರಂಭದಲ್ಲೇ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ರಾಜ್ಯ ನಾಯಕರಿಗೆ ನೀಡಿರುವ ಒಂದು ಸಾಲಿನ ಸಂದೇಶ ಕಳವಳ ಹುಟ್ಟುಹಾಕಿದೆ.
ರಾಜ್ಯಸಭಾ ಚುನಾವಣೆಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆ ರಾಹುಲ್ ಗಾಂಧಿ ಅವರಿಂದು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ರಾಮಲಿಂಗಾ ರೆಡ್ಡಿ ಅವರ ವಿಚಾರವನ್ನ ಸುರ್ಜೇವಾಲಾ, ವೇಣುಗೋಪಾಲ್ ಅವರು ರಾಗಾ ಗಮನಕ್ಕೆ ತಂದಿದ್ದಾರೆ. ಏನಿದೆ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದಾರೆ.
ಬಳಿಕ ಸಿಎಂ ಡಿಕೆಶಿಗೆ ರಾಹುಲ್ ಗಾಂಧಿ ಒನ್ ಲೈನ್ ಮೆಸೇಜ್ ಪಾಸ್ ಮಾಡಿದ್ದಾರೆ. ʻಚರ್ಚೆ ಮಾಡಿ ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ’ ಎಂದು ಖಡಕ್ಕಾಗಿ ಹೇಳಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರು ಖಾತೆಗೆ ಡಿಮ್ಯಾಂಡ್ ಯಾಕೆ..?
* ಬೆಂಗಳೂರು ಅಭಿವೃದ್ಧಿ ಖಾತೆ ಅತ್ಯಂತ ಪ್ರಭಾವಿ ಖಾತೆ
* ಈ ಖಾತೆ ವ್ಯಾಪ್ತಿಯಲ್ಲಿ 5 ಜಿಬಿಎ, ಬಿಎಂಆರ್‌ಸಿಲ್,
* BWSSB, ಬಿಡಿಎ ಕೂಡ ಬರಲಿದೆ
* ಬೆಂಗಳೂರು ಅಭಿವೃದ್ಧಿಗೆ ಸಿಗುವ ಅನುದಾನವೂ ಹೆಚ್ಚು
* ಬೆಂಗಳೂರಿನಲ್ಲಿ ಶೀಘ್ರವೇ ಟನೆಲ್ ಕಾಮಗಾರಿಯೂ ನಡೆಯಲಿದೆ
* ಫ್ಲೈಓವರ್ ಸೇರಿ ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ
* ಹೀಗಾಗಿ ಬೆಂಗಳೂರು ಅಭಿವೃದ್ಧಿ ಖಾತೆಗೆ ಭಾರೀ ಡಿಮ್ಯಾಂಡ್
* ಈ ಹಿಂದೆ ತಮ್ಮ ಬಳಿಯೇ ಖಾತೆ ಉಳಿಸಿಕೊಂಡಿದ್ದ ಡಿಕೆ
* ರಾಮಲಿಂಗಾರೆಡ್ಡಿ ವಾದವೇನು…?
> ನಾನು ಬೆಂಗಳೂರಿನ ಹಿರಿಯ ಶಾಸಕ
> 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ
> ಬೆಂಗಳೂರು ಅಭಿವೃದ್ಧಿಗೆ ನನ್ನ ಕೊಡುಗೆಯೂ ಇದೆ
> ಬಿಬಿಎಂಪಿ ಎಲೆಕ್ಷನ್‌ನಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದೇನೆ
> ನನಗೆ ಬೆಂಗಳೂರಿನ ಇಂಚಿಂಚು ಕೂಡ ಗೊತ್ತು.
Laxmi News 24×7