ಬೆಂಗಳೂರು: ರಾಜ್ಯ ಸರ್ಕಾರ 2026-31ನೇ ಸಾಲಿನ ಗ್ರಾಮ, ಜಿಲ್ಲಾ ಪಂಚಾಯತಿಗಳ ಚುನಾವಣೆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಆದಷ್ಟು ಬೇಗ ಮುಗಿಸುವಂತೆ ಹೈಕೋರ್ಟ್ ತಿಳಿಸಿದ್ದರೂ ಸಹ ಸರ್ಕಾರ ಮಾತ್ರ ಈವರೆಗೂ ಇದರ ವಿಚಾರವಾಗಿ ವಿಳಂಬ ಮಾಡುತ್ತಲೇ ಇದೆ. ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಜಿ.ಪಂ ಹಾಗೂ ತಾ.ಪಂಗಳ ಚುನಾವಣೆ ನಡೆಸಲು ಪದೇ ಪದೇ ವಿಳಂಬ ಆಗುತ್ತಿರುವ ಹಿನ್ನಲೆ ರಾಜ್ಯ ಸರ್ಕಾರ ನ್ಯಾಯಾಲಯದ ಮುಂದೆ ಕ್ಷಮೆಯಾಚಿಸಿದೆ.
ಅಲ್ಲದೇ ಇದೀಗ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗೆ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್ನಿಂದ ಸರ್ಕಾರ ಮತ್ತೆ 8 ವಾರಗಳ ಕಾಲಾವಕಾಶ ಕೇಳಿ ಪಡೆದಿದೆ.
ಮತ್ತೆ 8 ವಾರಗಳ ಸಮಯ ಕೇಳಿದ ಸರ್ಕಾರ:
ಹೌದು, ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಸದ್ಯಕ್ಕೆ ನಡೆಯುವುದು ಬಹುತೇಕ ಅನುಮಾನವಾಗಿದೆ. ರಾಜ್ಯ ಸರ್ಕಾರ ಈ ವಿಚಾರವಾಗಿ ಮತ್ತೆ ಪಂಚಾಯಿತಿಗಳ ಚುನಾವಣೆಗೆ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಹೈಕೋರ್ಟ್ನಿಂದ ಮತ್ತೆ 8 ವಾರಗಳ ಸಮಯಾವಕಾಶ ಪಡೆದಿದೆ. ಅಂದರೆ ಅಲ್ಲಿಗೆ 2 ತಿಂಗಳ ಸಮಯವನ್ನು ಕೇಳಿದೆ.
ಪಂಚಾಯತಿ ಚುನಾವಣೆ ಯಾವಾಗ?
ಈ ಮಧ್ಯೆ, ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಯನ್ನು ಅಖೈರು ಮಾಡಿ ಅಧಿಸೂಚನೆ ಹೊರಡಿಸಿದೆ. ಜೊತೆಗೆ ಸದಸ್ಯರ ಸ್ಥಾನಗಳಿಗೆ ಮೀಸಲು ನಿಗದಿಪಡಿಸಲು ಒಂದು ತಿಂಗಳು (30 ದಿನ) ಕಾಲಾವಕಾಶ ನೀಡಲಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಇದರ ನಡುವೆ ಸದ್ಯದ ಮಾಹಿತಿ ಪ್ರಕಾರ, ಮುಂದಿನ ಐದರಿಂದ ಆರು ತಿಂಗಳ ಬಳಿಕವೇ ಸರ್ಕಾರ ಗ್ರಾಮ್ ಪಂಚಾಯತಿ, ಜಿಲ್ಲಾ ಪಂಚಾಯತಿ ಹಾಗU ತಾಲೂಕು ಪಂಚಾಯತಿ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಂದರೆ ಬಹುತೇ ಈ ಎಲ್ಲಾ ಲೋಕಲ್ ಬಾಡಿ ಎಲೆಕ್ಷನ್ಗಳು ಡಿಸೆಂಬರ್ ನಂತರವೇ ನಡೆಯುವ ಸಾಧ್ಯತೆ ಇದೆ.
Karnataka Heavy Rain Alert: ಬೆಂಗಳೂರಲ್ಲಿ ಏಕಾಏಕಿ ಅಬ್ಬರಿಸಿದ ಮಳೆರಾಯ, ನಾಳೆ ಈ ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ; ಆರೆಂಜ್ ಅಲರ್ಟ್ ಘೋಷಣೆ
ಹೈಕೋರ್ಟ್ ಕ್ಷಮೆ ಕೋರಿದ ರಾಜ್ಯ ಸರ್ಕಾರ:
ಇನ್ನು, ಈ ರೀತಿ ಪದೇ ಪದೇ ಪಂಚಾಯತಿ ಚುನಾವಣೆಗಳನ್ನು ಮುಂದೂಡುತ್ತಿರುವ ಕಾರಣದಿಂದಾಗಿ ರಾಜ್ಯ ಸರ್ಕಾರ ಇದೀಗ ಹೈಕೋರ್ಟ್ ಎದುರು ಕ್ಷಮೆಯಾಚಿಸಿದೆ. ಕಳೆದ ಐದು ವರ್ಷಗಳಿಂದ ಬಾಕಿ ಇರುವ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿಗಳ ಚುನಾವಣೆ ನಡೆಸಲು ವಿಳಂಬ ಆಗಿರುವುದಕ್ಕೆ ನ್ಯಾಯಾಲಯದ ಕ್ಷಮೆ ಯಾಚಿಸಿರುವ ರಾಜ್ಯ ಸರ್ಕಾರ 8 ವಾರ ಕಾಲಾವಕಾಶ ಕೇಳಿ ಪಡೆದಿದೆ. ರಾಜ್ಯ ಚುನಾವಣಾ ಆಯೋಗವು ಸರ್ಕಾರದ ವಿರುದ್ಧ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ.ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ(ಜೂನ್.05ರಂದು) ವಿಚಾರಣೆ ನಡೆಸಿತು.
ಜುಲೈ 10ಕ್ಕೆ ಮತ್ತೆ ವಿಚಾರಣೆ:
ಸದ್ಯ ಅವದಿ ಮುಗಿದಿರುವ ರಾಜ್ಯದ ಬರೋಬ್ಬರಿ 5,950 ಗ್ರಾಮ ಪಂಚಾಯಿತಿಗಳಿಗೆ ಸರಿಯಾದ ಸಮಯದಲ್ಲಿ ಚುನಾವಣೆ ನಡೆಸಲು ಪೂರಕವಾಗಿ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಇದೀಗ ಸರ್ಕಾರ 8 ವಾರಗಳ ಸಮಯ ಕೇಳಿದ ಬಳಿಕ ನ್ಯಾಯಪೀಠ, ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ. ರಾಜ್ಯ ಚುನಾವಣಾ ಆಯೋಗವನ್ನು ಹಿರಿಯ ವಕೀಲ ಕೆ.ಎನ್.ಫಣೀಂದ್ರ ಪ್ರತಿನಿಧಿಸಿದ್ದರು.
Laxmi News 24×7